ʻವಿಕಸಿತ ಭಾರತʼಕ್ಕಾಗಿ ಪ್ರವಾಸೋದ್ಯಮ: ನಮ್ಮ ಚೊಚ್ಚಲ ‘ಇನ್ಕ್ರೆಡಿಬಲ್ ಇಂಡಿಯನ್’ ದೃಷ್ಟಿಕೋನ

Ravi Talawar
ʻವಿಕಸಿತ ಭಾರತʼಕ್ಕಾಗಿ ಪ್ರವಾಸೋದ್ಯಮ: ನಮ್ಮ ಚೊಚ್ಚಲ ‘ಇನ್ಕ್ರೆಡಿಬಲ್ ಇಂಡಿಯನ್’ ದೃಷ್ಟಿಕೋನ
WhatsApp Group Join Now
Telegram Group Join Now

ಒಂದು ದಶಕದ ಹಿಂದೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತದ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು. ಭಾರತ ಸಹ ಇತರ ರಾಷ್ಟ್ರಗಳ ಮಟ್ಟಕ್ಕೆ ಅಥವಾ ಅದಕ್ಕಿಂತಲೂ ಮೇಲಿನ ಮಟ್ಟಕ್ಕೆ ಏರಲು ಭಾರತೀಯ ಪ್ರವಾಸೋದ್ಯಮಕ್ಕೆ ಪ್ರಚಾರ ರಾಯಭಾರಿಗಳ (ಬ್ರಾಂಡ್ ಅಂಬಾಸಿಡರ್) ಅಗತ್ಯವಿದೆ ಎಂಬ ಮಾತು ಎಲ್ಲೆಡೆ ಸಾಮಾನ್ಯವಾಗಿ ಕೇಳಿ ಬರುತ್ತಿತ್ತು. ಇತರ ದೇಶಗಳು ತಮ್ಮ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರು ಮತ್ತು ಶ್ರೇಷ್ಠ ಕ್ರೀಡಾಪಟುಗಳನ್ನು ಆಕರ್ಷಿಸಲು ಜಾಹೀರಾತಿಗೆ ಹೇಗೆ ಹಣ ಸುರಿಯುತ್ತಿದ್ದವೋ, ಅದೇ ರೀತಿಯಲ್ಲಿ ಭಾರತದಲ್ಲೂ ʻಇನ್ಕ್ರೆಡಿಬಲ್ ಇಂಡಿಯಾʼದ ಪುನರುತ್ಥಾನ ಅಗತ್ಯವಿದೆ ಎಂಬ ಭಾವನೆ ಮನೆಮಾಡಿತ್ತು.

ಕಳೆದ ಒಂದು ದಶಕದಲ್ಲಿ ಮತ್ತು ಭಾರತದ ಕೇಂದ್ರ ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ವಹಿಸಿಕೊಂಡ 100 ದಿನಗಳ ನಂತರ, ಒಂದು ಮಾತನ್ನು ನಾನು ಎಲ್ಲರ ಬಾಯಲ್ಲೂ ಕೇಳುತ್ತಿದ್ದೇನೆ. “ಈ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಮ್ಮ ಪ್ರಧಾನಿಯಾಗುವ ಜೊತೆಗೆ ʻಇನ್ಕ್ರೆಡಿಬಲ್ ಇಂಡಿಯಾʼದ ಅತಿದೊಡ್ಡ ಜಾಗತಿಕ ಪ್ರಚಾರ ರಾಯಭಾರಿ ಮತ್ತು ಚಾಂಪಿಯನ್ ಕೂಡಾ ಆಗಿರುವ ನಾಯಕರೊಬ್ಬರನ್ನು ನಾವು ಹೊಂದಿದ್ದೇವೆ” ಎಂದು ಎಲ್ಲೆಡೆ ಮಾತನಾಡುತ್ತಾರೆ. ಗೌರವಾನ್ವಿತ ಪ್ರಧಾನಿಯವರು ಭಾರತದ ಸುಧಾರಣೆಗಾಗಿ ತಾವು ನಿರ್ವಹಿಸುವ ಪ್ರತಿಯೊಂದು ಕೆಲಸದಲ್ಲೂ, ಪ್ರವಾಸೋದ್ಯಮವು ಯಾವ ಕಾರಣಕ್ಕೂ ಹಿಂದುಳಿಯದಂತೆ ನೋಡಿಕೊಳ್ಳಲು ಎಷ್ಟರ ಮಟ್ಟಿಗೆ ಮುತುವರ್ಜಿ ವಹಿಸುತ್ತಾರೆ ಎಂಬುದನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ ಮತ್ತು ಅವರಿಂದ ಸ್ಫೂರ್ತಿ ಪಡೆದಿದ್ದೇನೆ.

ದೇಶದಲ್ಲಿ ಪ್ರವಾಸೋದ್ಯಮದ ಸಮಗ್ರ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ‘ಸಂಪೂರ್ಣ ಸರ್ಕಾರ’ವಾಗಿ ಕೆಲಸ ಮಾಡುವಂತೆ ಗೌರವಾನ್ವಿತ ಪ್ರಧಾನ ಮಂತ್ರಿಯಾಗಿ ಅವರು ನಮಗೆ ನಿರಂತರವಾಗಿ ನೆನಪಿಸುತ್ತಾರೆ. ಸುಮಾರು 1,50,000 ಕಿಲೋಮೀಟರ್ ರಸ್ತೆ ಜಾಲವನ್ನು ನಿರ್ಮಿಸಿದ್ದರ ಪರಿಣಾಮವಾಗಿ; 500 ಹೊಸ ವಾಯು ಮಾರ್ಗಗಳು ಮತ್ತು 150 ವಿಮಾನ ನಿಲ್ದಾಣಗಳ ಮೂಲಕ ವಾಯುಸಂಪರ್ಕವನ್ನು ವಿಸ್ತರಿಸಿದ ಪರಿಣಾಮವಾಗಿ; ಹೈಸ್ಪೀಡ್ ʻವಂದೇ ಭಾರತ್ʼ ರೈಲುಗಳನ್ನು ಪರಿಚಯಿಸಿದ ಮತ್ತು ಸುಮಾರು 100 ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ ಪರಿಣಾಮವಾಗಿ, ಭಾರತವು 250 ಕೋಟಿ ದೇಶೀಯ ಪ್ರವಾಸಿಗರ ಭೇಟಿಗಳನ್ನು (ಡಿಟಿವಿ) ದಾಖಲಿಸಿದೆ. ಇದು 2014ರಲ್ಲಿ ಭಾರತದಲ್ಲಿ ದಾಖಲಾದ 128 ಕೋಟಿ ದೇಶೀಯ ಪ್ರವಾಸಿ ಭೇಟಿಗೆ(ಡಿಟಿವಿ) ಹೋಲಿಸಿದರೆ ಎರಡು ಪಟ್ಟು ಅಧಿಕ.

ದೇಶದ ಜಾಗತಿಕ ಪ್ರತಿನಿಧಿಯಾಗಿ, ʻಇನ್ಕ್ರೆಡಿಬಲ್ ಇಂಡಿಯಾʼದ ಅದ್ಭುತಗಳನ್ನು ಜಗತ್ತಿಗೆ ಪ್ರದರ್ಶಿಸಲು ತಮಗೆ ದೊರೆತ ಯಾವ ಅವಕಾಶವನ್ನೂ ಅವರು ತಪ್ಪಿಸುವುದಿಲ್ಲ. ಅವರ ನಾಯಕತ್ವದಲ್ಲಿ ಭಾರತ ವಹಿಸಿದ ಜಿ20 ಅಧ್ಯಕ್ಷತೆಯು ವಿಶಿಷ್ಟವಾಗಿತ್ತು. ದೇಶಾದ್ಯಂತ 60 ವೈವಿಧ್ಯಮಯ ಸ್ಥಳಗಳಲ್ಲಿ ಜಿ20 ಸಭೆಗಳನ್ನು ನಡೆಸಿದ ಕಾರಣದಿಂದಾಗಿ ವಿಶಿಷ್ಟವೆನಿಸಿತು. ಈ 60 ತಾಣಗಳಲ್ಲಿನ ಪ್ರವಾಸೋದ್ಯಮ ಕೊಡುಗೆಗಳು, ಅವುಗಳ ಸಂಸ್ಕೃತಿಗಳು, ಪಾಕಪದ್ಧತಿಗಳು ಮತ್ತು ಕರಕುಶಲ ವಸ್ತುಗಳು ಭಾರತದ ಜಿ-20 ಅಧ್ಯಕ್ಷತೆಯ ಮೂಲಕ ಜಾಗತಿಕವಾಗಿ ಪ್ರದರ್ಶನಗೊಳ್ಳುವಂತೆ ಖಚಿತಪಡಿಸಿಕೊಳ್ಳುವುದು ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನವಾಗಿತ್ತು. ಕಳೆದವರ್ಷ, ಜಿ-20 ಅಧ್ಯಕ್ಷತೆಯಿಂದಾಗಿ ಉಂಟಾದ ಪ್ರವಾಸೋದ್ಯಮ ಉತ್ತುಂಗವು, ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 2023ರಲ್ಲಿ ಅತಿ ಹೆಚ್ಚು ಹೊಸ ಹೋಟೆಲ್ ಕೊಠಡಿಗಳ ಸೇರ್ಪಡೆಗೆ ಕಾರಣವಾಯಿತು ಎಂದು ತಿಳಿದು ಸಂತೋಷವಾಗಿದೆ.

ಜನನಾಯಕರಾಗಿ, ಮೋದಿ ಅವರು ನಮ್ಮ ಸ್ವಂತ ದೇಶವನ್ನು ಅನ್ವೇಷಿಸಲು ಜನರಿಗೆ ಪ್ರೇರಣೆ ತುಂಬಿದ್ದಾರೆ. ʻದೇಖೋ ಅಪ್ನಾ ದೇಶ್ʼ (ನಮ್ಮ ದೇಶವನ್ನು ನೋಡಿ) ಎಂದು ಕರೆ ನೀಡುವ ಮೂಲಕ ಜಗತ್ತನ್ನು ಅನ್ವೇಷಿಸುವ ಮೊದಲು ಭಾರತವನ್ನು ಸುತ್ತವಂತೆ ರಾಷ್ಟ್ರದ ಜನತೆಯನ್ನು ಪ್ರೇರೇಪಿಸಿದ್ದಾರೆ. ನಮ್ಮೆಲ್ಲರ ಮನಸ್ಸಿನಲ್ಲಿ ʻಸ್ವಚ್ಛತೆʼಯ ಮಹತ್ವವನ್ನು ಪ್ರತಿಷ್ಠಾಪಿಸುವ ಮೂಲಕ, ಜವಾಬ್ದಾರಿಯುತ ಪ್ರವಾಸೋದ್ಯಮವು ನಮ್ಮೆಲ್ಲರ ಸ್ವಭಾವವಾಗುವಂತೆ ಅವರು ಖಚಿತಪಡಿಸಿದ್ದಾರೆ. ಭಾರತದ ಪ್ರವಾಸವು ಎಷ್ಟು ಸ್ಮರಣೀಯವಾಗಿರುತ್ತದೆ ಎಂಬುದರ ಬಗ್ಗೆ ತಮ್ಮ ವಿದೇಶಿ ಸ್ನೇಹಿತರು ಮತ್ತು ಪರಿಚಿತರಿಗೆ ಅರಿವು ಮೂಡಿಸುವ ಮೂಲಕ, ʻಇನ್ಕ್ರೆಡಿಬಲ್ ಇಂಡಿಯಾʼದ ರಾಯಭಾರಿಗಳಾಗುವಲ್ಲಿ ಅನಿವಾಸಿ ಭಾರತೀಯರು ಹೇಗೆ ಪಾತ್ರ ವಹಿಸಬಹುದು ಎಂದು ನಿರಂತರವಾಗಿ ಪ್ರಧಾನಿ ಮೋದಿ ಅವರು ನೆನಪು ಮಾಡುತ್ತಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಜಾಗತಿಕ ನಾಯಕರಲ್ಲಿ ಒಬ್ಬರಾದ ಮೋದಿ ಅವರು ಲಕ್ಷದ್ವೀಪ, ಕಾಜಿರಂಗ, ಕನ್ಯಾಕುಮಾರಿ, ಶ್ರೀನಗರ ಮತ್ತು ಇತರ ಅನೇಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರಲ್ಲಿ ಅಂತಹ ಸ್ಥಳಗಳಿಗೆ ಭೇಟಿ ನೀಡುವ ಹಾಗೂ ಅದುವರೆಗೂ ಅಪರಿಚಿತವಾಗದ್ದ ಭಾರತದ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಲು ಇನ್ನಿಲ್ಲದ ಆಸಕ್ತಿ ಮೂಡಿಸಿದರು.

ಪ್ರವಾಸೋದ್ಯಮದ ಬಗ್ಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರ ವೈಯಕ್ತಿಕ ಆಸಕ್ತಿ ಮತ್ತು ಅದರಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಒತ್ತಿ ಹೇಳಲು ನಾನು ಅವರೊಂದಿಗಿನ ಪ್ರಸಂಗವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಅವರು ತಮ್ಮ ಸಂಪುಟದ ಪ್ರವಾಸೋದ್ಯಮ ಖಾತೆಯಲ್ಲಿ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡುವಾಗ, ತಮ್ಮ ಹೃದಯದ ಒಂದು ತುಣುಕನ್ನೇ ನನಗೆ ನೀಡುತ್ತಿರುವುದಾಗಿ ಹೇಳಿದ್ದನ್ನು ನಾನು ಪ್ರೀತಿಯಿಂದ ಈಗಲೂ ನೆನಪಿಸಿಕೊಳ್ಳುತ್ತೇನೆ. ಸಮಗ್ರ ಸಾಮಾಜಿಕ-ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಚಾಲಕ ಶಕ್ತಿಯಾಗುವಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಗುರುತಿಸಿರುವ ನಾನು, ಅಂದಿನಿಂದ, ಭಾರತದಲ್ಲಿ ಪ್ರವಾಸೋದ್ಯಮಕ್ಕೆ ವ್ಯವಹಾರ ಯೋಜನೆಯನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದೇನೆ.

ಮೂಲಸೌಕರ್ಯ ಬೆಳವಣಿಗೆಯಲ್ಲಿ ಭಾರತವು ಸಾಧಿಸುತ್ತಿರುವ ತ್ವರಿತ ಬೆಳವಣಿಗೆಯ ಲಾಭವನ್ನು ಪಡೆಯುವ ಮೂಲಕ, ಹೊಸ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಪಡಿಸುವುದು ಈ ವ್ಯವಹಾರ ಯೋಜನೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ʻನವ ಭಾರತʼವನ್ನು ಪ್ರತಿನಿಧಿಸುವ ಮೂಲಕ ಮತ್ತು ನಮ್ಮ ಅದ್ಭುತವಾದ ಗತದಿಂದ ಸ್ಫೂರ್ತಿ ಪಡೆಯುವ ಮೂಲಕ, ಈ ಹೊಸ ತಾಣಗಳು ಪ್ರವಾಸಿಗರ ಒಟ್ಟಾರೆ ಅನುಭವವನ್ನು ಸಮಗ್ರ ರೀತಿಯಲ್ಲಿ ಹೆಚ್ಚಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. 1947ರಿಂದ 2014 ರವರೆಗೆ ನಮ್ಮ ಸ್ವಾತಂತ್ರ್ಯದ ನಂತರ, ಭಾರತದಲ್ಲಿ ಪ್ರವಾಸಿ ತಾಣವೊಂದನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಿದ ಒಂದೇ ಒಂದು ಉದಾಹರಣೆಯೂ ಇಲ್ಲ. 2018ರಲ್ಲಿ ಗೌರವಾನ್ವಿತ ಪ್ರಧಾನಿಯವರು ʻಏಕತಾ ನಗರʼ ಮತ್ತು ʻಏಕತಾ ಪ್ರತಿಮೆʼಯನ್ನು ಜಗತ್ತಿಗೆ ನೀಡಿದ ಬಳಿಕ ಇದು ಬದಲಾಯಿತು.

ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಕೋನದ ಆಧಾರದ ಮೇಲೆ ʻಏಕತಾ ನಗರʼದಲ್ಲಿ ಪ್ರವಾಸೋದ್ಯಮವನ್ನು ಪ್ರಧಾನವಾಗಿ ಅಭಿವೃದ್ಧಿಪಡಿಸಲು ನಾನಾ ಕ್ರಮಗಳು ಮತ್ತು ಉಪಕ್ರಮಗಳನ್ನು ಕೈಗೊಳ್ಳಲಾಯಿತು. ದೈನಂದಿನ ಆಧಾರದ ಮೇಲೆ ಪ್ರವಾಸಿ ತಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ವಿಶೇಷ ʻಏಕತಾ ಪ್ರತಿಮೆ ಪ್ರದೇಶ ಅಭಿವೃದ್ಧಿ ಮತ್ತು ಆಡಳಿತ ಪ್ರಾಧಿಕಾರʼವನ್ನು ಸ್ಥಾಪಿಸಲಾಯಿತು. ಜೊತೆಗೆ ಕೊನೆಯ ಮೈಲಿ ಸಂಪರ್ಕವನ್ನು ಖಚಿತಪಡಿಸಲಾಯಿತು. ಪ್ರವಾಸೋದ್ಯಮ ಸಂಬಂಧಿತ ಸೇವೆಗಳು ಮತ್ತು ಕಾರ್ಯಗಳ ಬಗ್ಗೆ ಸ್ಥಳೀಯರು ಮತ್ತು ಯುವಕರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಗುಣಮಟ್ಟದ ಹೋಟೆಲ್ಗಳು, ರೆಸಾರ್ಟ್ಗಳು ಮತ್ತು ಇತರ ವಸತಿ ಸೌಕರ್ಯಗಳನ್ನು ಸ್ಥಾಪಿಸಲು ಖಾಸಗಿ ಹೂಡಿಕೆಗಳನ್ನು ಉತ್ತೇಜಿಸಲಾಯಿತು. ವಿವಿಧ ವಿಷಯಾಧಾರಿತವಾಗಿ ʻಪಿಪಿಪಿʼ ಮಾದರಿಯಲ್ಲಿ ಹಲವಾರು ಹೊಸ ಆಕರ್ಷಣೆಗಳು, ಚಟುವಟಿಕೆಗಳು ಮತ್ತು ಅನುಭವ ಕೇಂದ್ರಗಳನ್ನು ಪರಿಚಯಿಸಲಾಯಿತು. ಈ ಎಲ್ಲ ಕಾರಣಗಳಿಂದಾಗಿ, ʻಏಕತಾʼ ನಗರದಲ್ಲಿ ಪ್ರವಾಸಿಗರ ಸಂಖ್ಯೆ 2018ರಲ್ಲಿ 4.5 ಲಕ್ಷದಿಂದ 2023 ರಲ್ಲಿ45 ಲಕ್ಷಕ್ಕೆ ಏರಿದೆ – ಅಂದರೆ, ಇದು 10 ಪಟ್ಟು ಹೆಚ್ಚಳವಾಗಿದೆ. ಅಲ್ಲದೆ, ಈ ಎಲ್ಲಾ ಪ್ರಯತ್ನಗಳು ʻಏಕತಾʼ ನಗರದಲ್ಲಿ ಸ್ಥಳೀಯರಿಗೆ ಹೊಸ ಜೀವನೋಪಾಯವನ್ನು ಸೃಷ್ಟಿಸಲು ಕಾರಣವಾಗಿದೆ. 2014ಕ್ಕಿಂತ ಮೊದಲು ಈ ಪ್ರದೇಶದಲ್ಲಿ ಇಂತಹ ಪ್ರವಾಸೋದ್ಯಮ ಆರ್ಥಿಕತೆಯು ಅಸ್ತಿತ್ವದಲ್ಲೇ ಇರಲಿಲ್ಲ. ʻಏಕತಾ ನಗರʼದ ಮೂಲಕ, ಗೌರವಾನ್ವಿತ ಪ್ರಧಾನ ಮಂತ್ರಿಗಳು ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಂದು ಮಾದರಿಯನ್ನು ನಮಗೆ ನೀಡಿದರು – ಈ ಮಾದರಿಯನ್ನು ದೇಶಾದ್ಯಂತ ಪುನರಾವರ್ತಿಸಬಹುದು ಮತ್ತು ಅಂತಹ ಅಪ್ರತಿಮ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬಹುದು.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ಥಾಪಿಸಿದ ಮಾದರಿಯಿಂದ ಪ್ರೇರಣೆ ಪಡೆದು, ʻಸ್ವದೇಶ ದರ್ಶನʼ ಮತ್ತು ʻಅಪ್ರತಿಮ ಪ್ರವಾಸಿ ತಾಣʼಗಳ ಅಭಿವೃದ್ಧಿಯಂತಹ ವಿವಿಧ ಯೋಜನೆಗಳನ್ನು ಪ್ರವಾಸೋದ್ಯಮ ಸಚಿವಾಲಯ ಕೈಗೊಂಡಿದೆ. ಆ ಮೂಲಕ, ಆಯ್ದ ತಾಣಗಳನ್ನು ‘ಸಂಪೂರ್ಣ ಸರ್ಕಾರ’ ವಿಧಾನದಲ್ಲಿ ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ದೇಶದಲ್ಲಿ ಪ್ರವಾಸೋದ್ಯಮ ಸಂಬಂಧಿತ ತಾಣ ಅಭಿವೃದ್ಧಿಗೆ ಚಾಲನೆ ನೀಡುತ್ತಿದೆ. ಗಮ್ಯಸ್ಥಾನಗಳಲ್ಲಿ ಒಟ್ಟಾರೆ ಸಂದರ್ಶಕರ ಅನುಭವವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಮಧ್ಯಸ್ಥಿಕೆಗಳನ್ನು ಪರಿಚಯಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕ ಹೂಡಿಕೆಗಳಿಗೆ ಪೂರಕವಾಗಿ ಖಾಸಗಿ ಹೂಡಿಕೆಗಳನ್ನು ಸಕ್ರಿಯಗೊಳಿಸುವತ್ತ ವಿಶೇಷ ಗಮನ ಹರಿಸಲಾಗುತ್ತಿದೆ, ಈ ದ್ವಿಮುಖ ಉಪಕ್ರಮವು ಭಾರತದಲ್ಲಿ ಪ್ರವಾಸೋದ್ಯಮ ಸಂಬಂಧಿತ ತಾಣ ಅಭಿವೃದ್ಧಿಗೆ ಸಂಯೋಜಿತ ಶಕ್ತಿಯಾಗಿ ಕಾರ್ಯನಿರ್ವಹಿಸಬಹುದು. ಈ ತಾಣಗಳಲ್ಲಿ ಸಚಿವಾಲಯದ ವಿವಿಧ ಉಪಕ್ರಮಗಳ ಮೂಲಕ, ಕೌಶಲ್ಯ ಮತ್ತು ಡಿಜಿಟಲೀಕರಣದಂತಹ ಪ್ರವಾಸೋದ್ಯಮ ಸುಧಾರಣೆ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ, ಇದರಿಂದ ಪ್ರವಾಸೋದ್ಯಮದ ಪ್ರಯೋಜನಗಳು ನಿರ್ದಿಷ್ಟ ತಾಣದಲ್ಲೇ ಉಳಿಯುತ್ತವೆ ಮತ್ತು ಸ್ಥಳೀಯ ಸಮುದಾಯಗಳು ಮತ್ತು ವ್ಯಕ್ತಿಗಳಿಗೆ ಅವು ಲಭ್ಯವಾಗುತ್ತವೆ.

ಗೌರವಾನ್ವಿತ ಪ್ರಧಾನ ಮಂತ್ರಿಯವರ ʻಜನ ಭಾಗೀದಾರಿʼ (ನಾಗರಿಕ ಪಾಲ್ಗೊಳ್ಳುವಿಕೆ) ದೃಷ್ಟಿಕೋನದಿಂದ ಪ್ರೇರಿತವಾಗಿ, ಸಚಿವಾಲಯವು ʻದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024ʼ ಅನ್ನು ಪ್ರಾರಂಭಿಸಿದೆ – ಇದು ಜನರು 5 ವಿಭಾಗಗಳಲ್ಲಿ ಭಾರತದಲ್ಲಿರುವ ತಮ್ಮ ಅತ್ಯಂತ ಆದ್ಯತೆಯ ಪ್ರವಾಸಿ ಆಕರ್ಷಣೆಗಳು ಮತ್ತು ತಾಣಗಳನ್ನು ತಿಳಿಸಲು ರಾಷ್ಟ್ರವ್ಯಾಪಿ ನಡೆಸುವ ಸಮೀಕ್ಷೆಯಾಗಿದೆ. ನಮ್ಮ ಮುಂದಿನ ಪ್ರಯತ್ನಗಳಲ್ಲಿ ಜನರ ಧ್ವನಿಗೆ ಒತ್ತು ನೀಡಲು, ʻಪೀಪಲ್ಸ್ ಚಾಯ್ಸ್ 2024ʼರಲ್ಲಿ ಅಗ್ರಸ್ಥಾನದಲ್ಲಿರುವ ತಾಣಗಳನ್ನು ಜಾಗತಿಕ ಪ್ರವಾಸೋದ್ಯಮ ತಾಣಗಳಾಗಿ ಪರಿವರ್ತಿಸಲು ವಿಶೇಷ ಬೆಂಬಲ ಮತ್ತು ಧನಸಹಾಯವನ್ನು ನೀಡಲಾಗುತ್ತಿದೆ.

ಗೌರವಾನ್ವಿತ ಪ್ರಧಾನ ಮಂತ್ರಿಗಳು ತಮ್ಮ ʻವಿಕಸಿತ ಭಾರತʼ ದೃಷ್ಟಿಕೋನವನ್ನು ನಮಗೆ ನೆನಪಿಸದ ಒಂದೇ ಒಂದು ದಿನವೂ ಇಲ್ಲ. ಪ್ರವಾಸೋದ್ಯಮವು, ಆ ಭವ್ಯ ಆಶಯ ಸಾಧನೆಗೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೊಡುಗೆ ನೀಡಲು ನಮಗೆ ದಾರಿ ಮಾಡಿಕೊಡುತ್ತದೆ. ಈ ಆಶಯವನ್ನು ಸಾಧಿಸಲು ಕೈಜೋಡಿಸುವಂತೆ ಮತ್ತು ಆ ಮೂಲಕ ನಾವು ಸಹ ನಮ್ಮ ಗೌರವಾನ್ವಿತ ಪ್ರಧಾನಿಯವರಂತೆ ‘ಇನ್ಕ್ರೆಡಿಬಲ್ ಇಂಡಿಯನ್ʼ ಎಂಬ ಬಿರುದಿಗೆ ಅರ್ಹರಾಗೋಣ ಎಂದು ʻವಿಶ್ವ ಪ್ರವಾಸೋದ್ಯಮ ದಿನʼದಂದು ಎಲ್ಲರಿಗೂ ಕರೆ ನೀಡುತ್ತಿದ್ದೇನೆ.

ಲೇಖಕರು: ಶ್ರೀ ಗಜೇಂದ್ರ ಸಿಂಗ್ ಶೇಖಾವತ್ಕೇಂ

ದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು, ಭಾರತ ಸರ್ಕಾರ

WhatsApp Group Join Now
Telegram Group Join Now
Share This Article