ದುಬೈನಲ್ಲಿ ಧಾರಾಕಾರ ಮಳೆ: ವಿಮಾನ ನಿಲ್ದಾಣಗಳು ಜಲಾವೃತ, ಸಂಚಾರ ಅಸ್ತವ್ಯಸ್ತ!

Ravi Talawar
ದುಬೈನಲ್ಲಿ ಧಾರಾಕಾರ ಮಳೆ: ವಿಮಾನ ನಿಲ್ದಾಣಗಳು ಜಲಾವೃತ, ಸಂಚಾರ ಅಸ್ತವ್ಯಸ್ತ!
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್ 17: ದುಬೈ ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿಮಾನ ನಿಲ್ದಾಣಗಳು ಜಲಾವೃತಗೊಂಡಿದ್ದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಏ.16 ರಿಂದ ಭಾರತ, ಪಾಕ್, ಸೌದಿ, ಬ್ರಿಟನ್ ಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಪ್ರವಾಹ ಪರಿಸ್ಥಿತಿಯ ಕಾರಣದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 25 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಶಾಲೆಗಳನ್ನು ಮುಚ್ಚಲಾಯಿತು.

ದುಬೈ ನಲ್ಲಿ ಮಳೆಗಾಗಿ ಇತ್ತೀಚೆಗೆ ಮೋಡಬಿತ್ತನೆ ಮಾಡಲಾಗಿತ್ತು. ಮಂಗಳವಾರ ಸಂಜೆ 100 ಕ್ಕೂ ಹೆಚ್ಚು ವಿಮಾನಗಳ ಆಗಮನವನ್ನು ನಿರೀಕ್ಷಿಸುತ್ತಿದ್ದ ದುಬೈ ವಿಮಾನ ನಿಲ್ದಾಣ ಚಂಡಮಾರುತದಿಂದ ಉಂಟಾದ ಅವ್ಯವಸ್ಥೆಯಲ್ಲಿ ತನ್ನ ಕಾರ್ಯಾಚರಣೆಯನ್ನು ಸಂಕ್ಷಿಪ್ತವಾಗಿ ಸ್ಥಗಿತಗೊಳಿಸುವ ಅಸಾಮಾನ್ಯ ನಿರ್ಧಾರ ತೆಗೆದುಕೊಂಡಿತು.

ಯುಎಇ ಮತ್ತು ಬಹ್ರೇನ್‌ನಾದ್ಯಂತ ಪ್ರವಾಹಕ್ಕೆ ಕಾರಣವಾದ ಧಾರಾಕಾರ ಮಳೆಯಿಂದ ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈ ನಿಷ್ಕ್ರಿಯಗೊಂಡಿದೆ ಮತ್ತು ಒಮಾನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.

WhatsApp Group Join Now
Telegram Group Join Now
Share This Article