ನಾಳೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಿರೇಬಾಗೇವಾಡಿಯ ನೂತನ ಆವರಣದಲ್ಲಿ ನೂತನ ಆವರಣ ಕಟ್ಟಡಗಳು, ಸಂಶೋಧನಾ ಕೇಂದ್ರ ಮತ್ತು ರಸ್ತೆ ಶಂಕು ಸ್ಥಾಪನೆ ಕಾರ್ಯಕ್ರಮ

Pratibha Boi
WhatsApp Group Join Now
Telegram Group Join Now

ಬೆಳಗಾವಿ, ಅ.೦೨: ಹಿರೇ ಬಾಗೇವಾಡಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಿರೇ ಬಾಗೇವಾಡಿಯ ನೂತನ ಆವರಣದಲ್ಲಿ ಶಿಲಾನ್ಯಾಸ ಸಮಾರಂಭ ನೂತನ ಆವರಣ ಕಟ್ಟಡಗಳು, ಸಂಶೋಧನಾ ಕೇಂದ್ರ ಮತ್ತು ರಸ್ತೆ ಶಂಕು ಸ್ಥಾಪನೆ ಕಾರ್ಯಕ್ರಮ ಶನಿವಾರ, ೪ ಅಕ್ಟೋಬರ್ ೨೦೨೫, ಬೆಳಿಗ್ಗೆ ೧೧.೩೦ ಗಂಟೆಗೆ ಬಿಮ್ಸ್ ಸಿವಿಲ್ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಸೆಂಟರ್ ಆವರಣದಲ್ಲಿ ನಡೆಯಲಿದೆ.ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಿರೇಬಾಗೇವಾಡಿ ಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ ಶಿಲಾನ್ಯಾಸ ಸಮಾರಂಭವನ್ನು ನೆರವೇರಿಸಲಿದ್ದಾರೆ.ಈ ಸಮಾರಂಭವು ಮಲ್ಟಿ-ಡಿಸಿಪ್ಲಿನರಿ ಎಜುಕೇಶನ್ & ರಿಸರ್ಚ್ ಯೂನಿವರ್ಸಿಟಿ (ಒಇಖU) ಯೋಜನೆಯ ಅಡಿಯಲ್ಲಿ ವಿವಿಧ ಪ್ರಮುಖ ಕಟ್ಟಡ ಕಾಮಗಾರಿಗಳ ಪ್ರಾರಂಭವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ೧೦೦ ಕೋಟಿ ರೂಪಾಯಿಗಳ ಅನುದಾನದಲ್ಲಿ ನಡೆಯುತ್ತಿದೆ.
ಕಾಮಗಾರಿಗಳ ವಿವರ:ಕೇಂದ್ರೀಯ ಸಂಶೋಧನಾ ಕೇಂದ್ರ (ಅeಟಿಣಡಿಚಿಟ ಖeseಚಿಡಿಛಿh ಅeಟಿಣeಡಿ), ಕಿತ್ತೂರು ರಾಣಿ ಚೆನ್ನಮ್ಮ ಅಧ್ಯಯನ ಪೀಠ, ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ, ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅಧ್ಯಯನ ಪೀಠ, ಕನ್ನಡ, ಇಂಗ್ಲಿಷ್ ಮತ್ತು ಇತರೆ ಭಾಷೆಗಳ ಅಧ್ಯಯನಕ್ಕೆ “Sಛಿhooಟ oಜಿ ಐಚಿಟಿguಚಿges” ಕಟ್ಟಡ ಸೇರಿದಂತೆ ಒಟ್ಟು ಅನುದಾನದಲ್ಲಿ ೬೮ ಕೋಟಿ ರೂ. ಕಟ್ಟಡ ನಿರ್ಮಾಣಕ್ಕೆ, ಉಳಿದ ೩೨ ಕೋಟಿ ರೂ. ವೈಜ್ಞಾನಿಕ ಉಪಕರಣಗಳು ಮತ್ತು ಸಂಶೋಧನಾ ಸಾಧನಗಳ ಖರೀದಿಗೆ ಮೀಸಲಾಗಿವೆ.
ಅಭಿವೃದ್ಧಿಯ ಗುರಿಗಳು:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸುವುದು, ಓಂಂಅ ಮತ್ತು ಓIಖಈ ರ್ಯಾಂಕಿಂಗ್‌ನಲ್ಲಿ ಉತ್ತಮ ಸ್ಥಾನ ಗಳಿಸುವುದು, ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು ೧,೬೫,೦೦೦ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉನ್ನತಿಗೆ ನೆರವಾಗುವುದು, ಸೈನ್ಸ್ ಸಿಟಿ ಮಾದರಿಯಲ್ಲಿ ಮಾದರಿ ಎಜುಕೇಶನ್ ಹಬ್ ರೂಪಿಸುವುದು, IIಖಿ ಧಾರವಾಡ, IIIಖಿ ಧಾರವಾಡ, ಕರ್ನಾಟಕ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಉತ್ತರ ಕರ್ನಾಟಕದ ಇತರೆ ವಿಶ್ವವಿದ್ಯಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಕಾರ ವೃದ್ಧಿಸುವುದು. ಇದರ ಜೊತೆಗೆ, ನೂತನ ಆವರಣಕ್ಕೆ ಶಾಶ್ವತ ಸಂಪರ್ಕ ಕಲ್ಪಿಸಲು, ರಾಷ್ಟ್ರೀಯ ಹೆದ್ದಾರಿಯಿಂದ ಖಅU ಆವರಣಕ್ಕೆ ೯.೫ ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ಇದಕ್ಕೆ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹಕಾರ ಮತ್ತು ವಿಶೇಷ ಕಾಳಜಿಯಿಂದ ಅನುದಾನ ಮಂಜೂರಾಗಿದ್ದು, ಸದರಿ ಕಾಮಗಾರಿಯ ಶಂಕುಸ್ಥಾಪನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.
ಉನ್ನತ ಶಿಕ್ಷಣ ಸಚಿವರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿ.ಎಂ ತ್ಯಾಗರಾಜ್ ಇವರು ಮತ್ತು ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

WhatsApp Group Join Now
Telegram Group Join Now
Share This Article