ಸವದತ್ತಿ: ರಾಷ್ಟ್ರೀಯ ಅರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನಿಗಳ ಸಂಘ ಬೆಳಗಾವಿ, ವಿವಿಧ ಸಂಘಟನೆಗಳ, ಇಲಾಖೆಗಳ ಸಹಯೋಗದೊಂದಿಗೆ ನಾಳೆ ರವಿವಾರ ದಿ. 23-03-2025 ರಂದು ಬೆಳಿಗ್ಗೆ 8 ರಿಂದ ಸಂಜೆ 5-30 ರವರೆಗೆ ಸವದತ್ತಿಯ ತಾಲೂಕಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಬೃಹತ ಅರೋಗ್ಯ ಮೇಳ ನೆರವೇರಲಿದೆ.ಈ ಒಂದು ಬೃಹತ್ ಮೇಳದಲ್ಲಿ ಹೃದಯ, ದಂತ, ಮಕ್ಕಳ, ಸ್ತ್ರೀರೋಗ, ಎಲುಬು ಕಿಲು, ನೇತ್ರ, ಚರ್ಮ, ಆಯುಷ್ ಪದ್ಧತಿ, ಶ್ವಾಸಕೋಶ, ಕ್ಯಾನ್ಸರ್, ಇನ್ನೂ ಅನೇಕ ವಿಭಾಗಗಳ ಪರೀಕ್ಷೆ, ಪರಿಹಾರ, ಎಕ್ಷ ರೆ, ಈ ಸಿ ಜಿ, ಎಲ್ಲ ರಕ್ತ ತಪಾಸಣಾ ಈ ಸಿಭಿರದಲ್ಲಿಸಾರ್ವಜನಿಕರು ಪಡೆಯಬಹುದು.40 ಬೃಹತ್ ಕೊಠಡಿಗಳ ಎಲ್ಲ ಸೌಲಭ್ಯ ಹೊಂದಿರುವ ಅರೋಗ್ಯ ಸೌಲಭ್ಯ ಪಡೆಯಲು ಪಡೆಯಬಹುದು.
ಈ ಕಾರ್ಯಕ್ರಮವನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಉದ್ಘಾಟಿಸಲಿದ್ದು. ಘನ ಉಪಸ್ಥಿತಿ ರಾಜ್ಯ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಮುಖ್ಯ ಅಥಿತಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಅಧ್ಯಕ್ಷತೆಯನ್ನು ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ ವಹಿಸುವರು. ಹಾಗೂ ಸಂಸದರಾದ ಜಗದೀಶ್ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲೆಯ ಶಾಸಕರು, ವಿ ಪ ಸದಸ್ಯರು ಪಾಲ್ಗೊಳಲಿದ್ದು .ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಪ್ರಧಾನ್ ಕಾರ್ಯದರ್ಶಿಗಳಾದ ಹರ್ಷ ಗುಪ್ತ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಐ ಪಿ ಗಡಾದ, ತಾಲೂಕಾ ಅರೋಗ್ಯ ಅಧಿಕಾರಿಗಳಾದ ಶ್ರೀಪಾದ ಶಭನಿಷ , ಜಿಲ್ಲೆಯ ಎಲ್ಲ ಕಾರ್ಯಕ್ರಮ ಅನುಷ್ಠಾನ, ತಾಲೂಕಾ ಅಧಿಕಾರಿಗಳು, ತಜ್ಞ ವೈದ್ಯಾಧಿಕಾರಿಗಳು, ಅರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸುವರು.