ಬೈಲಹೊಂಗಲ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ, ಸಂಪನ್ಮೂಲಗಳ ಕೇಂದ್ರ ಬೈಲಹೊಂಗಲ ಹಾಗೂ ಸಂಪಗಾವಿಯ ಆರ್.ಇ.ಎಸ್ ಪ್ರೌಡಶಾಲೆಯ ಸಹಯೋಗದಲ್ಲಿ ಸೆ.೨ ಮಂಗಳವಾರ ಸಂಪಗಾವಿಯಲ್ಲಿ ವಿಜ್ಞಾನದ ಗೋಷ್ಠಿ, ವಿಜ್ಞಾನ ನಾಟಕ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ ನಡೆಯಲಿವೆ. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಇಲಾಖೆಯ ಅಧಿಕಾರಿಗಳು ಬಾಗವಹಿಸಲಿದ್ದಾರೆ ಎಂದು ವಿಜ್ಞಾನ ನೋಡಲ್ ಅಧಿಕಾರಿ ಎಮ್.ಎನ್.ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.