ಇಂಡಿ : ಶಾಸಕ ಯಶವಂತಗೌಡ ಪಾಟೀಲರು ಚಿಕ್ಕಮಣೂರ,ಅಗರಖೇಡ, ಗುಬ್ಬೆವಾಡ, ಶಿರಗೂರ ಇನಾಂ ಮತ್ತು ಬರಗುಡಿ ಗ್ರಾಮಗಳಿಗೆ ಭೇಟ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ವಿಕ್ಷಿಸಿದರು.
ಈಗಾಗಲೇ ನದಿ ದಂಡೆಗಿರುವ ೧೨ ಗ್ರಾಮಗಳ ಸಾವಿರಾರು ಹೆಕ್ಟರ ಭೂ ಪ್ರದೇಶ ಜಲಾವೃತಗೊಂಡಿದೆ. ಅದರಲ್ಲಿಯ ಹತ್ತಿ, ಉಳ್ಳಾಗಡ್ಡೆ,ಮೆಕ್ಕೆಜೋಳ, ಕಬ್ಬು ಸಂಪೂರ್ಣವಾಗಿ ಹಾಳಾಗಿದೆ.
ಕಳೆದೊಂದು ವಾರದಿಂದ ಭೀಮೆಯ ರುದ್ರ ನರ್ತನೆ ಮುಂದುವರೆದಿದ್ದು ಕಳೆದ ಮೂರು ದಿನಗಳಿಂದ ಅದರ ಪ್ರಮಾಣ ಹೆಚ್ಚಾಗಿದೆ.
ತಾಲೂಕಿನ ಎಲ್ಲ ಅಧಿಕಾರಿಗಳ ಜೊತೆ ಭೇಟಿ ನೀಡಿದ ಶಾಸಕರು ಜನರಕಷ್ಟಗಳನ್ನು ಆಲಿಸಿ ಸೂಕ್ತ ಕ್ರಮ ವಹಿಸಲು ತಕ್ಷಣವೇ ವರದಿ ಸಲ್ಲಿಸಿ ಎಂದು ಶಾಸಕರು ಹೇಳಿದರು.
ಪ್ರತಿ ಮನೆಗಳಿಗೆ ಭೇಟಿ ನೀಡಿದ ಶಾಸಕರು ಸಾರ್ವಜನಿಕ ಸಮಸ್ಯೆ ಆಲಿಸಿ ಮನೆ ಬಿದ್ದದ್ದನ್ನು ವಿಕ್ಷೀಸಿದರು.
ಸರಕಾರಿ ಶಾಲೆಗಳು ಸೋರುವದನ್ನು ವೀಕ್ಷಿಸಿದರು, ರಸ್ತೆ ಹಾಳಾಗಿರುವದನ್ನು ವಿಕ್ಷಿಸಿ ಸರಕಾರದ ಗಮನಕ್ಕೆ ತರುವದಾಗಿ ತಿಳಿಸಿದರು.
ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆಗೆಯಲಾಗಿದ್ದು ಪ್ರವಾಹ ಪೀಡಿತರನ್ನು ಗುರುತಿಸಿ ನಿಗಾವಹಿಸಬೇಕು. ನದಿ ಪಾತ್ರಕ್ಕೆ ಜನ ಜಾನುವಾರು ಇಳಿಯದಂತೆ ಎಚ್ಚರ ವಹಿಸಬೇಕೆಂದು ಕೇಳಿಕೊಂಡರು.
ಇಂದು ಮುಖ್ಯಮಂತ್ರಿ ಕಲಬುರಗಿ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದು ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಇಂಡಿಯೂ ವೈಮಾನಿಕ ಸಮೀಕ್ಷೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಕಂದಾಯ ಉಪವಿಬಾಗಾಧಿಕಾರಿ ಅನುರಾಧಾ ವಸ್ತçದ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ವಲಯ ಅರಣ್ಯ ಅಧಿಕಾರಿ ಎಸ್.ಜಿ.ಸಂಗಾಲಕ, ಪಶು ಸಂಗೋಪನೆ ಇಲಾಖೆಯ ರಾಜಕುಮಾರ ಅಡಕಿ, ಇಒ ಬೀಮಾಶಂಕರ ಕನ್ನೂರ, ಮಂಜುನಾಥ ಧುಳೆ, ದಯಾನಂದ ಮಠ, ಮತ್ತಿತರಿದ್ದರು.
ಕೋಟ
ನಿರಂತರ ಮಳೆ ಹಾಗೂ ಭೀಮಾ ಪ್ರವಾಹದಿಂದ ತಾಲೂಕಿನಲ್ಲಿ ನದಿ ತೀರದ ಹಲವಾರು ಗ್ರಾಮಗಳು ಸಾಕಷ್ಟು ಹಾನಿಯಾಗಿವೆ. ಈ ಸಂಬoಧ ವರದಿ ಸಿದ್ದಪಡಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವದು . ಕೇಂದ್ರದ ಎನ್.ಡಿ.ಆರ್.ಎಫ್ ನಿಯಮದಂತೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವದು.