ಇಂದು ಕಂಪ್ಯೂಟರ್ ಮತ್ತು ಇಂಗ್ಲೀಷ ಭಾಷೆ ಜ್ಞಾನ ಮುಖ್ಯ : ಶಾಸಕ ನಿಖಿಲ್ ಕತ್ತಿ

Ravi Talawar
ಇಂದು ಕಂಪ್ಯೂಟರ್ ಮತ್ತು ಇಂಗ್ಲೀಷ ಭಾಷೆ ಜ್ಞಾನ ಮುಖ್ಯ : ಶಾಸಕ ನಿಖಿಲ್ ಕತ್ತಿ
WhatsApp Group Join Now
Telegram Group Join Now

ಹುಕ್ಕೇರಿ; ಸ್ಪರ್ಧಾತ್ಮಕ ದಿನದಲ್ಲಿ ಗ್ರಾಮಿಣ ಭಾಗದ ವಿಧ್ಯಾರ್ಥಿಗಳು ಕೂಡ ಕಂಪ್ಯೂಟರ್ ಮತ್ತು ಇಂಗ್ಲೀಷ ಭಾಷೆಯ ಜ್ಞಾನವನ್ನು ಪಡೆಯುವದು ಅತಿ ಮುಖ್ಯವಾಗಿದೆ ಎಂದು ಶಾಸಕ ನಿಖಿಲ್ ಹೇಳಿದರು.
ಅವರು ಪಟ್ಟಣದ ಹೊರಲಯದ ಕ್ಯಾರಗುಡ್ಡದ ವಿದ್ಯಾನಗರದಲ್ಲಿರುವ ಸರಕಾರಿ ಪಿಯುಸಿ ಮಹಾವಿಧ್ಯಾಲಯದಲ್ಲಿ ಹಮ್ಮಿಕೊಂಡ ಕಂಪ್ಯೂಟರ್ ಲ್ಯಾಬ್ ಹಾಗೂ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು,

ಕ್ಷೇತ್ರದ ಸರಕಾರಿ ಪಿಯುಸಿ ಹಾಗೂ ಪದವಿ ಮಹಾವಿಧ್ಯಾಲಯಗಳಿಗೆ ಮೂಲಭೂತ ಸೌಲಭ್ಯಗಳನ್ನು ಹಂತ ಹಂತವಾಗಿ ಕೈಗೊಂಡು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸಲಾಗುವದು. ಎಂದರು .
ಪ್ರಾಚಾರ್ಯ ಎಮ್ ಎನ್ ನಾಯಕ ಕಾಲೇಜಿನಲ್ಲಿ ಸಿಗುವ ಸೌಲಭ್ಯ ಹಾಗೂ ಸಿಗಬೇಕಾಧ ಸೌಲಭ್ಯಗಳನ್ನು ಶಾಸಕರಿಗೆ ವಿವರಿಸಿದರು.

ಕಾಲೇಜು ಅಭಿವ್ವೃದ್ದಿ ಸಮಿತಿ ಉಪಾಧ್ಯಕ್ಷ ಬಸಗೌಡ ಮಗದುಮ್ಮ, ಸದಸ್ಯರಾದ ಸಲೀಂ ನಧಾಪ, ಪ್ರಮೋದ ಪಟ್ಟಣಶೆಟ್ಟಿ, ಸವಿತಾ ಏಣಗಿಮಠ, ಶೀತಲ್ ಕಾಂಬಳೆ, ಅಶೋಕ ಕುಂಬಾರ, ಮುಖಂಡರಾದ ಸತ್ಯಪ್ಪಾ ನಾಯಿಕ, ಗುರು ಕುಲಕರ್ಣಿ, ಶೀಲತ್ ಬ್ಯಾಳಿ, ಸುನೀಲ ನೇರ್ಲಿ , ಪದವಿ ಮಹಾವಿದ್ಯಾಲಯದ ಸಮಿತಿ ಉಪಾಧ್ಯಕ್ಷ ಪಿ.ಜಿ ಕೊಣ್ಣುರ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು,

 

WhatsApp Group Join Now
Telegram Group Join Now
Share This Article