ಜಂತ್ಲಿ ಶಿರೂರ ೧೬: ಗದಗ ಜಿಲ್ಲಾ ಮುಂಡರಗಿ ತಾಲೂಕ ಜಂತ್ಲಿ ಶಿರೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ೧೭-೦೪-೨೦೨೪
ಬುಧವಾರ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವ ಜರುಗುವುದು.
ದಿನಾಂಕ ೧೭-೦೪-೨೦೨೪ ಬುಧವಾರ ದಿವಸ ಶ್ರೀರಾಮ ನವಮಿಯಂದು ಮುಂಜಾನೆ ೬.೦೦ ಗಂಟೆಯಿಂದ ೯-೦೦ ಗಂಟೆಯವರಿಗೆ ಶ್ರೀ ಮಾರುತಿ ದೇವರಿಗೆ ರುದ್ರಾಭಿಷೇಕ ಮತ್ತು ಸಕಲವಸ್ತ್ರಾಭರಣಗಳಿಂದ ಅಲಂಕರಿಸುವುದು ಹಾಗೂ ಸಾಯಂಕಾಲ ೫.೦೦ ಗಂಟೆಯಿಂದ ಡೊಳ್ಳು, ಕರಡಿ ಸಕಲ
ವಾಧ್ಯ ಮೇಳಗಳೊಂದಿಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪಾಲಕಿ ಉತ್ಸವ ನಡೆಯುವುದು.
ಸಾಯಂಕಾಲ ೬-೦೦ ಗಂಟೆಗೆ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು, ಚಿಕ್ಕೇನಕೊಪ್ಪದ ಚನ್ನವೀರ ಶರಣರಮಠ ಸುಕ್ಷೇತ್ರ ಬಳಗಾನೂರು ಶಾಖಾಮಠ
ಜಂತ್ಲಿಶಿರೂರು ಪೂಜ್ಯರು ಸಾನಿಧ್ಯ ವಹಿಸಿಕೊಳ್ಳುವರು.
ಜಿಲ್ಲೆಯ ತಾಲೂಕಿನ ಗಣ್ಯವ್ಯಕ್ತಿಗಳು ಮತ್ತು ಆಡಳಿತಾಧಿಕಾರಿಗಳು, ಜನಪ್ರತಿನಿಧಿಗಳು ಇವರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವರು. ನಂತರ ನೆರೆಯ
ಗ್ರಾಮಗಳಿಂದ ಉತ್ಸವಕ್ಕೆ ಬಂದ ಸದ್ಭಕ್ತರಿಗೆ ಮಹಾದಾಸೋಹ ನಡೆಯುವುದು ರಾತ್ರಿ ಗ್ರಾಮದ ಶ್ರೀ ರಾಮ ವಾಲ್ಮೀಕಿ ಯುವಕ ಮಂಡಳದ ವತಿಯಿಂದ
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ ೧೮-೦೪-೨೦೨೪ ಗುರುವಾರ ಶ್ರೀ ಪರಮಪೂಜ್ಯ ಧರ್ಮರಾಜ ಧರ್ಮದಮಠ ಸಾ. ಕಣಗಿನಹಾಳ ಇವರ ಸಾನಿಧ್ಯದಲ್ಲಿ ಸಾಯಂಕಾಲ ೭.೦೦ ಗಂಟೆಗೆ ಅದ್ದೂರಿಯಾಗಿ ಲಘು ರಥೋತ್ಸವ ನಡೆಯುವುದು. ಈ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಆಗಮಿಸಿ ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು
ಪುನೀತರಾಗಬೇಕೆಂದು ಹನಮಂತಪ್ಪ ನಾಗಪ್ಪ ಚಿಗರಿಯವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.