ಇಂದು ಶರಣಬಸವಪ್ಪ ಅಪ್ಪಾ ವರ ಅಂತಿಮ ಕಾರ್ಯ

Ravi Talawar
ಇಂದು ಶರಣಬಸವಪ್ಪ ಅಪ್ಪಾ ವರ ಅಂತಿಮ ಕಾರ್ಯ
WhatsApp Group Join Now
Telegram Group Join Now

ಕಲಬುರಗಿ: ಗುರುವಾರ (ನಿನ್ನೆ) ಲಿಂಗೈಕ್ಯರಾದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಶರಣಬಸವಪ್ಪ ಅಪ್ಪಾ (91) ಅವರ ಅಂತಿಮ ಕಾರ್ಯ ಇಂದು ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ಪೀಠಾಧಿಪತಿಗಳ ಐಕ್ಯ ಸ್ಥಳದಲ್ಲಿ ನೆರವೇರಲಿದೆ.

ದೇವಸ್ಥಾನ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಪಾರ್ಥಿವ ಶರೀರದ ಮುಂದೆ ಭಕ್ತ‌ರು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇಂದು ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದು, ಮಧ್ಯಾಹ್ನ 2:30 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ.

ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಹಲವಾರು ರಾಜಕೀಯ ಗಣ್ಯರೂ ದರ್ಶನಕ್ಕೆ ಆಗಮಿಸುವ ಸಾಧ್ಯತೆ ಇದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಸಕಲ ಸಿದ್ಧತೆ ಕೈಗೊಂಡಿದೆ.

WhatsApp Group Join Now
Telegram Group Join Now
Share This Article