ಜಮಖಂಡಿ :ತಾಲೂಕಿನ ಶಿರೋಳಗ್ರಾಮದ ಲಕ್ಷ್ಮೀ ದೇವಿ ಜಾತ್ರಾಮಹೋತ್ಸವ ಅ. 17 ಭಾನುವಾರ ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನಡೆಯಲಿದೆ. ಯಜ್ಞ ಹೋಮ ಹಾಗೂ ರುದ್ರಾಭಿಷೇಕ ಪೂಜೆಗಳು, ದೇವಿಯ ಅಲಂಕಾರ ಮಹಾಪೂಜೆಗಳು ನಡೆಯಲಿವೆ. ಜಾತ್ರೆಯ ಅಂಗವಾಗಿ 501 ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ಪೂಜಾರಿಗಳಾದ ಬಸವರಾಜ ಮಹಾಲಿಂಗಪುರ
ತಿಳಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಜನಮನ ಸೆಳೆಯುವ ಜಿದ್ದಾ ಜಿದ್ದಿ ಟಗರಿನ ಕಾಳಗ ಸ್ಪರ್ಧೆಗಳು. ಹಾಲಲ್ಲಿ ಟಗರಿನ ಕಾಳಗ, ಎರಡು ಹಲ್ಲಿನ ಟಗರಿನ ಕಾಳಗ, ನಾಲ್ಕು ಹಲ್ಲಿನ ಟಗರಿನ ಕಾಳಗ, ಆರು ಹಲ್ಲಿನ ಟಗರಿನ ಕಾಳಗ ಹಾಗೂ ಮುಕ್ತ ಹಲ್ಲಿನ ಟಗರಿನ ಕಾಳಗ ಹೀಗೆ ವಿವಿಧ ಹಂತದ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಸೋಮಲಿಂಗ ಕರಗೋಲಿ, ಲಕ್ಷ್ಮಣ ಕವಲಿ, ರಾಚಯ್ಯ ಮಠಪತಿ, ಬಸವರಾಜ ಕೊಳಲಿ, ಗಂಗಪ್ಪ ಜಕನೂರ, ಸಿದ್ದರಾಮ ಸಂಕ, ಕಮಾನ ಮಾಲಿಂಗಪುರ ಮುಂತಾದವರು ಇದ್ದರು.