ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಆಡಳಿತ ಕ್ಷೇತ್ರಕ್ಕೆ ಧುಮುಕಿ ಇಂದಿಗೆ 23 ವರ್ಷಗಳು ಸಂದಿವೆ. ಪ್ರಧಾನಿಯಾಗಿ 11 ವರ್ಷ ಹಾಗೂ ಗುಜರಾತ್ನ ಮುಖ್ಯಮಂತ್ರಿಯಾಗಿ ಸುಮಾರು 12 ವರ್ಷಗಳ ಕಾಲ ನರೇಂದ್ರ ಮೋದಿಯವರು ಅಧಿಕಾರ ನಡೆಸಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ಹುದ್ದೆಯನ್ನು ಮೋದಿ ಅಲಂಕರಿಸಿರುವುದು ವಿಶೇಷವಾಗಿದೆ.
ಮೋದಿ 2001ರಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ 14 ನೇ ಮುಖ್ಯಮಂತ್ರಿಯಾಗಿ ಅಕ್ಟೋಬರ್ 7, 2001 ರಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಅಭಿವೃದ್ಧಿ ರಾಜಕಾರಣದ ಹೊಸ ಅಧ್ಯಾಯ ಆರಂಭವಾಯಿತು.