ಅಥಣಿ: ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಮನುವಾದಿ ವಕೀಲ ರಾಕೇಶ ಕಿಶೋರ ಶೂ ಎಸೆತ ಪ್ರಕರಣವನ್ನು ಖಂಡಿಸಿ ವಿವಿಧ ಸಂಘಟನೆಗಳ ಮಹಾ ಒಕ್ಕೂಟದ ಸಹಯೋಗದಲ್ಲಿ ಇಂದು ದಿ.16 ರಂದು ಅಥಣಿ ಬಂದಗೆ ಕರೆ ನೀಡಲಾಗಿದೆ.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳಾದ, ಪರಿಶಿಷ್ಟ ಜಾತಿಗೆ ಸೇರಿದ ಬಿ. ಆರ್. ಗವಾಯಿಯವರಿಗೆ ಮನುವಾದಿ ವಕೀಲ ರಾಕೇಶ ಕಿಶೋರ ಶೂ ಎಸೆಯುವ ಮೂಲಕ ದೇಶದ ಅತ್ಯನ್ನತ ಸಂವಿಧಾನಿಕ ಸ್ಥಾನಕ್ಕೆ, ಈ ನೆಲದ ಕಾನೂನಿಗೆ ಅಗೌರವ ತೋರಿದ್ದು ಮತ್ತು ಮಧ್ಯಪ್ರದೇಶದ ಇನ್ನೊಬ್ಬ ಮನುವಾದಿ ವಕೀಲ ಅನೀಲ ಮಿಶ್ರಾ ಈತನು ಭಾರತ ರತ್ನ ಬಾಬಾಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ಪ್ರಯತ್ನ ಮಾಡಿದ್ದು ಅದನ್ನು ಖಂಡಿಸಿ ಸದರಿಯವರ ಮೇಲೆ ದೇಶ ದ್ರೋಹದಡಿ ಪ್ರಕರಣ ದಾಖಲಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿವಿಧ ಸಂಘಟನೆಗಳ ಮಹಾ ಒಕ್ಕೂಟ ಅಥಣಿ ಇವರ ವತಿಯಿಂದ ಇಂದು ದಿ. 16-10-2025 ರಂದು ಅಥಣಿ ಬಂದಗೆ ಕರೆ ಕೊಟ್ಟಿದ್ದು ಸದರಿ ಪ್ರತಿಭಟನೆಯಲ್ಲಿ ಅಥಣಿ ತಾಲೂಕಿನ ಸಮಸ್ತ ನಾಗರಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು. ವಿವಿಧ ಸಂಘಟನೆಗಳ ಮಹಾ ಒಕ್ಕೂಟದಿಂದ ವಿನಂತಿಸಲಾಗಿದೆ.