ಯರಗಟ್ಟಿ: ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಸಹಯೋಗದಲ್ಲಿ ಪಟ್ಟಣದ ಶ್ರೀ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ’ಕಟ್ಟೀಮನಿ ಕಥಿ ಹೇಳೂಣು’ ಎಂಬ ಬಸವರಾಜ ಕಟ್ಟೀಮನಿ ಕಥೆಗಳನ್ನು ಹೇಳುವ ವಿನೂತನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಭಾಗ್ಯಶ್ರೀ ಮಹಾಲಿಂಗಪುರ, ಲಕ್ಷ್ಮೀ ಕೆಮ್ಮನಕೋಲ, ರಾಧಿಕಾ ಶಿದ್ಧನ್ನವರ, ಅಂಬಿಕಾ ಕುಂಬಾರ, ಮಂಜುಳಾ ಆಲದಕಟ್ಟಿ, ನಿಂಗವ್ವ ಪಾಟೀಲ, ಜ್ಯೋತಿ ಪಟ್ಟಣಶೆಟ್ಟಿ, ಅನ್ನಪೂರ್ಣ ಸವದತ್ತಿ ಹಾಗೂ ತೇಜಸ್ವಿನಿ ಮದ್ದಾನಿ ಸೇರಿದಂತೆ ಕಾಲೇಜಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸವರಾಜ ಕಟ್ಡೀಮನಿಯವರ ಆಯ್ದ ಕಥೆಗಳನ್ನು ಹೇಳಲಿದ್ದಾರೆ.
ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ವಿಠಲ ದಳವಾಯಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರಾಯನಗೌಡ ಮರಿಗೌಡರ ಅವರು ಅಧ್ಯಕ್ಷತೆ ವಹಿಸುವರು. ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕರಾದ ಡಾ. ಸುನಂದಾ ಮಾದರ ಅವರು ಉಪಸ್ಥಿರಲಿದ್ದಾರೆ. ಇತಿಹಾಸ ಪ್ರಾಧ್ಯಾಪಕರಾದ ಶಂಕರ ಲಗಳಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಅವರು ನಿರ್ಣಾಯಕರಾಗಿ ಭಾಗವಹಿಸುವರು.