ಬಳ್ಳಾರಿ,ಜ,04 : ತಾಲೂಕಿನ ಮೋಕ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನೂತನ ಅಧ್ಯಕ್ಷರಾಗಿ ಕೊಳ್ಳಿ ಕೃಷ್ಣ,ಉಪಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪ್ರಾಣೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಕೊಳ್ಳಿ ಕೃಷ್ಣ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ ಮುಖಂಡರಾದ ಕೆ.ಸತ್ಯನಾರಾಯಣ ರೆಡ್ಡಿ ಮತ್ತು ಮೊಕ ನಾಗರಾಜ ಅವರ ಸಮ್ಮುಖದಲ್ಲಿ ಸೇರ್ಪಡೆ ಗೊಂಡಿದ್ದರು.
ಚುನಾವಣೆ ಅಧಿಕಾರಿ ಪ್ರಾಣೇಶ್ ಸಂಘದ ಎಲ್ಲಾ ಸದಸ್ಯರ ಮತ್ತು ನಿರ್ದೇಶಕರ ಸಮ್ಮುಖದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಅದ್ಯಕ್ಷರು ಮತ್ತು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ರಾಮದುರ್ಗ ವೆಂಕಟೇಶ್, ಕುಂಡ ಕೂರಿ ರಂಗಯ್ಯ,ವರಲ ಶ್ರೀನಿವಾಸ್, ಪತ್ತಾರ್ ವೆಂಕಟೇಶ್, ಕಾವಲಿ ನಾಗರಾಜ್, ಬಿಡಿಹಳ್ಳಿ ರಾಮಂಜಿನಿ, ಕುಂಟ ಮಲ್ಲಿಕಾರ್ಜುನ, ಮುಂತಪ್ಪ ತಿಮ್ಮಣ್ಣ, ಪವಡಪ್ಪ, ಹೊನ್ನೂರ ಸಣ್ಣಿ,ನಿಟ್ರಿವಟ್ಟಿ ಉಮಾಪತಿ, ಹೆಚ್. ಕುಮಾರಿ, ಹೆಚ್.ಉಮೇಶ್ ಮತ್ತು ಗ್ರಾಮದ ಹಿರಿಯರು ಮುಖಂಡರು,ಯುವಕರು ಉಪಸ್ಥಿತರಿದ್ದರು.