ಜಮಖಂಡಿ;ತಾಲೂಕಿನ ಕಂಕಣವಾಡಿ ಗ್ರಾಮದಿಂದ ಆಳಬಾಳ ಗ್ರಾಮದ ಕಡೆಗೆ ಗರಸು ತುಂಬಿಕೊಂಡು ಹೊರಟಿದ್ದ ಟಿಪ್ಪರ ವಾಹನ ಒಂದು ಕೃಷ್ಣಾ ನದಿಯ ಹಿನ್ನೀರಿಗೆ ಉರುಳಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಟಿಪ್ಪರವಾಹನ ಗರಸು ತುಂಬಿ ಕೊಂಡು ಹೊರಟ ಸಂದರ್ಭದಲ್ಲಿ ಕಂಕಣವಾಡಿ ರಸ್ತೆ ಇಕ್ಕೆಲಗಳಲ್ಲಿ ಜಲಾವೃತವಾಗಿದ್ದು, ರಸ್ತೆ ಕುಸಿದ ಪರಿಣಾಮ ವಾಹನ ನದಿಯ ಹಿನ್ನೀರಿಗೆ ಉರುಳಿದೆ. ವಾಹನದಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದರು ಇಬ್ಬರೂ ವಾಹನ ಉರುಳುತ್ತಿದ್ದಂತೆ ವಾಹನ ದಿಂದ ಜಿಗಿದು ಪಾರಾಗಿದ್ದಾರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಭೇಟಿ; ಘಟನಾ ಸ್ಥಳಕ್ಕೆ ಜಮಖಂಡಿಯ ತಹಸೀಲ್ದಾರ ಅನೀಲ ಬಡಗೇರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯಮಿಸಲಾಗಿದ್ದು ಭಾರಿ ವಾಹನಗಳು ಸಂಚರಿಸದಂತೆ ಕ್ರಮ ಜರುಗಿಸಲಾಗಿದೆ.