ನಿಮ್ಮ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೈಮ್ ಮಾಡುವ ವಿಚಾರದಲ್ಲಿ ಸಮಸ್ಯೆ ಆಗುತ್ತಿದ್ದರೆ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇದೆ. ನಿಮ್ಮ ಪರಿಷ್ಕೃತ ಟಿಡಿಎಸ್ ಅನ್ನು ಸಲ್ಲಿಸುವಂತೆ ನಿಮ್ಮಿಂದ ಟಿಡಿಎಸ್ ಕಡಿತ ಮಾಡಿದ ಕಂಪನಿ ಅಥವಾ ಬ್ಯಾಂಕ್ ಅಥವಾ ಮತ್ಯಾವುದಾದರೂ ಸಂಸ್ಥೆಗೆ ನೀವು ಮನವಿ ಮಾಡಬೇಕಾಗುತ್ತದೆ. ಆರು ವರ್ಷದ ಬಳಿಕ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ.
ಟಿಡಿಎಸ್ ಎಂದರೆ ಮೂಲದಲ್ಲೇ ಕಡಿತಗೊಳಿಸಲಾಗುವ ತೆರಿಗೆ. ನಿಮ್ಮ ಎಫ್ಡಿ ಹಣ ಮೆಚ್ಯೂರ್ ಆದಾಗ ಬ್ಯಾಂಕ್ನವರು ನಿರ್ದಿಷ್ಟ ಟಿಡಿಎಸ್ ಅನ್ನು ಮುರಿದುಕೊಳ್ಳುತ್ತಾರೆ. ಈ ಟಿಡಿಎಸ್ ಹಣದ ಲೆಕ್ಕ ಆದಾಯ ತೆರಿಗೆಗೆ ಹೋಗುತ್ತದೆ. ಹಲವರಿಗೆ ಸಂಬಳ ನೀಡುವಾಗಲೇ ಟಿಡಿಎಸ್ ಮುರಿದುಕೊಂಡಿರಲಾಗುತ್ತದೆ. ಹೀಗೆ ನಿಮ್ಮಿಂದ ಯಾವುದೇ ಟಿಡಿಎಸ್ ಮುರಿದುಕೊಂಡಿದ್ದರೆ ಅದು ನಿಮ್ಮ ಫಾರ್ಮ್ 26ಎಎಸ್ ಅಥವಾ ಎಐಎಸ್ನಲ್ಲಿ (ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್) ನಮೂದಾಗುತ್ತದೆ.