7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ : ಕೇಂದ್ರಗಳಲ್ಲಿ ಬಿಗಿ ಭದ್ರತೆ

Ravi Talawar
7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ : ಕೇಂದ್ರಗಳಲ್ಲಿ ಬಿಗಿ ಭದ್ರತೆ
WhatsApp Group Join Now
Telegram Group Join Now

ನವದೆಹಲಿ/ ಶಿಮ್ಲಾ: ದೇಶದ ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ವಿವಿಧ ಪಕ್ಷಗಳ ಏಜೆಂಟರು ಆಗಮಿಸಿದ್ದಾರೆ. ಮತ ಎಣಿಕೆಗೆ ಚುನಾವಣಾ ಆಯೋಗದಿಂದ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ.

ಜುಲೈ 10 ರಂದು 7 ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಶಾಂತಿಯುತ ಉಪಚುನಾವಣೆಗಳು ನಡೆದಿದ್ದವು. ಪಂಜಾಬ್‌ನ ಒಂದು ವಿಧಾನಸಭಾ ಕ್ಷೇತ್ರ, ಉತ್ತರಾಖಂಡದ ಎರಡು, ಹಿಮಾಚಲ ಪ್ರದೇಶದ ಮೂರು, ಪಶ್ಚಿಮ ಬಂಗಾಳದ ನಾಲ್ಕು ಮತ್ತು ಬಿಹಾರ, ಮಧ್ಯಪ್ರದೇಶ ಮತ್ತು ತಮಿಳುನಾಡಿನ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಎಲ್ಲಾ ಅಸೆಂಬ್ಲಿ ಕ್ಷೇತ್ರಗಳ ಒಟ್ಟು 121 ಅಭ್ಯರ್ಥಿಗಳು ಹಣೆಬರಹ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ. ಈ ಉಪಚುನಾವಣೆಯಲ್ಲಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ನಾಯಕರು ಸೇರಿದಂತೆ ಅನೇಕ ನಾಯಕರ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಪಶ್ಚಿಮ ಬಂಗಾಳದ ರಾಯಗಂಜ್, ದಕ್ಷಿಣ ರಾಣಾಘಾಟ್, ಬಾಗ್ದಾ ಮತ್ತು ಮಾಣಿಕ್ತಾಲಾ ಕ್ಷೇತ್ರಗಳ ಉಪಚುನಾಚಣೆ ನಡೆದಿದ್ದು, ಮತಎಣಿಕೆ ನಡೆಯುತ್ತಿದೆ. ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಪಂಜಾಬ್‌ನ ಪಶ್ಚಿಮ ಜಲಂಧರ್ ಕ್ಷೇತ್ರಕ್ಕೆ ಉಪಚುನಾಚವಣೆ ನಡೆದಿದೆ. ಹಿಮಾಚಲ ಪ್ರದೇಶದ ದೆಹ್ರಾ, ಹಮೀರ್‌ಪುರ ಮತ್ತು ನಲಘಡ ಸ್ಥಾನಗಳಿಗೆ ಮತ ಚಲಾವಣೆ ಆಗಿದೆ. ಬಿಹಾರದ ರುಪೌಲಿ, ತಮಿಳುನಾಡಿನ ವಿಕ್ರವಂಡಿ ಮತ್ತು ಮಧ್ಯಪ್ರದೇಶದ ಅಮರವಾಡ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article