ನವದೆಹಲಿ: ನಟ ಕಮಲ್ ಹಾಸನ್ ಅವರ “ಥಗ್ ಲೈಫ್” ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಿರುವ ಬಗ್ಗೆ ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಮತ್ತು ಜನರು ಚಿತ್ರವನ್ನು ನೋಡದಂತೆ ತಡೆಯಲು ಅವರ ತಲೆಯ ಮೇಲೆ ಬಂದೂಕುಗಳನ್ನು ಇಡಬಾರದು ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಮನಮೋಹನ್ ಅವರ ಪೀಠ ತಿಳಿಸಿದೆ.
ಇದೇ ವೇಳೆ, ರಾಜ್ಯದಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ತಿಳಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಪೀಠ ಒಂದು ದಿನದ ಕಾಲಾವಕಾಶ ನೀಡಿದೆ. ‘ಒಂದು ಚಿತ್ರವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಅನುಮತಿ ಪಡೆದ ನಂತರ, ಆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು’ ಎಂದು ಪೀಠ ತಿಳಿಸಿದೆ.