ಪಾಕಿಸ್ತಾನದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮಾಜಿ ಸೆನೆಟರ್ ಸೇರಿ ಮೂವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ರಿಮೋಟ್ ಕಂಟ್ರೋಲ್ ಬಳಸಿ ಸ್ಫೋಟಿಸಲಾಗಿದೆ, ಅಪಘಾತದ ಸಮಯದಲ್ಲಿ, ಸೆನೆಟರ್ ಹಿದಾಯತುಲ್ಲಾ ಖಾನ್ ಮಮಂಡ್ ಬಜೌರ್ ಪ್ರದೇಶದ ದಾಮೋದೋಲಾ ಪ್ರದೇಶದಲ್ಲಿದ್ದರು.
ಘಟನೆಯ ಸಮಯದಲ್ಲಿ ಅವರು ಉಪಚುನಾವಣೆಯಲ್ಲಿ ತಮ್ಮ ಸೋದರಳಿಯ ನಜೀಬುಲ್ಲಾ ಖಾನ್ ಪರ ಪ್ರಚಾರ ನಡೆಸುತ್ತಿದ್ದರು. ಪಾಕಿಸ್ತಾನದ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಜುಲೈ 12 ರಂದು ಉಪ ಚುನಾವಣೆ ನಡೆಯಲಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಿಂದ 45 ಕಿಲೋಮೀಟರ್ ದೂರದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮೀನ್ ಗೊಂಡಾಪುರ್ ಮತ್ತು ಮುಖ್ಯ ಕಾರ್ಯದರ್ಶಿ ನದೀಮ್ ಅಸ್ಲಾಂ ಚೌಧರಿ ಕೂಡ ಈ ಸ್ಫೋಟವನ್ನು ಖಂಡಿಸಿದ್ದಾರೆ. ಮುಖ್ಯಮಂತ್ರಿ ಅಲಿ ಅಮೀನ್ ಅವರು ಪ್ರಕರಣದ ಪ್ರತಿಯೊಂದು ಅಂಶವನ್ನು ತನಿಖೆ ಮಾಡಿ ಪ್ರಾಂತೀಯ ಪೊಲೀಸರಿಂದ ವರದಿ ಕೇಳಿದ್ದಾರೆ.