ಬೆಂಗಳೂರು: ನಾನು ಆಸ್ಪತ್ರೆಯಲ್ಲಿರುವ ಕಾರಣ ಮೂರು ತಿಂಗಳು ವಿಳಂಬವಾಗಿದೆ. ನಾನಿದ್ದಾಗ ಫೈನಾನ್ಸ್ ಇಲಾಖೆಗೆ ನಾನು ಒತ್ತಡ ಹಾಕುತ್ತಿದ್ದೆ. ಜೊತೆಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ. ದುರ್ದೈವ ಅಪಘಾತ ಬಳಿಕ ನಲವತ್ತು ದಿನ ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿದೆ, ಇಷ್ಟು ದಿನ ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದೇವು. ಈಗ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ತಾಲೂಕು ಪಂಚಾಯತಿಗೆ ದುಡ್ಡು ಹಾಕಿ, ಅಲ್ಲಿಂದ ಸಿಡಿಪಿಒ ಮುಖಾಂತರ ಸೇಮ್ ಚಾನಲ್ ಹಣ ಬಿಡುಗಡೆ ಮಾಡಲು ಹೆಚ್ಚು ಕಮ್ಮಿ ಆಗಿದೆ . ಇನ್ನೊಂದು ವಾರ ಹತ್ತು ದಿನದಲ್ಲಿ ಖಾತೆಗಳಿಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಒಂದು ವಾರದಲ್ಲಿ ಮೂರು ತಿಂಗಳ ಗೃಹಲಕ್ಷ್ಮೀ ಹಣ ಜಮೆ: ಹೆಬ್ಬಾಳ್ಕರ್

ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ಇನ್ನೊಂದು ವಾರ ಹತ್ತು ದಿನದಲ್ಲಿ ದುಡ್ಡು ಬರುತ್ತೆ. ಎರಡು ತಿಂಗಳ ಹಣ ಫೈನಾನ್ಸ್ ದವರು ಟ್ರಸರಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನ ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.