ನಕಲಿ ಆಧಾರ್ ಕಾರ್ಡ್​  ತೋರಿಸಿ ಸಂಸತ್ ಭವನ ಪ್ರವೇಶ: ಮೂವರನ್ನು ಬಂಧನ

Ravi Talawar
ನಕಲಿ ಆಧಾರ್ ಕಾರ್ಡ್​  ತೋರಿಸಿ ಸಂಸತ್ ಭವನ ಪ್ರವೇಶ: ಮೂವರನ್ನು ಬಂಧನ
WhatsApp Group Join Now
Telegram Group Join Now

ನವದೆಹಲಿ, ಜೂನ್ 7: ನಕಲಿ ಆಧಾರ್ ಕಾರ್ಡ್​  ತೋರಿಸಿ ಸಂಸತ್ ಭವನ ಪ್ರವೇಶಿಸಲು ಮೂವರು ಯತ್ನಿಸಿದ ಘಟನೆ ಜೂನ್ 4ರಂದು ನಡೆದಿರುವುದು ಈಗ ಬೆಳಕಿಗೆ ಬಂದಿದೆ. ಮೈಸೂರು ಕೊಡಗು ಮಾಜಿ ಸಂಸದ ಪ್ರತಾಮ್ ಸಿಂಹ ಅವರಿಂದ ಪಾಸ್ ಗಿಟ್ಟಿಸಿಕೊಂಡು ಸಂಸತ್ ಪ್ರವೇಶಿಸಿ ಲೋಕಸಭೆ ಕಲಾಪದ ವೇಳೆ ಅಶ್ರುವಾಯು ಸಿಡಿಸಿದ್ದ ಪ್ರಕರಣದ ನೆನಪು ಪೂರ್ಣ ಮಾಸುವ ಮುನ್ನವೇ ಈ ವಿದ್ಯಮಾನ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ನಕಲಿ ಆಧಾರ್ ಕಾರ್ಡ್​ ತೋರಿಸಿ ಸಂಸತ್ ಭವನ ಪ್ರವೇಶಿಸಲು ಮುಂದಾದ ಮೂವರನ್ನು ಸಿಐಎಸ್‌ಎಫ್ ವಶಕ್ಕೆ ಪಡೆದಿದೆ. ಕಾಸಿಂ, ಮೋನಿಸ್ ಮತ್ತು ಶೋಯೆಬ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ಕಾರ್ಮಿಕರಂತೆ ನಟಿಸಿ ಗೇಟ್ ಸಂಖ್ಯೆ 3 ರಿಂದ ಸಂಸತ್ ಭವನದ ಒಳ ಪ್ರವೇಶಿಸಲು ಪ್ರಯತ್ನಿಸಿದರು.

ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 19/465/468/471/120B ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ ಪ್ರಕಾರ, ಜೂನ್‌ 4ರಂದು ಮಧ್ಯಾಹ್ನ 1.30ಕ್ಕೆ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article