“ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ” ಜಿಲ್ಲೆಯಿಂದ ಸಹಸ್ರಾರು ಕಾರ್ಯಕರ್ತರು: ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ

Ravi Talawar
“ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ” ಜಿಲ್ಲೆಯಿಂದ ಸಹಸ್ರಾರು ಕಾರ್ಯಕರ್ತರು: ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ
WhatsApp Group Join Now
Telegram Group Join Now
ಬೆಳಗಾವಿ.ಸೆಪ್ಟಂಬರ್ 1 ರಂದು ನಡೆಯುವ ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ  ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು ಸಭೆಯನ್ನು ಉದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ
ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 1 ರಂದು ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಲಕ್ಷಾಂತರ ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ‌ ಬೆಳಗಾವಿ ಜಿಲ್ಲೆಯಿಂದಲೂ ಎಲ್ಲ ಮತಕ್ಷೇತ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿ ಧರ್ಮ ರಕ್ಷಣೆಯ ಹೋರಾಟದಲ್ಲಿ ಭಾಗವಹಿಸೋಣ ಎಂದು ಹೇಳಿದರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಅನಿಲ ಬೆನಕೆ‌ ಮಾತನಾಡಿ  ಸೆಪ್ಟೆಂಬರ್ 1 ರಂದು ಧರ್ಮಸ್ಥಳದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಾರ್ವಜನಿಕರು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು  ಭಾಗವಹಿಸಿ ಪ್ರತಿಭಟನಾ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಅರವಿಂದ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಶ್ರೀ ದೇಸಾಯಿ,ಸಂದೀಪ ದೇಶಪಾಂಡೆ ,ಮಂಡಲ ಅಧ್ಯಕ್ಷರಾದ ಬಸವರಾಜ ಸಾಣಿಕೊಪ್ಪ, ಯುವರಾಜ ಜಾಧವ, ಮಹಾದೇವ ಶೆಕ್ಕಿ ,ಡಾ.ಕೆ ವಿ ಪಾಟೀಲ, ಭೀಮಶಿ ಭರಮಣ್ಣವರ,ಜಿಲ್ಲಾ ಉಪಾಧ್ಯಕ್ಷರಾದ, ಪ್ರಮೋದ ಕೊಚೇರಿ ,ಮಾರುತಿ ಕೊಪ್ಪದ, ಶಾಮಾನಂದ ಪೂಜೇರಿ ,ಸುನೀಲ ಮಡ್ಡಿಮನಿ, ಸಂತೋಷ ದೇಶನೂರ, ಓಬಿಸಿ ಮೋರ್ಚ್ ಜಿಲ್ಲಾ ಅಧ್ಯಕ್ಷರಾದ ಉಮೇಶ್ ಪುರಿ, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಯಲ್ಲೇಶ್ ಕೋಲಕಾರ, ಚೇತನ್ ಅಂಗಡಿ,ಯಲ್ಲಪ್ಪ ಕುರಿ, ಶಂಕರ ಹುರಕಡ್ಲಿ,ಸಂಜಯ ಕುಬಲ್, ಮಲ್ಲಪ್ಪ ಮಾರಿಹಾಳ, ವಿಶಾಲ ಬೋಗುರ, ಮನೋಜ ಪಾಟೀಲ,ಪ್ರಶಾಂತ ಅಮ್ಮಿನಭಾವಿ, ಶ್ರೀಕಾಂತ ಇಟಗಿ, ರವೀಂದ್ರ ಹರ್ವಿ ಪ್ರಮುಖರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article