ನಮಗೆ ಅನ್ಯಾಯ ಮಾಡಿದವರೇ ನಮ್ಮ ಮತ ಕೇಳಲು ಬಂದಿದ್ದಾರೆ :  ಚನ್ನರಾಜ ಹಟ್ಟಿಹೊಳಿ

Ravi Talawar
ನಮಗೆ ಅನ್ಯಾಯ ಮಾಡಿದವರೇ ನಮ್ಮ ಮತ ಕೇಳಲು ಬಂದಿದ್ದಾರೆ :  ಚನ್ನರಾಜ ಹಟ್ಟಿಹೊಳಿ
WhatsApp Group Join Now
Telegram Group Join Now
ಬೆಳಗಾವಿ03: ಇಷ್ಟು ವರ್ಷಗಳ ಕಾಲ ಬೆಳಗಾವಿಗೆ ಯಾರಿಂದ ಅನ್ಯಾಯವಾಗುತ್ತಿದೆ ಎಂದು ನಾವು ಹೋರಾಟ ಮಾಡುತ್ತ ಬಂದಿದ್ದೇವೋ ಅವರೇ ಇಂದು ನಾಚಿಕೆ ಬಿಟ್ಟು ನಮ್ಮಿಂದಲೇ ಮತ ಕೇಳಲು ಬರುತ್ತಿದ್ದಾರೆ. ಅಂತವರನ್ನು ಮುಲಾಜಿಲ್ಲದೆ ತಿರಸ್ಕರಿಸುವ ಮೂಲಕ ನಮಗೆ ದ್ರೋಹ ಮಾಡುವವರಿಗೆ ಇಲ್ಲಿ ಜಾಗವಿಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡೋಣ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಮಾರುತಿ ನಗರ ಮತ್ತು ಮಹಾವೀರ ಕಾಲೋನಿಯಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ಮಾತನಾಡಿದರು.
ಅಧಿಕಾರ ಸಿಕ್ಕಿದಾಗ ಬೆಳಗಾವಿಗೆ ಸೌಲಭ್ಯಗಳನ್ನು ನೀಡುವ ಬದಲು ಇಲ್ಲಿಂದ ಕಚೇರಿಗಳನ್ನು, ಯೋಜನೆಗಳನ್ನು ಹುಬ್ಬಳ್ಳಿ – ಧಾರವಾಡಕ್ಕೆ ತೆಗೆದುಕೊಂಡು ಹೋಗಲು ಕಾಯುತ್ತ ಕುಳಿತಿರುತ್ತಿದ್ದ ವ್ಯಕ್ತಿ ಇಂದು ಬೆಳಗಾವಿ ಜನರ ಸಹಾಯ ಕೇಳಲು ಬಂದಿದ್ದಾರೆ. ನಾವು ಸ್ವಾಭಿಮಾನಿಗಳು, ನಿಮ್ಮ ಅನ್ಯಾಯವನ್ನು ಮರೆತಿಲ್ಲ, ಎಂದಿಗೂ ಮರೆಯಲೂ ಸಾಧ್ಯವಿಲ್ಲ. ನಿಮಗೆ ಇಲ್ಲಿ ಜಾಗವಿಲ್ಲ ಎಂದು ಅವರನ್ನು ವಾಪಸ್ ಕಳಿಸೋಣ ಎಂದು ಚನ್ನರಾಜ ಹಟ್ಟಿಹೊಳಿ ಕರೆ ನೀಡಿದರು.
ಕೈಮುಗಿದು ಕೇಳುತ್ತೇನೆ, ದಯವಿಟ್ಟು ಈ ಬಾರಿ ಬೆಳಗಾವಿ ಜನರು ಮೈ ಮರೆಯದೇ ಬೆಳಗಾವಿ ಅಭಿವೃದ್ಧಿಯ ಬದ್ಧತೆ ಮೆರೆಯೋಣ. ಬೆಳಗಾವಿಗೆ ದ್ರೋಹ ಬಗೆದವರ ಕೈಗೆ ಅಧಿಕಾರ ಕೊಡುವುದು ಬೇಡ. ಹಾಗೆ ಕೊಟ್ಟಲ್ಲಿ ಇನ್ನೆಂತಹ ಅನ್ಯಾಯವಾಗಬಹುದು ಎನ್ನುವುದನ್ನು ಯೋಚಿಸಿ, ಸ್ಥಳೀಯ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರಿಗೆ ಮತ ನೀಡಿ ಆಯ್ಕೆ ಮಾಡೋಣ ಎಂದು ವಿನಂತಿಸಿದರು.
ಮೃಣಾಲ ಹೆಬ್ಬಾಳಕರ ಯುವಕನಿದ್ದು, ವಿದ್ಯಾವಂತನಿದ್ದಾನೆ. ಜಿಲ್ಲೆಯ ಅಭಿವೃದ್ಧಿಯ ಕಳಕಳಿ ಹೊಂದಿದ್ದಾನೆ. ಅವನಿಗೆ ಮತ ನೀಡಿ ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವಕಾಶ ಮಾಡಿಕೊಡೋಣ. ಅವರು ಸದಾ ಇಲ್ಲೇ ಇದ್ದು, ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಲಿದ್ದಾನೆ ಎಂದು ಹೇಳಿದರು.
ಈ ಸಮಯದಲ್ಲಿ ಶಾಸಕರಾದ ಆಸೀಫ್ ಸೇಠ್, ಮೃಣಾಲ ಹೆಬ್ಬಾಳಕರ್ ಕ್ರಿಯಾಶೀಲ ಯುವಕನಿದ್ದು, ಉತ್ತಮ ರೀತಯಲ್ಲಿ ಕೆಲಸ ಮಾಡಲಿದ್ದಾನೆ. ಹಾಗಾಗಿ ಹೊರಗಿನ ವ್ಯಕ್ತಿಗೆ ಮತ ನೀಡದೆ ಜಿಲ್ಲೆಯ ಯುವಕನಿಗೆ ಮತ ಹಾಕಿ ಗೆಲ್ಲಿಸೋಣ. ಕನಿಷ್ಟ 3 ಲಕ್ಷ ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
 ಫಹೀಮ್ ನಾಯಿಕವಾಡಿ, ಸೀಮಾ ಪವಾರ್, ಹಸೀನಾ, ಮಹಾಂತೇಶ ಹವಳಿ, ಉದಯ ಪಟವನ್ನವರ ಕಲಿಕಟ್ಟಿ ಸರ್, ಕಲಿಕಟ್ಟಿ ಮೆಡಮ್, ಪದ್ಮಾ ಅನಿಗೋಳ, ಬಾಬು ಮಿಸಕಿ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.
WhatsApp Group Join Now
Telegram Group Join Now
Share This Article