ಕರ್ನಾಟಕ – ತಮಿಳುನಾಡು ಗಡಿಭಾಗದ ಪ್ರೇಮಕಥೆಯ ‘ಏಳುಮಲೆ’ ಸಿನಿಮಾದ ಇಂದು ರಾಜ್ಯದ್ಯಂತ ತೆರೆಕಂಡಿದೆ.
‘ಏಳುಮಲೆ’ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ಮಹಾನಟಿ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ತಾರಾ ಬಳಗದಲ್ಲಿದ್ದಾರೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಮುಂತಾದವರು.
ಖ್ಯಾತ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಬಂಡವಾಳ ಹೂಡಿದ್ದಾರೆ. ಅವರು ಹೇಳುವುದೆಂದರೆ
“ಏಳುಮಲೆ ಪ್ರೀತಿಯೇ ಪರಮ ಶ್ರೇಷ್ಠ ಎಂದು ಹೇಳುತ್ತದೆ. ಇದನ್ನು ನಾವು ಥ್ರಿಲ್ಲರ್ ಮೂಲಕ ಹೇಳುತ್ತಿದ್ದೇವೆ. ಏಳುಮಲೆ ಸಿನಿಮಾ ಪ್ರೇಕ್ಷಕರಿಗೆ ನಿರಾಶೆ ಮಾಡುವುದಿಲ್ಲ”
ಅಟ್ಲಾಂಟಾ ನಾಗೇಂದ್ರ ಅವರು ಸಹ ನಿರ್ಮಾಪಕರಾಗಿ ಜೊತೆಯಾಗಿ ನಿಂತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ನಾಗಾರ್ಜುನ ಶರ್ಮಾ ಸಾಹಿತ್ಯ ಹಾಗೂ ಪುನೀತ್ ರಂಗಸ್ವಾಮಿ ಸಂಭಾಷಣೆ, ಡಿ.ಇಮ್ಮಾನ್ ಸಂಗೀತ ಈ ಸಿನಿಮಾಗಿದೆ.