ಬಳ್ಳಾರಿ :25. ಜಿಲ್ಲೆಯಲ್ಲಿ ಪ್ರತಿ ವರ್ಷ ವಿಶ್ವಹಿಂದೂ ಪರಿಷತ್ ವತಿಯಿಂದ ಹಿಂದೂ ಮಹಾ ಗಣಪತಿ ಉತ್ಸವವನ್ನು ಆಚರಿಸಲಾಗುತ್ತಿತ್ತು ಆದರೆ ಕೇಂದ್ರ ಸಮಿತಿಯ ಆದೇಶದ ಮೇರೆಗೆ ಈ ವರ್ಷ ಜಿಲ್ಲೆಯಾದ್ಯಂತ ವಿಶ್ವ ಹಿಂದೂ ಪರಿಷತ್ ವತಿಯಿಂದ ಮಹಾ ಗಣಪತಿ ಉತ್ಸವವನ್ನು ಆಚರಿಸುವುದಿಲ್ಲ ಎಲ್ಲಿಯೂ ಸಹ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವುದಿಲ್ಲ ಎಂದು ವಿ ಎಚ್ ಪಿ ಜಿಲ್ಲಾ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಉತ್ತರ ಪ್ರಾಂತದ ಆದೇಶದ ಮೇರೆಗೆ ಈ ವರ್ಷದಿಂದ ವಿಶ್ವ ಹಿಂದೂ ಪರಿಷದ್ ಹಿಂದೂ ಮಹಾ ಗಣಪತಿ ಉತ್ಸವವನ್ನು ರದ್ದುಪಡಿಸಲಾಗಿದೆ. ಬಳ್ಳಾರಿ ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯ ಸೆಂಟನರಿ ಹಾಲ್‌ನಲ್ಲಿ ನಡೆಯುತ್ತಿರುವ ಗಣೇಶ ಉತ್ಸವಕ್ಕೆ ಮತ್ತು ವಿಶ್ವ ಹಿಂದೂಪರಿಷದ್‌ಗೆ ಯಾವುದೇ ರೀತಿಯ ಸಂಬಂಧ ವಿರುವುದಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ತೊಂದರೆ,
ಅಡಚಣೆಗಳು ಉಂಟಾದಲ್ಲಿ ಹಿಶ್ವ ಹಿಂದೂ ಪರಿಷದ್ ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲವೆಂದು ಈಮೂಲಕ ತಿಳಿಸುತ್ತಿದ್ದೇವೆ.
ಹಾಗೂ ಬಳ್ಳಾರಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಯಾರಾದರೂ ವಿಶ್ವಹಿಂದೂ ಪರಿಷದ್ ಹೆಸರಿನಲ್ಲಿ ಗಣೇಶಉತ್ಸವವನ್ನು ಆಚರಿಸಿದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಈ ಮೂಲಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯಪಡಿಸುತ್ತೇವೆ ಎಂದು ಜಿಲ್ಲಾ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.