ವಿದ್ಯೆಯಲ್ಲಿ ನಿಜವಾದ ಸ್ವಾತಂತ್ರ್ಯ ಇದೆ- ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

Hasiru Kranti
ವಿದ್ಯೆಯಲ್ಲಿ ನಿಜವಾದ ಸ್ವಾತಂತ್ರ್ಯ ಇದೆ- ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
WhatsApp Group Join Now
Telegram Group Join Now
ಬಡ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ: ಚಿಕ್ಕಮಕ್ಕಳ ಆಸ್ಪತ್ರೆಗೆ ಭೇಟಿ
ಮುದ್ದೇಬಿಹಾಳ: ವಿದ್ಯೆಯಲ್ಲಿ ಮಾತ್ರ ನಿಜವಾದ ಸ್ವಾತಂತ್ರ್ಯ ಇದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಕಡೆ ಹೇಳಿದ್ದಾರೆ. ವಿದ್ಯೆ ನಮ್ಮನ್ನು ಬುದ್ದಿವಂತರನ್ನಾಗಿ, ಪ್ರಜ್ಞಾವಂತರನ್ನಾಗಿ, ಪ್ರಾಜ್ಞ್ಯವಂತರನ್ನಾಗಿ ಮಾಡುತ್ತದೆ. ಯಾವ ಸಮುದಾಯದ ಪ್ರಜೆಗಳು ಪ್ರಜ್ಞಾವಂತರಾಗಿರುತ್ತಾರೋ ಆ ಸಮುದಾಯ ಸದೃಢವಾಗಿರುತ್ತದೆ. ಯಾವ ನಾಡು ಸದೃಢವಾಗಿರುತ್ತದೆಯೋ ಆ ರಾಷ್ಟ್ರ ಸದೃಢ ರಾಷ್ಟ್ರವಾಗಿ ನಿರ್ಮಾಣವಾಗುತ್ತದೆ ಎಂದು ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನುಡಿದರು.
ಮಂಗಳವಾರ ಇಲ್ಲಿನ ಪಿಲೇಕೆಮ್ಮನಗರ ಬಡಾವಣೆಯ ಕೆಇಬಿ ಹಿಂಭಾಗದಲ್ಲಿರುವ ಗುಡ್ಡದ ಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ವಿದ್ಯಾನಗರದಲ್ಲಿರುವ ಯಮನಪ್ಪ ವಡ್ಡರ, ಡಾ|ಪರಶುರಾಮ ವಡ್ಡರ ಇವರ ನಿವಾಸಕ್ಕೆ ತೆರಳಿ ಅಲ್ಲಿ ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕು ಮರೋಳ ಗ್ರಾಮದ ಬಸಪ್ಪ ಯಮನಪ್ಪ ವಡ್ಡರ ಇವರು ಒದಗಿಸಿದ ಸ್ಕೂಲ್ ಬ್ಯಾಗಗಳನ್ನು ದಿವಂಗತ ಮಾತೋಶ್ರೀ ನಾಗಮ್ಮ ಭೀಮಪ್ಪ ಬೆಳಗಲ್ ಫೌಂಡೇಶನ್ ವತಿಯಿಂದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಭವಿಷ್ಯದ ದೃಷ್ಠಿಕೋನದಲ್ಲಿ ಸದೃಢವಾಗಿರುವ ಸಮಾಜ ಕಟ್ಟಲು, ಪ್ರಜ್ಞಾವಂತ ಸಮಾಜ ನಿರ್ಮಿಸಲು ಎಲ್ಲರೂ ಮುಂದಾಗಬೇಕು. ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಫೌಂಡೇಶನ್ ಅಧ್ಯಕ್ಷ ಹಣಮಂತ ಬೆಳಗಲ್ಲ ಅವರ ಸೇವೆ ನಾಡಿಗೆ ಮಾದರಿಯಾಗಿದೆ ಎಂದರು.
ಫೌಂಡೇಶನ್ ಅಧ್ಯಕ್ಷ ಹಣಮಂತ ಬೆಳಗಲ್ಲ ಅವರು ಮಾತನಾಡಿ ಮುಂದಿನ ದಿನಗಳಲ್ಲಿ 30 ಗ್ರಾಮಗಳಿಗೆ ಹೋಗಿ ವಡ್ಡರ ಸಮಾಜದ ಬಡ ವಿದ್ಯಾರ್ಥಿಗಳಿಗೆ ಫೌಂಡೇಶನ್ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್ ವಿತರಿಸುವ ಯೋಜನೆ ಇದೆ ಎಂದರು.
ತಾಪಂ ಇಓ ವೆಂಕಟೇಶ ವಂದಾಲ, ಸಮಾಜ ಸೇವಕ ಯಮನಪ್ಪ ವಡ್ಡರ (ಮದರಿ), ಬಸಪ್ಪ ವಡ್ಡರ, ರಮೇಶ ತಂಗಡಗಿ, ನಾಗಪ್ಪ ವಡ್ಡರ, ಯಲ್ಲಪ್ಪ ಮಕ್ತೇದಾರ, ಸಿದ್ದು ಯಂಪೂರೆ, ದ್ಯಾಮಣ್ಣ ವಡ್ಡರ ಸೇರಿ ಹಲವರು ಇದ್ದರು.
ಆಸ್ಪತ್ರೆಗೆ ಸ್ವಾಮೀಜಿ ಭೇಟಿ:
ಪುರಸಭೆಯ ಹಿಂಭಾಗದಲ್ಲಿರುವ ಅರ್ಜುನ ಚಿಕ್ಕಮಕ್ಕಳ ಆಸ್ಪತ್ರೆಗೆ ಚಿತ್ರದುರ್ಗ ಭೋವಿ ಗುರುಪೀಠ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಮಂಗಳವಾರ ಸಂಜೆ ಭೇಟಿ ನೀಡಿ ವೈದ್ಯರನ್ನು, ಆಸ್ಪತ್ರೆ ಸಿಬ್ಬಂದಿಯನ್ನು ಮತ್ತು ಹೊರರೋಗಿಗಳನ್ನು ಆಶೀರ್ವದಿಸಿದರು. ತಾಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ಚಿಕ್ಕಮಕ್ಕಳ ತಜ್ಞ ಡಾ|ಪರಶುರಾಮ ವಡ್ಡರ, ಯಮನಪ್ಪ ವಡ್ಡರ, ಹಣಮಂತ ಬೆಳಗಲ್ಲ ಆಸ್ಪತ್ರೆಯ ಸಿಬ್ಬಂದಿ ಸೇರಿ ಹಲವರು ಇದ್ದರು.
WhatsApp Group Join Now
Telegram Group Join Now
Share This Article