ಬಳ್ಳಾರಿ. ಜು. 31 : ಗಾನಕೆ ಸೋಲದ ಮನಸೆಯಿಲ್ಲ ಎನ್ನುವ ಹಾಗೆ ದೇವಾನುದೇವತೆಗಳೇ ಸಂಗೀತಕ್ಕೆ ಮನ ಸೋತಿದ್ದಾರೆ ಕರ್ನಾಟಕದಲ್ಲಿ ಕರ್ನಾಟಕ ಸಂಗೀತ ಮತ್ತು ಹಿಂದುಸ್ತಾನಿ ಸಂಗೀತದ ದಿಗ್ಗಜರು ಇದ್ದಾರೆ ಸಂಗೀತದಲ್ಲಿ ಇರುವ ಶಕ್ತಿ ಯಾವ ಕಲೆಯಲ್ಲೂ ಇಲ್ಲ ಉತ್ತರ ಕರ್ನಾಟಕದಲ್ಲಿ ಹಿಂದುಸ್ತಾನಿ ಗಾಯಕರು ಬಹಳ ಜನ ಇದ್ದಾರೆ ಅದರಲ್ಲಿ ಬಹು ಮುಖ್ಯವಾಗಿ ಪಂಚಾಕ್ಷರಿ ಗವಾಯಿಗಳು ಪುಟ್ಟರಾಜ ಗವಾಯಿಗಳು ಹಾನಗಲ್ ಕುಮಾರ ಸ್ವಾಮಿಗಳು ಮಲ್ಲಿಕಾರ್ಜುನ್ ಮನ್ಸೂರ್, ಬಸವರಾಜ್ ರಾಜಗುರು, ಗಂಗೂಬಾಯಿ ಹಾನಗಲ್, ಸವಾಯಿ ಗಂಧರ್ವರು, ನಾಕೋಡು ಫ್ಯಾಮಿಲಿ, ರಾಜಶೇಖರ್ ಮನ್ಸೂರ್, ಪಂಡಿತ್ ವೆಂಕಟೇಶ್ ಕುಮಾರ್ ಮುಂತಾದವರು ಅಂತರಾಷ್ಟ್ರ ಮಟ್ಟಕ್ಕೆ ಹೋಗಿ ತಮ್ಮ ಪ್ರದರ್ಶನ ನೀಡಿ ಬಂದಿದ್ದಾರೆ. ಇಂತಹ ದಿಗ್ಗಜರ ಕಂಠದಿಂದ ಮೂಡಿ ಬಂದ ಅಲಾಪ್ಗಳನ್ನು ಕೇಳುವುದೇ ಸೌಭಾಗ್ಯ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ಅಭಿಪ್ರಾಯಪಟ್ಟರು.
ಅವರು ನಗರದ ಬ್ಯಾಂಕರ್ಸ್ ಕಾಲೋನಿಯಲ್ಲಿ ವೀಣಾಶ್ರೀ ಮಹಿಳಾ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡ ಶ್ರಾವಣ ಸಂಗೀತ ಕಾರ್ಯಕ್ರಮವನ್ನು ರವರು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಸಂಗೀತಗಾರರ ಆಹಾರ ಪದ್ಧತಿಗಳು ಜೀವನ ಶೈಲಿ ನಿರಂತರ ಅಭ್ಯಾಸ ಏಕಾಗ್ರತೆ ಅವರ ಸಿರಿಕಂಟವನ್ನು ಹಿಡಿ ದಿಟ್ಟುಕೊಳ್ಳುತ್ತವೆ ಇದರ ಹಿಂದೆ ಅವರ ಕಠಿಣ ಪರಿಶ್ರಮ ಸಾಧನೆಗಳು ನಮ್ಮನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತವೆ ಸಂಗೀತದಿಂದ ನಮ್ಮ ರೋಗಗಳನ್ನು ಗುಣಪಡಿಸಕೊಳ್ಳಬಹುದು ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಮ್ಯೂಸಿಕ್ ತೆರಪಿ ಪ್ರಾರಂಭ ಮಾಡಿದ್ದಾರೆ ಮ್ಯೂಸಿಕ್ ಹಾಕಿ ಆಪರೇಷನ್ ಗಳನ್ನು ಮಾಡುತ್ತಿದ್ದಾರೆ ಕಾರಣ ತಾವುಗಳೆಲ್ಲ ಕಲಾಭಿಮಾನಿಗಳು ಕಲಾವಿದರನ್ನು ಪ್ರೋತ್ಸಾಹಿಸಿ ತಮ್ಮ ನೆರವನ್ನು ನೀಡಬೇಕೆಂದು ಸಭಿಕರಲ್ಲಿ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಕಲಾವಿದರ ಸಂಘದ ಅಧ್ಯಕ್ಷರಾದ ಎಲ್ಲನಗೌಡ ಶಂಕರ್ ಬಂಡೆ ಮಾತನಾಡಿ ಸಂಗೀತ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರಿರುವುದು ನಮ್ಮ ಪುಣ್ಯ ಮುಂದೆಯೂ ಇದೇ ರೀತಿ ನಮ್ಮ ಕಾರ್ಯಕ್ರಮಗಳಿಗೆ ಆಗಮಿಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.
ವೇದಿಕೆಯ ಮೇಲೆ ಬಯಲಾಟ ಅಕಾಡೆಮಿಯ ಮಾಜಿ ಸದಸ್ಯರಾದ ಎಚ್ ತಿಪ್ಪೇಸ್ವಾಮಿ ಅಲಾಪ್ ಕಲಾಸಂಘದ ಹಾಗೂ ರಾಘುವ ಕಲಾಮಂದಿರದ ಮ್ಯಾನೇಜರ್ ರಮಣಪ್ಪ ಭಜಂತ್ರಿ ತೊಗಲುಗೊಂಬೆ ಕಲಾವಿದ ಸುಬ್ಬಣ್ಣ ಜಾನಪದ ಗಾಯಕ ವೀರೇಶ್ ದಳವಾಯಿ ಬೈಲಾಟ ಕಲಾವಿದ ನಾಗನಗೌಡ, ಶಿವರುದ್ರಯ್ಯ, ತಬಲಾ ವಿರೂಪಾಕ್ಷಪ್ಪ, ಕಾಲೋನಿಯ ಹಿರಿಯರಾದ ಮಂಗಳಮ್ಮ ಶಶಿಕಲಾ ಲಲಿತಾ ಗಾಯಕ ಎಮ್ಮಿಗನೂರು ಜಡೇಶ್ ಉಷಾ ಸಂಗನಕಲ್ಲು ಮುಂತಾದವ್ರು ವೇದಿಕೆ ಮೇಲೆ ಉಪಸ್ಥಿತರಿದ್ದರು ಸಿರುಗುಪ್ಪ ತಾಲೂಕಿನ ಅರಳಿಗನ್ನೂರಿನ ಹಿಂದೂಸ್ತಾನ ಗಾಯಕ ದೊಡ್ಡ ಹುಸೇನಪ್ಪ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು ಹಾರ್ಮೋನಿಯಂ ಮುದ್ದಾಟನೂರ್ ತಿಪ್ಪೇಸ್ವಾಮಿ, ತಬಲಾ ಸಾತ್ನಳ್ಳಿ ವಿರುಪಾಕ್ಷಪ್ಪ, ಇದ್ದರು ಕಾಲೋನಿಯಾ ಹಿರಿಯರಾದ ಮಂಗಳ ಹಾಡುಗಳನ್ನು ಹಾಡಿದರು ಯಲ್ಲನಗೌಡ ಶಂಕರ್ ಬಂಡೆ ಮತ್ತು ಜಡೇಶ್ ಅವರು ಭಾವಗೀತೆಗಳನ್ನು ಮತ್ತು ಜಾನಪದ ಗೀತೆಗಳನ್ನು ಹಾಡಿದರು ವೀರೇಶ್ ದಳವಾಯಿ ನಿರೂಪಿಸಿದರು ಜಡೇಶ್ ಪ್ರಾರ್ಥಿಸಿದರು ಸುಬ್ಬಣ್ಣ ವಂದಿಸಿದರು ಶ್ರಾವಣ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು