ಶಿಕ್ಷಕನಿಗೆ ನಿವೃತ್ತಿ ಎನ್ನುವುದೇ ಇರುವುದಿಲ್ಲ: ಜಿ.ಸಿ. ಕೋಟಗಿ

Ravi Talawar
ಶಿಕ್ಷಕನಿಗೆ ನಿವೃತ್ತಿ ಎನ್ನುವುದೇ ಇರುವುದಿಲ್ಲ: ಜಿ.ಸಿ. ಕೋಟಗಿ
WhatsApp Group Join Now
Telegram Group Join Now

ಎಂ. ಕೆ. ಹುಬ್ಬಳ್ಳಿ: ಶಿಕ್ಷಕನಿಗೆ ನಿವೃತ್ತಿ ಎನ್ನುವುದೇ ಇರುವುದಿಲ್ಲ. ವಿದ್ಯಾರ್ಥಿಗಳಾದವರಿಗೆ ನಿರಂತರವಾಗಿ ಬೋಧಕನಾಗಿರುತ್ತಾನೆಎಂದು ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿವಿಜೇತ ನಿವೃತ್ತ ಪ್ರಾಂಶುಪಾಲ ಜಿ.ಸಿ. ಕೋಟಗಿಅಭಿಪ್ರಾಯ ಪಟ್ಟರು.

ಇಟಗಿ ಗ್ರಾಮದ ಚನ್ನಮ್ಮ ರಾಣಿ ಸ್ಮಾರಕಹೈಸ್ಕೂಲ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದನಿ.ಶಿಕ್ಷಕ ಸುರೇಶ ತುರಮರಿ ಅವರಿಗೆಶಿಷ್ಯರ ಬಳಗ ಮತ್ತು ಸ್ನೇಹಿತರಿಂದ ನಡೆದಸಾರ್ಥಕ ಸೇವೆಗೆ ಸಂಭ್ರಮದ ಸನ್ಮಾನ
ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕತೆ ಭರಾಟೆ ಮತ್ತು ಡಿಜಿಟಲ್ಯುಗದಲ್ಲಿ ಗುರು-ಶಿಷ್ಯರಪರಂಪರೆಯನ್ನು ಉಳಿಸಿ, ಬೆಳೆಸಬೇಕಾಗಿದೆಯಾವುದೇ ದೇಶ ಅಭಿವೃದ್ಧಿಕಾಣಬೇಕಾದರೆ, ಶಿಕ್ಷಕನುಕಾರಣನಾಗುತ್ತಾನೆ. ಮೋಕ್ಷ ಸಾಧನೆಗೆ ಗುರುವಿನ ಬೋಧನೆ ಬೇಕು. ನಿ.ಶಿಕ್ಷಕಸುರೇಶ ತುರಮರಿ ಅವರ ಸೇವೆಸಾರ್ಥಕವಾಗಿದೆ ಎನ್ನುವುದಕ್ಕೆ ಸೇರಿದವಿದ್ಯಾರ್ಥಿಗಳೇ ಸಾಕ್ಷಿ ಎಂದರು.

ಅವರೊಳ್ಳಿ-ಬೀಳಕಿಯ ಶ್ರೀ ಚನ್ನಬಸವದೇವರು ಮಾತನಾಡಿ, ಭೂಮಿಯಲ್ಲಿಹುಟ್ಟಿದವರೆಲ್ಲ ಮಹಾತ್ಮ,ಸಾಧಕರಾಗುವುದಿಲ್ಲ. ಗುರುವಿನ ಕರುಣೆ,ಒಳ್ಳೆ ಆದರ್ಶ, ಗುಣಗಳಿಂದಆದರ್ಶಪ್ರಾಯರಾಗುತ್ತಾರೆ ಎಂದರು.

ಚಿಕ್ಕಮುನವಳ್ಳಿಯ ಶ್ರೀ ಶಿವಪುತ್ರಶ್ರೀಗಳು, ತೋಲಗಿ-ಚಿಕ್ಕಲದಿನ್ನಿಯ ಶ್ರೀಅದೃಶ್ಯಶಿವಾಚಾರ್ಯ ಮಹಾಸ್ವಾಮಿಗಳುಮಾತನಾಡಿದರು.ನಿವೃತ್ತ ಶಿಕ್ಷಕ ಸುರೇಶ ತುರಮರಿ ಅವರುವಿದ್ಯಾರ್ಥಿಗಳು ಮತ್ತು ಗೆಳೆಯರಿಂದ
ಸನ್ಮಾನ ಸ್ವೀಕರಿಸಿ, ತಮ್ಮ ಸೇವಾ ಅವದಿಅನುಭವಗಳನ್ನು ವಿವರಿಸಿದರು. ರಾಣಿ ಚನ್ನಮ್ಮ ಪ. ಪೂ ಕಾಲೇಜು ನಿವೃತ್ತ ಪ್ರಾಚಾರ್ಯ ವಿ.ವಿ.ಬಡಿಗೇರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚನ್ನಮ್ಮನ ಕಿತ್ತೂರು ತಾಲೂಕ ಕಸಾಪಅಧ್ಯಕ್ಷ ಡಾ.ಎಸ್.ಬಿ.ದಳವಾಯಿ, ನಿವೃತ್ತಶಿಕ್ಷಕರಾದ ಕೆ.ಬಿ.ನಾವಲಗಟ್ಟಿ,ಬಿ.ಬಿ.ಕಾದ್ರೋಳ್ಳಿ, ಮಾಜಿ ತಾಪಂ ಸದಸ್ಯ ಶ್ರೀಕಾಂತಇಟಗಿ, ಉಪನ್ಯಾಸಕ ಜಗದೀಶ ಪೂಜಾರ
ಪಿಎಸ್‌ಐಗಳಾದ ಕಲ್ಮೇಶ ಬಣ್ಣೂರ, ಉಮಾ ಬಸರಕೋಡ, ಎಸ್.ಎಸ್.ಬದಾಮಿ, ಬಸನಗೌಡಾ ಪಾಟೀಲ, ನಿಂಗಪ್ಪ ಠಕ್ಕಾಯಿ, ಕಿರಣ ಗಣಾಚಾರಿ,ದಶರಥ ಬನೋಶಿ ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article