ಬೆಳಗಾವಿ: ನಿನ್ನೆ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಕತ್ತಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯರದ್ದು ಜನತಾ ಪರಿವಾರ, ನಮ್ಮದು ಜನತಾ ಪರಿವಾರ. ಈಗ ಸಿಎಂ ಸಿದ್ದರಾಮಯ್ಯ ಮೇಲೆ ಹಗರಣದ ಗೂಬೆ ಬಂದಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಬಹುದು.ವೈಯಕ್ತಿಕವಾಗಿ ಅವರು ದಕ್ಷ, ಆರ್ಥಿಕ ನಿರ್ವಹಣೆ ಮಾಡುವ ನಾಯಕ ಎಂದು ಹಾಡಿಗೊಳಿದರು.
ಅಂದಿನ ರಾಜಕಾರಣ, ಇಂದಿನ ರಾಜಕಾರಣದ ವ್ಯಾಖ್ಯಾನ ಬೇರೆ ಇದೆ. B.S.ಯಡಿಯೂರಪ್ಪ, ಕುಮಾರಸ್ವಾಮಿ ಮೇಲೆಯೂ ಕಳಂಕ ಬಂದಿದೆ. ಬಿ.ಎಸ್.ಯಡಿಯೂರಪ್ಪ ಸಹ ಸ್ವಚ್ಛ, ದಕ್ಷ ನಾಯಕ. ಸೈಕಲ್ ಮೇಲೆ ಪಕ್ಷ ಕಟ್ಟಿದಂತವರಿಗೆ ಕಳಂಕ ಕಟ್ಟುವ ಕೆಲಸ ಮಾಡಿದ್ರು, ವಿರೋಧ ಪಕ್ಷದ ನಾಯಕ ಅಶೋಕ್ ವಿರುದ್ಧವೂ ಆರೋಪ ಬರುತ್ತಿದೆ. ಇಂದಿನ ರಾಜಕಾರಣದಲ್ಲಿ ಯಾರೂ ಬೆಳೆಯಲು ಪ್ರಯತ್ನ ಮಾಡುತ್ತಿಲ್ಲ. ಬೇರೆಯವರನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧನ ಹೊರಹಾಕಿದ ರಮೇಶ್ ಕತ್ತಿ, ಆಡು ಮುಟ್ಟದ ಸೊಪ್ಪಿಲ್ಲಿ ಕತ್ತಿ ಸಹೋದರರು ನೋಡದ ಪಕ್ಷವೇ ಇಲ್ಲ. ನಾವು ಎಲ್ಲ ಪಕ್ಷಗಳ ಜೊತೆ ಒಡನಾಟ ಹೊಂದಿದ್ದೇವೆ. ಇಂದಿನ ರಾಜಕಾರಣದ ಸ್ಥಿತಿ ಸರಿಯಿಲ್ಲ. ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಹಿರಿಯರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕತ್ತಿ ರಾಜಕಾರಣದಲ್ಲಿ ಇದ್ದರೂ ಇರದೇ ಇದ್ದರೂ ಜನರ ಪರ ಇದೆ ಎಂದರು. ಈ ಮೂಲಕ ರಮೇಶ್ ಕತ್ತಿ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ.