ಪಂಚಾಂಗದಿಂದ ಭಯಭೀತರಾಗುವ ಅಗತ್ಯವಿಲ್ಲ, ಅದರ ಸಹಾಯದಿಂದ ಬದುಕಿನ ಪೂರ್ವ ಯೋಜನೆ ರೂಪಿಸಿಕೊಳ್ಳಬಹುದಾಗಿದೆ   ; ಡಾ. ಎ ಮಹೇಶ್ ಶರ್ಮ 

MK HasiruKranti
ಪಂಚಾಂಗದಿಂದ ಭಯಭೀತರಾಗುವ ಅಗತ್ಯವಿಲ್ಲ, ಅದರ ಸಹಾಯದಿಂದ ಬದುಕಿನ ಪೂರ್ವ ಯೋಜನೆ ರೂಪಿಸಿಕೊಳ್ಳಬಹುದಾಗಿದೆ   ; ಡಾ. ಎ ಮಹೇಶ್ ಶರ್ಮ 
WhatsApp Group Join Now
Telegram Group Join Now
ಬಳ್ಳಾರಿ. ಮಾ. 21.:  ಪಂಚಾಂಗದಲ್ಲಿ ವಿವಿಧ ರಾಶಿಗಳ ಭವಿಷ್ಯವೂ ಏರುಪೇರಾಗಿದ್ದರು ಆತಂಕ ಪಡುವ ಅಗತ್ಯವಿಲ್ಲ ಪಂಚಾಂಗ ತಿಳಿದುಕೊಳ್ಳುವುದರಿಂದ ಬದುಕಿನ ಭವಿಷ್ಯದ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ನಾಗಲ ಕೆರೆಯ ಡಾ. ಮಹೇಶ್ ಶರ್ಮ ತಿಳಿಸಿದರು
ಶ್ರೀ ಪರಾಭವ ನಾಮ ಸಂವತ್ಸರ ನೂತನ ವರ್ಷದ ಶುಭ ಸಂದರ್ಭದಲ್ಲಿ   ರಾಘವ ಮೆಮೋರಿಯಲ್ ಅಸೋಶಿಯೇಶನ್, ಬಳ್ಳಾರಿ ವತಿಯಿಂದ  ರಾಘವ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ  ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಪಂಚಾಂಗ ಪಠಣ ಮಾಡುವ ಮೂಲಕ ನಾಗರಿಕರಿಗೆ ಕಿವಿಮಾತು ಹೇಳಿದರು.
 ಈ ವರ್ಷದ ರಾಶಿ ಫಲ ಫಲಗಳ ಬಗ್ಗೆ   ಮತ್ತು ಮಳೆ ಮತ್ತು ರಾಜಕೀಯ ಬಗ್ಗೆ ವಿವರಣೆ ನೀಡಿ, ಈ ವರ್ಷ ಉತ್ತಮ ಮಳೆ ಬೆಳೆ ಆಗಲಿದ್ದು ಹಳದಿ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದರು.
ಪಂಚಾಂಗ ಕರ್ತ ಬಳ್ಳಾರಿಯ ನಾಗಲ ಕೇರಿ ನಿವಾಸಿಗಳಾದ ಡಾಕ್ಟರ್ ಎ ಮಹೇಶ್ ಶರ್ಮಾ ಮತ್ತು ಸಂಸ್ಥೆಯ ಗೌರವಾಧ್ಯಕ್ಷ  ಕೆ ಚನ್ನಪ್ಪ ಅಧ್ಯಕ್ಷರಾದ  ಕೆ ಕೊಟೆಶ್ವರ ರಾವ್ ಉಪಾಧ್ಯಕ್ಷ  ಹೆಚ್ ವಿಷ್ಣುವರ್ಧನ್ ರೆಡ್ಡಿ  , ಬಾಣಪುರ ರಮೇಶ ಗೌಡ, ಖಜಾಂಚಿ  ಪಿ ಧನಂಜಯ  ಎಲ್ಲರೂ ಸೇರಿ ಶ್ರೀ ರಾಮನ ಫೋಟೋಗೆ ಪೂಜೆ ಸಲ್ಲಿಸಿದರು.
 ಈ ಕಾರ್ಯಕ್ರಮದಲ್ಲಿ  ಎನ್ ಬಸವರಾಜ್ ಪ್ರಾರ್ಥಿಸಿದರು  ಎನ್ ಪ್ರಕಾಶ್  ಕಾರ್ಯಕ್ರಮ ನಿರ್ವಹಿಸಿದರು. ತದನಂತರ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು,ಅಜೀವ ಸದ್ಯಸರು,
ಕಲಾಭಿಮಾನಿಗಳು  ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article