ಕನ್ನಡದ ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಇದೆ: ಗೌರಮ್ಮ ಕರ್ಕಿ

Ravi Talawar
ಕನ್ನಡದ ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ಪ್ರಜ್ಞೆ ಇದೆ: ಗೌರಮ್ಮ ಕರ್ಕಿ
WhatsApp Group Join Now
Telegram Group Join Now

ಬೆಳಗಾವಿ: ಕನ್ನಡದ ಶಿವಶರಣರ ವಚನ ಸಾಹಿತ್ಯದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆ ಇತ್ತು. ಹೀಗಾಗಿ ೧೨ನೇ ಶತಮಾನತದ ಬಸವಾದಿ ಶಿವಶರಣರನ್ನು “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಎನ್ನಬಹುದು ಎಂದು ನಿವೃತ್ತ ಶಿಕ್ಷಕಿ ಗೌರಮ್ಮ ಕರ್ಕಿ ಅಭಿಪ್ರಾಯಪಟ್ಟರು.

ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಮಾಸಿಕ ಅನಭಾವ ಗೋಷ್ಠಿಯಲ್ಲಿ ” ಶರಣರ ವೈಜ್ಞಾನಿಕ ದೃಷ್ಟಿಕೋನ ” ವಿಷಯದ ಕುರಿತು ಗೌರಮ್ಮ ಕರ್ಕಿ ಅವರು ಉಪನ್ಯಾಸ ನೀಡಿದರು.

ಇವತ್ತಿನ ವೇಗದ ಜಗತ್ತಿನಲ್ಲಿ ಸ್ತ್ರೀ ಶೋಷಣೆ, ಅತ್ಯಾಚಾರ, ಕೊಲೆ, ಮೂಢನಂಬಿಕೆಗಳಿಗೆ ನಿರಾತಂಕ ಪ್ರಚಾರ ಸಮಾಜದ ಸ್ವಾಸ್ಥ್ಯವನ್ನ ನಾಶಗೊಳಿಸುತ್ತಿದೆ. ಈ ಕಲುಷಿತ ವಾತಾವರಣದಿಂದ ಯುವ ಪೀಳಿಗೆ ಹೊರ ಬರಲು ಪೋಷಕರು ವಚನ ಸಾಹಿತ್ಯ ಅಗತ್ಯದ ಜಾಗೃತಿ ಮೂಡಿಸಬೇಕಿದೆ ಎಂದು ಕರ್ಕಿ ತಿಳಿಸಿದರು.

ಶರಣರು ರಚಿಸಿದ ವಚನ ಸಾಹಿತ್ಯ ಅನುಭಾವದ ನಡೆ, ನುಡಿ, ಸಂಸ್ಕೃತಿ ಸಂಕೇತವಾಗಿದೆ. ಅದರಲ್ಲೂ 12ನೇ ಶತಮಾನದಲ್ಲಿ ಸುಮಾರು ೩೩ ಶರಣೆಯರು ವಚನಗಳನ್ನು ರಚಿಸಿರುವುದು ಕನ್ನಡ ನಾಡಿನ ಹೆಮ್ಮೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಬಸವರಾಜ ರೊಟ್ಟಿ ಅವರು ಕೆಲವು ಜನರು ಶರಣರ ವಚನಗಳ ಆಶಯಗಳ ವಿರುದ್ಧದ ಹುನ್ನಾರ ನಡೆಸಿದ್ದಾರೆ.”ವಚನ ದರ್ಶನ” ಎಂಬ ಕೃತಿಯನ್ನು ರಚಿಸಿ,ಶರಣರ ಸಿದ್ದಾಂತ ಗಳನ್ನು ತಿರುಚಿ ಪ್ರಚಾರ ಮಾಡತ್ತಿದ್ದಾರೆ.ಅಲ್ಲದೇ “ಶರಣ ಶಕ್ತಿ” ಎಂಬ ಚಲನಚಿತ್ರ ದಲ್ಲಿ ಅಸಂಬದ್ಧ ವಿಚಾರಗಳನ್ನು ಹೇಳುವ ಮೂಲಕ ಬಸವಾದಿ ಶರಣರ ಮೂಲ ಆಶಯಗಳನ್ನು ಹಾಳು ಮಾಡುತ್ತಿದ್ದಾರೆ..ಇಂತಹ ಕೃತ್ಯವನ್ನು ಜಾಗತಿಕ ಲಿಂಗಾಯತ ಮಹಾಸಭೆಯು ಉಗ್ರವಾಗಿ ಖಂಡಿಸುತ್ತದೆ.ಅಲ್ಲದೆ ಉಗ್ರ ಹೋರಾಟವನ್ನು ಮಾಡುತ್ತದೆ ಎಂದರು.

ಮಹಾಂತೇಶ ದೀವಟಗಿ  ಮತ್ತು ಮಹಾದೇವಿ ದೀವಟಗಿ ಷಟ್ ಸ್ಥಲ್ ಧ್ವಜಾರೋಹಣ ನೆರವೇರಿಸಿದರು, ಅನ್ನಪೂರ್ಣ ಮಳಗಲಿ ಸ್ವಾಗತಿಸಿದರು, ಮಹಾನಂದಾ ಪರುಶೆಟ್ಟಿ ನಿರೂಪಿಸಿದರು, ಅನಿತಾ ಚಟ್ಟರ ವಂದಿಸಿದರು.

ಕಾರ್ಯಕ್ರಮದಲ್ಲಿ  ಅಶೋಕ ಮಳಗಲಿ,ಎಸ್ ಜಿ.ಸಿದ್ನಾಳ,ಮುರಿಗೆಪ್ಪ ಬಾಳಿ,ಈರಣ್ಣ ಚಿನಗುಡಿ,ಚಂದ್ರಪ್ಪ ಬೂದಿಹಾಳ, ಮೋಹನ ಗುಂಡ್ಲೂರ,ಬಿ ಎಸ್ ಮತ್ತಿಕೊಪ್ಪ,ಮಹಾಂತೇಶ ತೋರಣಗಟ್ಟಿ,ಗುರವನ್ನರ,ವಿರುಪಾಕ್ಷಿ ದೊಡಮನಿ ಬಸವರಾಜ ಚಟ್ಟರ,ಎಸ್ ಎಸ್ ಪೂಜಾರ,ಕೆಂಪಣ್ಣ ರಾಮಾಪುರಿ,ರೇಖಾ ಮುದ್ದಾಪೂರ ,ಸುಜಾತಾ ಮತ್ತಿಕಟ್ಟಿ,ರತ್ನಾ ಬೆಣಚಮರ್ಡಿ,ಸುಧಾ ರೊಟ್ಟಿ, ಜಯಾ ನೇಮಗೌಡರ,ರುದ್ರಗೌಡರ ದಂಪತಿ,ಸುಲೋಚನ ವಸ್ತ್ರದ,ಶೊಭಾ ಶಿವಳ್ಳಿ,ನೇತ್ರಾ ರಾಮಾಪುರಿ, ತ್ರಿವೇಣಿ ಪಾಟೀಲ, ವಿವಿಧ ಬಡಾವಣೆಗಳ ಬಸವ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article