ಅಲ್ಲಿ ಪುರದಲ್ಲಿ ಬಸ್ ಸ್ಟಾಪ್, ಸರ್ಕಾರಿ ಆಸ್ಪತ್ರೆ  ನಿರ್ಮಿಸಿ : ಸಂಸದರಿಗೆ ಸಾರ್ವಜನಿಕರ ಮನವಿ 

Ravi Talawar
ಅಲ್ಲಿ ಪುರದಲ್ಲಿ ಬಸ್ ಸ್ಟಾಪ್, ಸರ್ಕಾರಿ ಆಸ್ಪತ್ರೆ  ನಿರ್ಮಿಸಿ : ಸಂಸದರಿಗೆ ಸಾರ್ವಜನಿಕರ ಮನವಿ 
WhatsApp Group Join Now
Telegram Group Join Now
ಬಳ್ಳಾರಿ:15. ನಗರದ ಹೊಸಪೇಟೆ ರಸ್ತೆಯ ಅಲ್ಲಿಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಹಾಗೂ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಲಿಪುರದಲ್ಲೇ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿ , ಅಲೀಪುರ ನಿವಾಸಿಗಳು ಬೆಸ್ಟ್ ಶಾಲೆ, ಕಾಲೇಜು ಪ್ರಧಾನ ಕಾರ್ಯದರ್ಶಿ, ಅನುದಾನಿತ ಶಾಲೆಗಳ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಮನ್ನೆ ಅವರ ನೇತೃತ್ವದಲ್ಲಿ ಸoಸದ ಈ.ತುಕಾರಾಂ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನ್ನೆ ಶ್ರೀನಿವಾಸ್ ಅವರು ಮಾತನಾಡಿ, ಅಲ್ಲೀಪುರ ವ್ಯಾಪ್ತಿಯಲ್ಲಿ ಸಾಕಷ್ಟು ಜನರು ಕೂಲಿ ಕಾರ್ಮಿಕರಿದ್ದು, ಬಡಜನರು ಆರೋಗ್ಯ ಸಮಸ್ಯೆ ಎದುರಾದರೆ ನಗರದ ಆಸ್ಪತ್ರೆಗೆ ತೆರಳುವುದು ಸಮಸ್ಯೆಯಾಗುತ್ತದೆ, ಬಡ ಜನರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ತೀರಾ ಕಷ್ಟ ಏನೆಸಿದೆ, ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಾದರೆ ಎಲ್ಲ ವರ್ಗದವರಿಗೂ ಅನುಕೂಲವಾಗಲಿದೆ. ಈ ಪ್ರದೇಶದಲ್ಲಿ ಅತ್ಯಂತ ಹಳೆಯ ಸರ್ಕಾರಿ ಶಾಲೆ ಇದ್ದು, ಸಂಪೂರ್ಣ ಶಿಥಿಲಗೊಂಡಿದೆ. ಇದೇ ಸ್ಥಳದಲ್ಲೇ ಆಸ್ಪತ್ರೆ ನಿರ್ಮಾಣವಾದರೆ ಬಡ ಜನರಿಗೆ ಅನುಕೂಲವಾಗಲಿದೆ, ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಪ್ರಮುಖವಾಗಿ ಈ ಭಾಗದಲ್ಲಿ ವಿದ್ಯಾರ್ಥಿಗಳು, ಕೂಲಿಕಾರ್ಮಿಕರು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯಾವುದೇ ಭಾಗಕ್ಕೂ ಪ್ರಯಾಣ ಬೆಳೆಸಬೇಕಾದರೆ ಅಟೋ ಅಥವಾ ಖಾಸಗಿ ವಾಹನಗಳ ಮೂಲಕ ನಗರ ಬಸ್ ನಿಲ್ದಾಣ ತಲುಪಬೇಕಿದೆ, ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಗಳ ಕೊರತೆಗಳಿವೆ, ಈ ಹಿನ್ನೆಲೆಯಲ್ಲಿ ಅಲ್ಲಿಪುರದ ರಾಷ್ಟ್ರೀಯ ಹೆದ್ದಾರಿ 63 ಮುಖ್ಯ ರಸ್ತೆಯಲ್ಲಿ ಬಸ್ ನಿರ್ಮಿಸಬೇಕು ಎಂದು ಮನವಿ ಮಾಡಿದರು. ನಂತರ ಸoಸದ ಈ.ತುಕಾರಾಂ ಅವರು ಸ್ಥಳೀಯರೊಂದಿಗೆ ಶಿಥಿಲಗೊಂಡ ಸರ್ಕಾರಿ ಹಳೆ ಶಾಲೆಗೆ ಭೇಟಿ ನೀಡಿ ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಯಾವುದೇ ಸಮಸ್ಯೆಗಳಿರಲಿ ಗಮನಕ್ಕೆ ತಂದರೆ ಖಂಡಿತ ಸ್ಪಂದಿಸುವ ಸ್ವಭಾವ ನನ್ನದು, ಅಲ್ಲಿಪುರ, ವಿನಾಯಕ ನಗರ ಸೇರಿ ವ್ಯಾಪ್ತಿಯ ಜನರು ಭೇಟಿ ನೀಡಿ ಮನವಿ ಸಲ್ಲಿಸಿದ್ದು, ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ, ಶೀಘ್ರದಲ್ಲೇ ಸಮಸ್ಯೆಯನ್ನು ಸರಿಪಡಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಹೊನ್ನೂರಪ್ಪ, ಪರುಶರಾಮ, ತೂರ್ಪು ರಾಮರೆಡ್ಡಿ, ವೆಂಕಟ್ ಸ್ವಾಮಿ, ನಾಗಿರೆಡ್ಡಿ ಸೇರಿದಂತೆ ಇತರರಿದ್ದರು. ನಂತರ ಬೆಸ್ಟ್ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲ ಮಾತನಾಡಿದರು.
WhatsApp Group Join Now
Telegram Group Join Now
Share This Article