ಬಳ್ಳಾರಿ. ಮಾ. 31 ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅರಳಿಗನೂರು ಗ್ರಾಮದಲ್ಲಿ ಶೀಲಾ ಬೃಂದಾ ಕಲಾ ಟ್ರಸ್ಟ್ ವತಿಯಿಂದ ಡಾ. ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿಯಲ್ಲಿ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ರಂಗಭೂಮಿ ಕಲಾವಿದರು ನಿವೃತ್ತ ಶಿಕ್ಷಕರು ನರಸಿಂಹಮೂರ್ತಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ತಿಮ್ಮಪ್ಪ ಜಾನಪದ ಕಲಾವಿದರು ಉಮೇಶ ಅತಿಥಿ ಉಪನ್ಯಾಸಕರು ಈ ನಾಗರಾಜ್ ಭಜನೆ ಕಲಾವಿದರು ರಂಗಪ್ಪ ಕಲಾವಿದರು ಡಾಕ್ಟರ್ ಕುರವಳ್ಳಿ ತಿಮ್ಮಯ್ಯ ಸಾಹಿತಿಗಳು ರಂಗಭೂಮಿ ಕಲಾವಿದರು ಪಾಲಾಕ್ಷಿ ಸಾಹಿತಿಗಳು ಸಿರುಗುಪ್ಪ ವಸತಿಯ ಸಿಬ್ಬಂದಿಗಳಾದ ಚಂದ್ರಶೇಖರ್ ವಾರ್ಡನ್ ಶಶಿಧರ್ ವಾರ್ಡನ್ ಇತರೆ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .
ಮಾರೇಶ ತಿಪ್ಪೇಸ್ವಾಮಿ ವೀರೇಶ್ ಒಳಗೊಂಡಂತೆ ಕಾರ್ಯಕ್ರಮದಲ್ಲಿ ಅರಳಿಗಿನೂರಿನ ಶಿಕ್ಷಕರಾಗಿರ್ತಕ್ಕಂತ ಯೋಗೇಶ್ ಮತ್ತು ಮಕ್ಕಳಿಂದ ಬಯಲಾಟದ ಕುಣಿತ
ಕಿರಣ್, ಶೇಖರ್ ವಿದ್ಯಾರ್ಥಿಗಳಿಂದ ನಾಗರಾಜ್ ಕೆ ಸೂಗೂರು ಇವರಿಂದ ರಂಗಭೂಮಿಯ ಹಾಡುಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಳವಾಯಿ ವೀರೇಶ ,ಶೀಲಾ ಬೃಂದಾ ಕಲಾ ಟ್ರಸ್ಟಿನ ಕಾರ್ಯದರ್ಶಿ ದೊಡ್ಡ ಹುಸೇನಪ್ಪ ಭಾಗವಸಿದ್ದರು.
ಯುವ ರಂಗಭೂಮಿ ಕಲಾವಿದರಾದ ಉತ್ತನೂರು ರಾಮಣ್ಣನ ಮಗನಾದ ಮಾರೇಶ್ ಮಾಸ್ಟರ್ ರವರನ್ನು ರಂಗಭೂಮಿಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಿರುಗುಪ್ಪ ಆಶಾ ಕಲಾವಿದರು ಮತ್ತು ನಿವೃತ್ತಿ ಶಿಕ್ಷಕರಾಗಿರ್ತಕ್ಕಂತ ನರಸಿಂಹಮೂರ್ತಿ ರಂಗಭೂಮಿಯ ಬಗ್ಗೆ ಕೆಲವು ಚುಟುಕು ನುಡಿಗಳು ನೆರೆದ ಪ್ರೇಕ್ಷಕರನ್ನು ರಂಜಿಸಿದವು.


