ದಸ್ತು ಬರಹಗಾರರು ಒಕ್ಕೂಟದ ಪದಾಧಿಕಾರಿಗಳಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

Hasiru Kranti
ದಸ್ತು ಬರಹಗಾರರು ಒಕ್ಕೂಟದ ಪದಾಧಿಕಾರಿಗಳಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
WhatsApp Group Join Now
Telegram Group Join Now

ಹುನಗುಂದ: ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು)ಪತ್ರ ಬರಹಗಾರರು ಒಕ್ಕೂಟದ ಪದಾಧಿಕಾರಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಉಪನೊಂದನಾಧಿಕಾರಿ ಎಸ್.ಡಿ.ನಾಗಠಾಣಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ನೀಡಿದರು.
ದಸ್ತು ಬರಹಗಾರ ಮಹಾಂತೇಶ ಅಂಗಡಿ ಮಾತನಾಡಿ,ಹೊರ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ಪತ್ರ ಬರಹಗಾರರಿಗೆ ಪತ್ರ್ಯೇಕ ಲಾಗಿನ್ ಕೊಡಬೇಕು. ನೋಂದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಬಿಕ್ಕಲಂ ಕಡ್ಡಾಯಗೊಳಿಸಬೇಕು.ಎಲ್ಲ ಬರಹಗಾರರಿಗೆ ಏಕರೂಪದ ಅಧಿಕೃತ ಗುರುತಿನ ಚೀಟಿ ನೀಡಬೇಕು.
ಕಾವೇರಿ ೨.೦ ತಂತ್ರಾಂಶಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು. ರಾಜ್ಯ ಸರ್ಕಾರ ಡಿಜಲೀಕರಣದ ಹೆಸರಿನಲ್ಲಿ ಕಾವೇರಿ ೧.೦, ಕಾವೇರಿ ೨.೦ ತಂತ್ರಾಂಶಗಳನ್ನು ಜಾರಿಗೆ ತಂದಿದೆ. ಇದರಿಂದ ಪತ್ರ ಬರಗಾರರಿಗೆ ಫೇಸ್‌ಲೆಸ್ ಮತ್ತು ಪೇಪರ್‌ಲೆಸ್ ನೋಂದಣಿಗೆ ಮುಂದಾಗಿದೆ. ಇದರಿಂದ ಪತ್ರ ಬರಹಗಾರರಿಗೆ ಕೆಲಸವಿಲ್ಲದಂತಾಗಿದೆ. ಪತ್ರ ಬರಹಗಾರ ಹುದ್ದೆಯಿಂದ ತಟಸ್ಥ ಮಾಡಿದಂತಾಗಿದೆ. ಇದೇ ವೃತ್ತಿಯನ್ನು ಅವಲಂಬಿಸಿಕೊಂಡು ಬಂದಿರುವ ನಮ್ಮ ಕುಟುಂಬದ ಗತಿ ಏನು ಎಂದರು.
ದಸ್ತು ಬರಹಗಾರ ವೀರಣ್ಣಾ ಹಳಪೇಟಿ ಮಾತನಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಡಿ.೧೬ ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿ ಮಾಡಲು ಸರ್ಕಾರಕ್ಕೆ ಗಮನ ಸೆಳೆಯಲು ಉದ್ದೇಶವಾಗಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣೆ ನಡೆಸಿ ಸಂಬಂಧಿಸಿ ಸಚಿವರಿಗೆ ಅಧಿಕಾರಿಗಳಿಗೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದರು.
ದಸ್ತು ಬರಹಗಾರರಾದ,ಹನಮಂತ ತಳಗಿನಮನಿ, ಕಾಂತರಾವ್ ದೇಸಾಯಿ, ವೀರಭದ್ರಪ್ಪ ಬೆಣ್ಣೆ, ವೀರುಪಾಕ್ಷ ಬೆಣ್ಣಿ, ಹನಮಂತ ನೀರಡ್ಡಿ, ರಾಘು ಬಡಿಗೇರ ಮಹಾಂತೇಶ ಅಂಗಡಿ, ಸೇರಿದಂತೆ ಇತರರು ಇದ್ದರು.

WhatsApp Group Join Now
Telegram Group Join Now
Share This Article