ಬರಹಗಾರ ಸಮಾನತೆ ತತ್ವದಲ್ಲಿ  ಕೆಲಸ ಮಾಡಬೇಕು- ಸನತಕುಮಾರ ಬೆಳಗಲಿ ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ

MK HasiruKranti
ಬರಹಗಾರ ಸಮಾನತೆ ತತ್ವದಲ್ಲಿ  ಕೆಲಸ ಮಾಡಬೇಕು- ಸನತಕುಮಾರ ಬೆಳಗಲಿ ಫಾತಿಮಾ ಶೇಖ, ಶಂ.ಗು. ಬಿರಾದಾರ, ಸಿಸು ಸಂಗಮೇಶ ವೇದಿಕೆ
WhatsApp Group Join Now
Telegram Group Join Now

ವಿಜಯಪುರ : ಪತ್ರಕರ್ತ ಮತ್ತು ಬರಹಗಾರನಿಗೆ ಸಾಮಾಜಿಕ ಕಳಕಳಿ ಇರಬೇಕು ಸಮಾಜದ ಏರು ಪೇರುಗಳನ್ನು  ಗುರುತಿಸಿ ಸಮಾನತೆ  ತತ್ವದಲ್ಲಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹಿರಿಯ ಪತ್ರಕರ್ ಸನತಕುಮಾರ ಬೆಳಗಲಿ ಅವರು ಹೇಳಿದರು.
ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಎರಡನೇ ದಿನದ ಮೂರನೇ ಗೋಷ್ಠಿ ಲೇಖಕರೊಂದಿಗೆ ಸಂವಾದ ವಿಷಯ ಮಂಡನೆ ಅವರು ಮಾತನಾಡಿದರು.
ಕರ್ನಾಟಕದಲ್ಲಿ ವೈಚಾರಿಕ ಚಳುವಳಿ ಮತ್ತು ವೈಚಾರಿಕ ಲೇಖಕರಿಗೆ ಅನ್ಯಾಯ ಮಾಡಿದ ಘಟನೆಗಳು ಹಿಂದೆ ನಡೆದಿವೆ ಅಂತಹ ಸಂದರ್ಭದಲ್ಲಿ ಲೇಖಕ ತುಂಬಾ ಜಾಗರುಕತೆಯಿಂದ ವರ್ತಿಸಬೇಕು ಎಂದರು.
ಸಂವಾದದಲ್ಲಿ ಸಾಹಿತಿ ಡಾ ಶಿವಗಂಗಾ ರುಮ್ಮಾ ಅವರು ಮಾತನಾಡಿ  ಬರಗಾಲ ಬಿದ್ದಾಗ ಬಾಲ್ಕಿ ಪಟ್ಟದ ದೇವರು ದಲಿತರಿಗೆ ದಾಸೋಹ ಮಾಡಿದ್ದನ್ನು ವಿರೋಧಿಸಿ ಗ್ರಾಮದವರು ವಿರೋಧ ಮಾಡಿ ಬಹಿಷ್ಕಾರ ಹಾಕಿದ್ದರು ಅಂತಹ ವಾತಾವರಣದಲ್ಲಿ ಬೆಳೆದ ನಾನು ಬಸವಣ್ಣ ಮತ್ತು ಕಾರ್ಲಮಾರ್ಕ್ಸ್ ರ ಕುರಿತು ವಿರೋಧದ ಮಧ್ಯೆ ಪಿ ಎಚ್ ಡಿ ಪ್ರಬಂಧ ಮಂಡಿಸಿದ್ದು ನನ್ನ ಜೀವನದಲ್ಲಿ ಏನನ್ನು ಅಳವಡಿಸಿಕೊಳ್ಳಬೇಕು ಏನನ್ನು ಅಳವಡಿಸಿಕೊಳ್ಳಬಾರದು ಎಂಬ ದಾರಿ ತೋರಿತು ಎಂದು ಹೇಳಿದರು.
ಪ್ರಭುತ್ವವನ್ನು ವಿರೋಧಿಸುವ ಲೇಖಕರ ಸಂಖ್ಯೆ ವಿರಳವಾಗುತ್ತಿದೆ. ರಾಜಕಾರಣಿಗಳಂತೆ ಲೇಖಕರು ಕೂಡಾ ಸ್ಥಿತ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದಾರೆ ಪ್ರಭುತ್ವದ ವಿರುದ್ಧ ಸಾಮಾಜಿಕ ಬದ್ಧತೆ ಕಾಪಾಡಿಕೊಳ್ಳಬೇಕಿದೆ ಎಂದರು.
ಬಸವಣ್ಣನಿಗೆ ಯಾರಾದರೂ ವಿರೋಧಿಗಳಿದ್ದರೆ ಅದು ಲಿಂಗಾಯತರಲ್ಲಿಯೇ ಇದ್ದಾರೆ ಎಂದರು.
ಸಂವಾದದಲ್ಲಿ ಬಾಗಲಕೋಟ ವಿಶ್ವವಿದ್ಯಾಲಯದ ಕುಲಸಚಿವ ಡಾ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ ಲೇಖಕನಾದವನಿಗೆ ಧರ್ಮ ಮತ್ತು ಜಾತಿ ಮುಖ್ಯವಾದರೆ ಸಮಾಜ ವಿಘಟನೆಯಾಗುತ್ತದೆ. ಮೌಢ್ಯ ಬಿತ್ತುವ ಸಾಹಿತಿ ಸಮಾಜಕ್ಕೆ ಹೊರೆಯಾಗುತ್ತಾನೆ ಲೇಖಕನಾದವನಿಗೆ ವಾಸ್ತವಿಕ ಪ್ರಜ್ಞೆ ಇರಬೇಕು ಎಂದು ಅವರು ಹೇಳಿದರು.
ಪರಿಶಿಷ್ಟ ಜಾತಿ ಮೀಸಲಾತಿ ಎಂಬುದು ಆರ್ಥಿಕವಾಗಿ ಹಿಂದುಳಿದವರಿಗೆ ಅಲ್ಲ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆಗೆ ಒಳಗಾದವರಿಗೆ ಇರುವಂತಹದು ಅದನ್ನು ಇಂದು ವ್ಯಾಖ್ಯಾನ ಮಾಡುವ ಪರಿ ಬದಲಾವಣೆ ಆಗಬೇಕು ಎಂದರು.
ಬಸವರಾಜ ಹೂಗಾರ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಸವರಾಜ ಸೂಳಿಬಾವಿ, ಅನಿಲ ಹೊಸಮನಿ,ಅಪ್ಪಾಸಾಹೇಬ ಯರನಾಳ ಸುರೇಶ ಜೀಬಿ ಲಕ್ಷ್ಮಣ ಹಂದ್ರಾಳ ದೊಡ್ಡಣ್ಣ ಬಜಂತ್ರಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article