ನೇಸರಗಿ: ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹೆಣ್ಣು ಬ್ರೂಣ ಹತ್ಯೆ ನಿಲ್ಲಿಸಿ, ಸಮಾನತೆ, ಪಶು ಇಲಾಖೆಯ ಜಾಗ್ರತೆ, ಅರೋಗ್ಯ, ಧನಕರುಗಳ ಲಸಿಕೆ, ದೇವಸ್ಥಾನ, ಗ್ರಾಮದ ಸ್ವಚ್ಛತೆಗೆ ಶಿಬಿರಗಳು ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು ಶಾಲಾ ಕಾಲೇಜು ವತಿಯಿಂದ ನುರಿತ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಕಾಲೇಜು ವತಿಯಿಂದ ಗ್ರಾಮೀಣ ಮಟ್ಟದ ರೈತರಿಗೆ ಜಾಗ್ರತೆ, ಕೃಷಿ ಅಧ್ಯಯನ, ಸಾಮಾಜಿಕ ಕಳಕಳಿ, ನ್ಯಾಯ, ಮೂಲಭೂತ ಸೌಕರ್ಯಗಳ ಬಗ್ಗೆ ತಿಳುವಳಿಕೆ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಸೇವೆ ಯೋಜನೆ ಕಾರ್ಯ ಜನನುರಾಗಿಯಾಗಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸೋಮವಾರದಂದು ಸಮೀಪದ ಸುತಗಟ್ಟಿ ಗ್ರಾಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ನೇಸರಗಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸ್ವಯಂ ಯೋಜನೆ ವತಿಯಿಂದ 2024-25 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ಗ್ರಾಮದಲ್ಲಿ 7 ದಿನಗಳ ಕಾಲ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ನಡೆಯುತ್ತಿರುವದು ಹೆಮ್ಮೆಯ ವಿಷಯ ಈ ಶಿಬಿರದಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ, ಧಯವೇ ಧರ್ಮದ ಮೂಲ, ರೈತ ದೇಶದ ಬೆನ್ನೆಲುಬು, ಮನಸಿದ್ದರೆ ಮಾರ್ಗ, ಕಾಯಕವೇ ಕೈಲಾಸ, ಜನಸೇವೆ ಜನಾರ್ಧನ ಸೇವೆ ಈ ವಿಷಯಗಳ ಬಗ್ಗೆ ಉಪನ್ಯಾಸ ನಡೆಯಲಿದ್ದು ಇವುಗಳ ಸದುಪಯೋಗವನ್ನು ಸುತಗಟ್ಟಿ ಗ್ರಾಮಸ್ಥರು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಮತಿ ಶಾಂತವ್ವ ಸೋ. ದೇಯಣ್ಣವರ, ಉಪಾಧ್ಯಕ್ಷ ಶ್ರೀಮತಿ ಪಾರ್ವತಿ ಬಡಿಗೇರ, ಹಿರಿಯರಾದ ಬಸವರಾಜ ಧೂಳಪ್ಪನವರ, ಕರ್ನಾಟಕ ಯುವ ಸೇನೆಯ ಜಿಲ್ಲಾಧ್ಯಕ್ಷ ಬಸವರಾಜ ತುಬಾಕದ,ರುದ್ರಪ್ಪ ರಾಮಕಿ, ಪಿ ಯು ಕಾಲೇಜು ಪ್ರಾಂನ್ಸುಪಾಲರಾದ ಎನ್ ಎಮ್ ಕುದರಿಮೋತಿ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡರ, ಎನ್ ಎಸ್ ಎಸ್ ಸಂಯೋಜಕರಾದ ಎಸ್ ವಿ. ದೊಡಮನಿ, ಉಪನ್ಯಾಸಕರಾದ ಎಮ್ ಎಚ್ ಬಡಿಗೇರ, ಶ್ರೀಮತಿ ಸಿ ಬಿ ರೊಟ್ಟಿ,ಎಸ್ ಬಿ ಪಾಟೀಲ, ಡಾ. ನಿಲ್ಲಪ್ಪ ವಾಲೀಕರ,ಎಮ್ ಎಚ್ ಬೆಟಗೇರಿ, ಗೀತಾ ಬಿಸಗುಪ್ಪಿ, ಪ್ರಶಾಂತ ಭೂಳನ್ನವರ, ದೀಪಾ ರಾಯವ್ವಗೋಳ, ಶ್ರೀಮತಿ ಸಂದ್ಯಾ,ಕರುಣಾ ಗಾಣಿಗೇರ, ಎಮ್ ಎನ್ ಬಾಳಿಕಾಯಿ, ಬಸವರಾಜ್ ಬುಳ್ಳಾರ, ವಿದ್ಯಾರ್ಥಿ ಕಾರ್ಯದರ್ಶಿಗಳಾದ ಮಾರುತಿ ಸಾತನವರ, ಶಿವಪುತ್ರ ಪೂಜೇರಿ, ಸುಮಿತ್ರಾ ಅಡವಿಸ್ವಾಮಿಮಠ, ಜ್ಯೋತಿ ಅಮಾತಿ, ಸೇರಿದಂತೆ ಸುತಗಟ್ಟಿ ಗ್ರಾ ಪಂ ಸದಸ್ಯರು, ಗ್ರಾಮದ ಹಿರಿಯರು, ರೈತರು ಉಪಸ್ಥಿತರಿದ್ದರು.