ಘಟಪ್ರಭಾ: ಪ್ರತಿಯೊಬ್ಬ ವಿದ್ಯಾರ್ಥಿಯು ನಿರ್ದಿಷ್ಟವಾದ ಗುರಿಯೊಂದಿಗೆ ಏಕ ಚಿತ್ತದಿಂದ ಅಭ್ಯಾಸ ಮಾಡುದರೊಂದಿಗೆ ನನಗೆ ನಾನೇ ಗುರು ಎನ್ನುವ ತತ್ವದೊಂದಿಗೆ ತಮ್ಮಲ್ಲಿರುವ ಇಚ್ಛಾಶಕ್ತಿಯನ್ನು ಅರಿತು ಏಕ ಚಿತ್ತದಿಂದ ಅಭ್ಯಾಸ ಮಾಡಿದರೆ ಯಶಸ್ಸು ಗಳಿಸುವುದು ನಿಶ್ಚಿತ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಸಂಯೋಜಕರಾದ ಡಾ. ದೊಡ್ಡನಗೌಡ ಪಾಟೀಲ ಹೇಳಿದರು.
ಅವರು ಗುರುವಾರದಂದು ಕೆ ಎರ್ ಎಚ್ ವಿದ್ಯಾವರ್ಧಕ ಸಂಘದ ಶ್ರೀಮತಿ ಪಾರ್ವತಿ ಕಾಡಪ್ಪಾ ಹುಕ್ಕೇರಿ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಿ. ಶಂಕರಾನಂದ ಕಾಲೇಜಿನ ಪ್ರಾಂಶುಪಾಲರಾದ ಡಾ, ಹಿರಿಯಕ್ಕನವರ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಹಿರಿಯರಾದ ಸುರೇಶ್ ಪಾಟೀಲ, ಶ್ರೀ ಎಸ್ ಕೆ ಹುಕ್ಕೇರಿ ಪಿ ಯ ಕಾಲೇಜಿನ ಪ್ರಾಂಶುಪಾಲ ಕಾಮಗೌಡರ, ಶ್ರೀಮತಿ, ಕೋಟಿ ಮೇಡಮ್ ಮುಂತಾದವರು ಮಾತನಾಡಿ ತಮ್ಮನ್ನು ಈ ಶಿಕ್ಷಣ ಸಂಸ್ಥೆಗೆ ಕಳಿಸಿದ ಪಾಲಕರಿಗೆ ವಿದ್ಯಾದಾನ ಮಾಡುತ್ತಿರುವ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಮತ್ತು ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಉತ್ತಮ ಅಂಕಗಳನ್ನು ಪಡೆದು ತಮ್ಮ ಪಾಲಕರಿಗೆ ಮತ್ತು ಸಂಸ್ಥೆಯ ಶತಮಾನದ ಸಾರ್ಥಕ ಗೊಳಿಸಬೇಕುಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ ಮಾತನಾಡಿ ಘಟಪ್ರಭಾದಲ್ಲಿ ನಾವು ಬೆಳೆಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ನಮ್ಮ ಮಕ್ಕಳು ಮುನ್ನಡೆಸುತ್ತಿದ್ದಾರೆ, ವಿದ್ಯಾರ್ಥಿಗಳು ಮತ್ತು ಪಾಲಕರು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಸಂತೋಷ ಹುಕ್ಕೇರಿ ಎಲ್ಲರನ್ನೂ ಸ್ವಾಗತಿಸಿದರು, ಮಹಾವಿದ್ಯಾಲಯದ ಪ್ರಾಂಶುಪಾಲ ಮಾಳಗಿ ಅವರು ವಂದನಾರ್ಪಣೆ ನೆರವೇರಿಸಿದರು.