ಡಿವೈಡರ ಒಳಗೆ ಹೂವಿನ ಗಿಡ್ಡ ನೆಟ್ಟು, ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಗ್ರಾಮಸ್ಥರು 

Ravi Talawar
ಡಿವೈಡರ ಒಳಗೆ ಹೂವಿನ ಗಿಡ್ಡ ನೆಟ್ಟು, ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ ಗ್ರಾಮಸ್ಥರು 
WhatsApp Group Join Now
Telegram Group Join Now

 

ನೇಸರಗಿ. ಗ್ರಾಮದ ಜತ್ತ ಜಂಬೋಟಿ ರಸ್ತೆಯ ಗ್ರಾಮದ ಗ್ಯಾರೇಜದಿಂದ ಹಿಡಿದು ಶ್ರೀ ಬಸವೇಶ್ವರ ಸರ್ಕಲ್ (ನೇಸರಗಿ ಕ್ರಾಸ್ ) ವರೆಗೆ  ರಸ್ತೆ ಮದ್ಯ ಡಿವೈಡರ ಒಳಿಗಿನ ಭಾಗದ ಎಲ್ಲ ತರಹದ ಹೂವಿನ ಗಿಡಗಳನ್ನು ನೆಟ್ಟು ನಾಳೆ ನಡೆಯುವ ಭರ್ಜರಿ 70 ನೇ  ಕರ್ನಾಟಕ ರಾಜ್ಯೋತ್ಸವದ ಮೆರವಣಿಗೆ ಅಂಗವಾಗಿ ಗ್ರಾಮದ ಪಂಚಾಯತ, ಸಂಘ, ಸಂಸ್ಥೆಗಳು, ನೇಸರಗಿ ಗೆಳೆಯರ ಭಳಗ, ರಾಜ್ಯೋತ್ಸವ ಉತ್ಸವ ಕಮಿಟಿ, ಮಾಜಿ ಸೈನಿಕರ ಸಂಘ, ಡಿ ಎಸ್ ಎಸ್, ಎಲ್ಲ ಸಮಾಜದ ಮುಖಂಡರ ಮತ್ತು ಯುವಕರ ನೇತೃತ್ವದಲ್ಲಿ  ಹೂ ಗಿಡಗಳನ್ನು ನಾಟಿ ಮಾಡಿ ವಿಶಿಷ್ಟವಾಗಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ತಯಾರಿ ನಡೆಸಿದ್ದಾರೆ. ಗ್ರಾಮದ ಎಲ್ಲ ರಸ್ತೆಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು, ಗ್ಯಾರೇಜ್ ನಿಂದ ನೇಸರಗಿ ಕ್ರಾಸ್ ವರೆಗೆ ನೋಡುಗರ ಕಣ್ಣು, ಮನ  ಸೆಳೆಯುತ್ತಿವೆ.
   ಈ ಕಾರ್ಯಕ್ರಮದಲ್ಲಿ  ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸರ್ಕಾರಿ ಅಧಿಕಾರಿಗಳು, ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎಲ್ಲ ಸಮಾಜದ ಮುಖಂಡರು, ಯುವಕರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article