ಪಟ್ಟಣದಲ್ಲಿ ತಾಲೂಕಿನ ಲಚ್ಯಾಣ ಗ್ರಾಮಸ್ಥರು ಹಳೆಯ ಬರಗೂಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸಿ ಅನುರಾಧಾ ವಸ್ತçದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Abushama Hawaldar
ಪಟ್ಟಣದಲ್ಲಿ ತಾಲೂಕಿನ ಲಚ್ಯಾಣ ಗ್ರಾಮಸ್ಥರು ಹಳೆಯ ಬರಗೂಡಿ ರಸ್ತೆ ದುರಸ್ತಿಗೆ ಆಗ್ರಹಿಸಿ ಎಸಿ ಅನುರಾಧಾ ವಸ್ತçದ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
WhatsApp Group Join Now
Telegram Group Join Now

ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಬಳಿಯ ಲೋಣಿ ಕ್ರಾಸ್‌ದಿಂದ ಬರಗೂಡಿ ಹೋಗುವ ಮಾರ್ಗ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಲಚ್ಯಾಣ ಗ್ರಾಮದ ರೈತರು ಇಂಡಿ ಪಟ್ಟಣದಲ್ಲಿನ ಮಿನಿ ವಿಧಾನ ಸೌಧದಲ್ಲಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ಅವರಿಗೆ ಮಂಗಳವಾರದAದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಕಲ್ಲಪ್ಪ ದೊಡಮನಿ ಮಾತನಾಡಿ, ಲಚ್ಯಾಣ ಗ್ರಾಮದಲ್ಲಿ ದಲಿತ ಸಮಾಜದ ಹಲವು ಜನರು ಜಮೀನಿಗೆ ದಾರಿ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿಂದೆ ಇದ್ದ ಹಳೆಯ ಕಾಲದ ಬರಗೂಡಿ ರಸ್ತೆ ಹಲವು ವರ್ಷಗಳಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ಬಡ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ ವಿವರಿಸಿದರು.
ಇನ್ನೊರ್ವ ದಲಿತ ಮುಖಂಡ ಪಂಡಿತ ಹತ್ತಳ್ಳಿ ಮಾತನಾಡಿ, ಮಳೆಗಾಲದ ಈ ಸಂದರ್ಭದಲ್ಲಿ ಮುಂಗಾರು ಬೇಸಾಯ ಮಾಡಲೆಂದು ಜಮೀನಿಗೆ ಸಾಗಲು ಮಾರ್ಗವೇ ಇಲ್ಲ. ಲೋಣಿ ಕ್ರಾಸ್‌ನಿಂದ ೧ ಕಿ.ಮೀ. ದಾರಿ ಬಂದ್ ಆಗಿದೆ. ಈ ಕುರಿತು ಕಳೆದ ೫ ವರ್ಷಗಳ ಹಿಂದೆ ತಹಶೀಲ್ದಾರರಿಗೆ ಈ ಹಿಂದಿನ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಆದ್ದರಿಂದ ಕೂಡಲೆ ತಾವೂ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗೆ ದಾರಿ ಒದಗಿಸಬೇಕು ಎಂದು ವಿನಂತಿಸಿದರು.
ಈ ಮನವಿ ಸ್ಪಂದಿಸಿದ ಉಪವಿಭಾಗಾಧಿಕಾರಿ ಅನುರಾಧಾ ವಸ್ತçದ ಕೂಡಲೆ ದೂರವಾಣಿಯ ಮೂಲಕ ಸಂಬAಧಿಸಿದ ಎಡಿಎಲ್‌ಆರ್ ಜೊತೆ ಮಾತನಾಡಿ, ಸ್ಥಳಕ್ಕೆ ಭೇಟಿ ನೀಡಿ ಕೂಡಲೆ ಸರ್ವೇ ಕಾರ್ಯ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಲೋಣಿ ಗ್ರಾಮದ ಸಿದ್ದು ಚೌಗಲೆ, ಲಚ್ಯಾಣ ಗ್ರಾಮಸ್ಥರಾದ ಮಲಕಪ್ಪ ಹೂಗಾರ, ಪ್ರಕಾಶ ಸತ್ತಿ, ದಲಿತ ಸಮಾಜದ ದುಂಡಪ್ಪ ಶಿವಶರಣ, ಪ್ರಕಾಶ ಶಿವಶರಣ, sಸದಾ ಬನಸೋಡೆ, ಸುನೀಲ ಬನಸೋಡೆ, ಉಪಸ್ಥಿತರಿದ್ದಾರೆ.

WhatsApp Group Join Now
Telegram Group Join Now
Share This Article