Ad imageAd image

ಚುನಾವಣಾ ಕಾರ್ಯಕ್ಕೆ ಸರ್ಕಾರಿ, ಖಾಸಗಿ ಬಸ್​ಗಳ​ ಬಳಕೆ: ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ

Ravi Talawar
ಚುನಾವಣಾ ಕಾರ್ಯಕ್ಕೆ ಸರ್ಕಾರಿ, ಖಾಸಗಿ ಬಸ್​ಗಳ​ ಬಳಕೆ: ಇಂದು, ನಾಳೆ ಸಂಚಾರ ವ್ಯತ್ಯಯ ಸಾಧ್ಯತೆ
WhatsApp Group Join Now
Telegram Group Join Now

ಬೆಂಗಳೂರು, ಏಪ್ರಿಲ್​ 25: ನಾಳೆ (ಏಪ್ರಿಲ್​ 26) ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನಕ್ಕೆ ಚುನಾವಣಾ ಆಯೋಗದಿಂದ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಚುನಾವಣಾ ಕಾರ್ಯಕ್ಕೆ ಬಸ್  ಬಳಕೆಯಾಗುವುದರಿಂದ ಇಂದು, ನಾಳೆ ಸರ್ಕಾರಿ ಸಾರಿಗೆ, ಖಾಸಗಿ ಬಸ್​ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಚುನಾವಣೆ ಕೆಲಸಕ್ಕೆ ಕೆಎಸ್​​ಆರ್​ಟಿಸಿ ಮತ್ತು ಬಿಎಂಟಿಸಿ ಖಾಸಗಿ ಬಸ್​ಗಳ ಬಳಕೆ ಮಾಡಲಾಗುತ್ತಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಖಾಸಗಿ ಶಾಲಾ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ. ಪ್ರತಿ ವಾಹನಕ್ಕೂ ಪ್ರತ್ಯೇಕ ದರ ಫಿಕ್ಸ್​​ ಮಾಡಲಾಗಿದ್ದು, ಮುಂಗಡ ಹಣ ಕೂಡ ಪಾವತಿ ಮಾಡಲಾಗಿದೆ.

2,100 ಕೆಎಸ್​​ಆರ್​ಟಿಸಿ, 1,700 ಬಿಎಂಟಿಸಿ ಬಸ್​ಗಳನ್ನು ಆಯೋಗ ಬಳಕೆ​​ ಮಾಡಿಕೊಂಡಿದ್ದು, ಸರ್ಕಾರಿ ಬಸ್​ಗಳಿಗೆ ಕಿ.ಮೀ.ಗೆ 57 ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಎರಡು ದಿನ ಸರ್ಕಾರಿ ಬಸ್​ಗಳ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ ಇದೆ.

ಯಾವ ವಾಹನಕ್ಕೆ ಎಷ್ಟು ಬಾಡಿಗೆ

  • ಸರ್ಕಾರಿ ಬಸ್: ಕಿ.ಮೀ 57.50 ರೂ. ದಿನದ ಬಾಡಿಗೆ 11,500 ರೂ.
  • ಖಾಸಗಿ ಬಸ್ (ಬೆಂಗಳೂರಿಗೆ): ಕಿಮೀ 43.50 ರೂ. ದಿನದ ಬಾಡಿಗೆ 8700 ರೂ. ದಿನಕ್ಕೆ ನಿಗದಿತ ಬಾಡಿಗೆ 4,350(ಬಸ್ ಬಳಸದಿದ್ದರೆ).
  • ಖಾಸಗಿ ಬಸ್ (ಬೆಂಗಳೂರು ಹೊರತು ಪಡಿಸಿ): ಕಿಮೀ 42.50 ರೂ. ದಿನದ ಬಾಡಿಗೆ 8700 ರೂ. ದಿನಕ್ಕೆ ನಿಗದಿತ ಬಾಡಿಗೆ 5,300(ಬಸ್ ಬಳಸದಿದ್ದರೆ).
  • ಲಘು ಸರಕು ವಾಹನ (ಬೆಂಗಳೂರಿಗೆ): ಕಿಮೀ 29 ರೂ. ದಿನದ ಬಾಡಿಗೆ 2900 ರೂ. ಪ್ರತಿ ಗಂಟೆಗೆ 200 ರೂ.
  • ಲಘು ಸರಕು ವಾಹನ (ಬೆಂಗಳೂರು ಹೊರತು ಪಡಿಸಿ): ಕಿಮೀ 29 ರೂ. ದಿನದ ಬಾಡಿಗೆ 2900 ರೂ. ಪ್ರತಿ ಗಂಟೆಗೆ 190 ರೂ.
  • ಮ್ಯಾಕ್ಸಿ ಕ್ಯಾಬ್ (ಬೆಂಗಳೂರು): ಕಿಮೀ 20 ರೂ. ದಿನದ ಬಾಡಿಗೆ 4000 ರೂ. ದಿನಕ್ಕೆ ನಿಗದಿತ ಬಾಡಿಗೆ 3,500 (ಬಳಸದಿದ್ದರೆ).
  • ಮ್ಯಾಕ್ಸಿ ಕ್ಯಾಬ್ (ಬೆಂಗಳೂರು ಹೊರತು ಪಡಿಸಿ): ಕಿಮೀ 19 ರೂ. ದಿನದ ಬಾಡಿಗೆ 3,800 ರೂ. ದಿನಕ್ಕೆ ನಿಗದಿತ ಬಾಡಿಗೆ 3,400 (ಬಳಸದಿದ್ದರೆ).
  • ಸರಕು ವಾಹನ (ಬೆಂಗಳೂರು): ಕಿಮೀ 36 ರೂ. ದಿನದ ಬಾಡಿಗೆ 6,400 ರೂ. ಪ್ರತಿ ಗಂಟೆಗೆ 1,100 ರೂ.
  • ಸರಕು ವಾಹನ (ಬೆಂಗಳೂರು ಹೊರತುಪಡಿಸಿ): ಕಿಮೀ 34 ರೂ. ದಿನದ ಬಾಡಿಗೆ 6,000 ರೂ. ಪ್ರತಿ ಗಂಟೆಗೆ 1,000 ರೂ.
  • ಮೋಟಾರ್ ಕ್ಯಾಬ್ (ಬೆಂಗಳೂರು): ಕಿಮೀ 16 ರೂ. ದಿನದ ಬಾಡಿಗೆ 2,800 ರೂ. ದಿನಕ್ಕೆ ನಿಗದಿತ ಬಾಡಿಗೆ 2,000 (ಬಳಸದಿದ್ದರೆ).
  • ಮೋಟಾರ್ ಕ್ಯಾಬ್ (ಬೆಂಗಳೂರು ಹೊರತುಪಡಿಸಿ): ಕಿಮೀ 14.5 ರೂ. ದಿನದ ಬಾಡಿಗೆ 2,700 ರೂ. ದಿನಕ್ಕೆ ನಿಗದಿತ ಬಾಡಿಗೆ 1,550
WhatsApp Group Join Now
Telegram Group Join Now
Share This Article