ಅನ್ಯಭಾಷೆಯ ಫಲಕಗಳನ್ನು ಅನಧಿಕೃತವಾಗಿ ಅಳವಡಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

Ravi Talawar
ಅನ್ಯಭಾಷೆಯ ಫಲಕಗಳನ್ನು ಅನಧಿಕೃತವಾಗಿ ಅಳವಡಿಕೆ ವಿರುದ್ಧ ಕ್ರಮಕ್ಕೆ ಆಗ್ರಹ
WhatsApp Group Join Now
Telegram Group Join Now
ಸಂಕೇಶ್ವರ :  ಜಾಹಿರಾತು ಫಲಕಗಳಲ್ಲಿ ಹಾಗೂ ಶಾಲಾ ಕಾಲೇಜು ಸಂಸ್ಥೆಗಳು ಕನ್ನಡವನ್ನು ಬಿಟ್ಟು ಹೆಚ್ಚಾಗಿ ಅನ್ಯಭಾಷೆಯ ಫಲಕಗಳನ್ನು ಅನಧಿಕೃತವಾಗಿ ಅಳವಡಿಸುತ್ತಿದ್ದು ಅಂಥವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ನಾಮನಿರ್ದೇಶಕ ಸದಸ್ಯರಾದ ಮಹೇಶ ಹಟ್ಟಿವಳಿ ಹಾಗೂ ದಿಲೀಪ ಹೊಸಮನಿ  ಒತ್ತಾಯಿಸಿದರು.
ಪಟ್ಟಣದ ಪುರಸಭೆಯ ಸಾಮನ್ಯ ಸಭೆಯು ಅಧ್ಯಕ್ಷೆ ಶೀಮಾ ಹತನೂರೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ಸದಸ್ಯರ ಮಾತುಗಳು ಆಲಿಸಿ,‌ಮುಖ್ಯಾಧಿಕಾರಿಗಳಾದ ಪ್ರಕಾಶ ಮಠದ ಮಾತನಾಡಿ,ಪ್ರತಿಯೊಂದು ಅಂಗಡಿ ಮಾಲೀಕರು ತಮ್ಮ ಅಂಗಡಿಗಳಿಗೆ ಕನ್ನಡದಲ್ಲಿಯೇ ನಾಮಫಲಕ ಹಾಗೂ ಜಾಹಿರಾತು ಫಲಕಗಳಲ್ಲಿ ಶೇ60 ರಷ್ಟು ಕನ್ನಡ ಭಾಷೆ ಬಳಸಬೇಕು ಎಂದು ಸೂಚನೆ ನೀಡಿಲಾಗಿದೆ. ಆದರೂ ಯಾವ ಅಂಗಡಿ ಮಾಲೀಕರು
ಹಾಗೂ ನಾಮ ಫಲಕಗಳಲ್ಲಿ ಯಾರು ಕನ್ನಡ ಬಳಸುತ್ತಿಲ್ಲ ಅಂಥವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಸದಸ್ಯರಾದ ಸಂಜಯ ಶಿರಕೋಳಿ ಮಾತನಾಡಿ ಕೇಲದಿನಗಳಲ್ಲಿ  ಗಣೇಶ್ ಹಬ್ಬ ಬರುತ್ತಿದ್ದು ಪಟ್ಟಣಲ್ಲಿನ ರಸ್ತೆಯಲ್ಲಿ ತಗ್ಗು ಬಿದ್ದಿರುವುದನ್ನು ಮುಚ್ಚುವ ಕೆಲಸಮಾಡಿ ಎಂದರು.
ಬೀರೇಶ್ವರ ನಗರ ಹಾಗೂ ಕೇಲ ವಾರ್ಡಗಳಲ್ಲಿನ ಒಳ ಚರಂಡಿಗಳು ಹಾಗೂ ರಸ್ತೆಯಲ್ಲಿ ಬಿದ್ದ ತಗ್ಗುಗಳ ಬಗ್ಗೆ  ಸದಸ್ಯರಾದ ಗಂಗಾರಾಮ ಭೂಸಗೋಳ ಹಾಗೂ ದಿಲೀಪ ಹೊಸಮನಿ ಮತ್ತು ಸದಸ್ಯರು ಪ್ರಮುಖವಾಗಿ ಚರ್ಚಿಸಿದರು.
ಬೀದಿನಾಯಿಗಳ ಹಾವಳಿಯೂ ಹೆಚ್ಚಾಗಿದ್ದು, ಶಾಲೆಗೆ ಮಕ್ಕಳು ಹೋಗುಲು ಹೆದರುತ್ತಿದ್ದು ಈ ಕುರಿತು ಕ್ರಮ ಕೈಗೋಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸ್ಥಾಯಿ ಅಮಿತಿಯ ಅಧ್ಯಕ್ಷರಾದ ಪ್ರಮೋದ ಹೊಸಮನಿ, ಸದಸ್ಯರಾದ ಅಮರ ನಲವಡೆ, ಸುನೀಲ ಪರ್ವತರಾವ, ಅಜೀತ ಕರಜಗಿ, ಚಿದಾನಂದ ಕರದನ್ನವರ, ಶಿವಾನಂದ ಮುಡಶಿ, ಜಯಪ್ರಕಾಶ ಕರಜಗಿ, ಅವಿನಾಶ ನಲವಡೆ, ತಬರೇಜ್ ಹಜರತ್ಅಲ್ಲಿ ಹಾಜರಿದ್ದರು.
WhatsApp Group Join Now
Telegram Group Join Now
Share This Article