ದಿ. ಉಮೇಶ ಕತ್ತಿ ನಮ್ಮ ಅಣ್ಣನ ಸ್ಥಾನದಲ್ಲಿ ಇದ್ದರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ: ಬಸನಗೌಡ ಪಾಟೀಲ ಯತ್ನಾಳ್

Ravi Talawar
ದಿ. ಉಮೇಶ ಕತ್ತಿ ನಮ್ಮ ಅಣ್ಣನ ಸ್ಥಾನದಲ್ಲಿ ಇದ್ದರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ: ಬಸನಗೌಡ ಪಾಟೀಲ ಯತ್ನಾಳ್
WhatsApp Group Join Now
Telegram Group Join Now
ಹುಕ್ಕೇರಿ. ಮಾಜಿ ಸಚಿವ ಉತ್ತರ ಕರ್ನಾಟಕ ಹೋರಾಟಗಾರ, ನೇರ ನಡೆ , ನುಡಿಯ ಸಾಹುಕಾರ ನಮ್ಮ ಮಾರ್ಗದರ್ಶಕರು ಆದ ಮಾಜಿ ಸಚಿವ ದಿ. ಉಮೇಶ ಕತ್ತಿ ಅವರು ನನ್ನಗೆ ಅಣ್ಣನ ಸ್ಥಾನದಲ್ಲಿ ಇದ್ದರು. ಅವರು ಕೊನೆ ದಿನಗಳಲ್ಲಿ ಮಾಜಿ ಸಚಿವ ಎ ಬಿ ಪಾಟೀಲರ ಕುರಿತು ಕಳಕಳಿ ಹೊಂದಿ ಅವರ ಬಗ್ಗೆ ಚಿಂತನೆ ಹೊಂದಿ ಮಾತನಾಡಲು ಬಯಸಿದ್ದರು. ಅವರು ಇಂದು ಇದ್ದಿದರೆ ನನಗೆ ಆಣೆ ಬಲ ಇರುತಿತ್ತು. ಅವರು ನೇರ್ ನಡೆ, ನುಡಿ ಉಳ್ಳವರು, ನಾನು ಅವರ ಹಾಗೆ ಯಾರು ಅಂಜದ ವ್ಯಕ್ತಿ, ಅವರ ಹಾಗೆ ಸುಮ್ಮನೆ ಉತ್ತರ ಕರ್ನಾಟಕ ಪ್ರತೇಕತೆ ಕುರಿತು ಮಾತನಾಡುತ್ತ ಇದ್ದರು  ನಮಗೆ ಹಳೆ ಬಸ್, ಬೆಂಗಳೂರಿಗೆ ಹೊಸ ಬಸ, ನಮಗೆ ನಾಲ್ಕು ತಾಸು ವಿದ್ಯುತ್ ರೈತರಿಗೆ ಆ ಭಾಗಕ್ಕೆ 10 ತಾಸು ರೈತರಿಗೆ ವಿದ್ಯುತ್ ನೀಡಿಕೆ ನೋಡಿ ಉತ್ತರ ಕರ್ನಾಟಕ ಅನ್ಯಾಯದ ಕುರಿತು ಧ್ವನಿ ಇಟ್ಟಿದ್ದರು, ಆದು ಯಾರಿಗೂ ಹೆದರದೆ, ಅಂಜದೆ  ಬಹಿಸ್ಕಾರಕ್ಕೆ ಬೇದರದೇ ವಿಧಾನಸೌಧದಲ್ಲಿ ಪ್ರತಿಭಟನೆ ಮಾಡಿದ್ದರು. ಆದರೂ ಇಂದು ಅವರಿಲ್ಲ,  ಅವರ ಬದಲಾಗಿ ಅವರ ಮಕ್ಕಳಲ್ಲಿ ಓರ್ವ ಉತ್ತಮ ಭವಿಷ್ಯ ಹೊಂದಿದ್ದಾನೆ. ನಿಖಿಲ ಕತ್ತಿ ಶಾಸಕರಾದರು ಸೂಕ್ಷ್ಮ ಸ್ವಭಾವದವರು, ಅವರಿಗೆ ಅಧಿವೇಶನದಲ್ಲಿ ಅನೇಕ ಬಾರಿ ಮಾತನಾಡಲು ಈ ಭಾಗದ ಅಭಿಪ್ರಾಯ ಹೇಳಲು ಹೇಳಿದ್ದೇನೆ. ಮತ್ತು ಮಾಜಿ ಸಂಸದ ರಮೇಶ ಸಹೋದರ ನನಗಿಂತ ಸ್ಟ್ರಾಂಗ್ ಇದ್ದಾರೆ ಮಾತನಾಡುವದರಲ್ಲಿ  ಅವರು ನಾವು ಕೂಡಿ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೊರಟ ಮಾಡುತ್ತೇವೆ. ದುಡ್ಡು ತೆಗೆದು ಮತ ಹಾಕದಿರಿ, ಕೆಲಸ, ಪ್ರಾಮಾಣಿಕತೆ ಬೆಲೆ ಕೊಡಿ, ಕೊಡುವವರು 500 ರೂ. 1000 ರೂ ಮುಖಂಡರಿಗೆ ಲಕ್ಷ ರೂ ಕೊಟ್ಟರು. ಹುಕ್ಕೇರಿ ಭಾಗ ಇದಕ್ಕೆ ಆಶೆ ಮಾಡಲ್ಲ.ಉಮೇಶ ಕತ್ತಿ ಅವರ ಕನಸನ್ನು ನನಸು ಮಾಡುತ್ತಾರೆ. ಮತ್ತೊಬ್ಬರ ಹಣದಿಂದ ನಾವು ಬದುಕಬೇಕಾ? ಬಾರಿ ದುಡ್ಡು ದರ್ಬಾರದಿಂದ ಏನು ಮಾಡೋಕೆ ಆಗಲ್ಲ. ನನ್ನ ಪಾರ್ಟಿ ಯಿಂದ ತಗದ್ರೂ, ಈಗ ನನ್ನದು ಉತ್ತರ ಕರ್ನಾಟಕ ಮಾತ್ರ ಅಲ್ಲ, ದಕ್ಷಿಣ, ಮೈಸೂರು, ಬೆಂಗಳೂರು, ಕಲ್ಯಾಣ ಕರ್ನಾಟಕ ಮಟ್ಟದಲ್ಲಿ ಬೆಳೆಯುತ್ತಿದ್ದೇನೆ. ದೊಡ್ಡವರು ನನಗೆ ನಿನ್ನ ಉಚ್ಚಟನೆ ಮಾಡಿದ್ದಾರೆ ಎಂದರೆ ಅವರಿಗೆ ನಿಮನ್ನು ಉಚ್ಚಟನೆ ಮಾಡಿದ್ದಾರೆ ಅಲ್ವಾ ಎಂದು ಸಿ ಎಮ್ ಗೆ ಹೇಳಿದವನು ನಾನು ಯಾರಿಗೂ ಬಗ್ಗಲ್ಲ, ಯಾರಿಗೂ ಜಗ್ಗಲ್ಲ ಎಂದಾಗ ಸೇರಿದ ಅಪಾರ ಜನಸ್ತೋಮ್ ಕೇಕೆ, ಚಪ್ಪಾಳೆ,ಶಿಳ್ಳೆ, ಯತ್ನಾಳ್ ಜಿಂದಾಬಾದ ಘೋಷಣೆಗಳು ಕೇಳುತಿದ್ದವು.
WhatsApp Group Join Now
Telegram Group Join Now
Share This Article