ಮಹಾಲಿಂಗಪುರ: ಎಲ್ಲ ಜಾತಿಗಳನ್ನೋಳಗೊಂಡ ದ್ವೀಚಕ್ರವಾಹನಗಳ ಸಂಘದ ಸದಸ್ಯರಲ್ಲಿ ಜ್ಯಾತ್ಯಾತೀತ,ಪಕ್ಷಾತೀತ ಸಂಘಟನಾತ್ಮಕ ಶಕ್ತಿ ಇದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನದಲ್ಲಿ ನೂತನ’ದ್ವಿಚಕ್ರ ವಾಹನಗಳ ದುರುಸ್ಥಿದಾರರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಕಲಿಯುಗದಲ್ಲಿ ಸಂಘಟನೆ ಇದ್ದರೆ ಜನ ಮತ್ತು ಸರ್ಕಾರಗಳು ಗೌರವ ನೀಡುತ್ತವೆ.ಇಲ್ಲದಿದ್ದರೆ ಕಿಂಚಿತ್ತೂ ಗೌರವ ನೀಡುವುದಿಲ್ಲವೆಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಎಲ್ಲ ವರ್ಗಗಳ ಜನರಿಗೆ ಯೋಜನೆಗಳನ್ನು ರೂಪಿಸುತ್ತವೆ. ಇವುಗಳನ್ನು ಪಡೆಯುವುದು ಅವರ ಅವರ ಕರ್ತವ್ಯ. ಇಲ್ಲಿ ಜಾತ್ಯತೀತ, ಪಕ್ಷಾತೀತವಾದ ಸಂಘಟನಾತ್ಮಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ.ಆದ್ದರಿಂದ ಇಂದು ತಮ್ಮ ಸೇರುವಿಕೆ ಮತ್ತು ಏಕತೆ ಸಂಘಟನೆಯಾಗಿ ಹೊರಹೊಮ್ಮಿರುವುದು ಸಮಯೋಚಿತ.ಹೀಗೆ ತಮ್ಮ ಒಗ್ಗಟ್ಟು ಮುಂದುವರಿದು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ದೊರಕುವಂತಾಗಲಿ ಎಂದರು.
ತೇರದಾಳ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಪ್ರಸ್ತುತ ಯಾಂತ್ರಿಕ ಯುಗದಲ್ಲಿ ಮಶೀನರಿಗಳ ದುರುಸ್ಥಿ ಮಾಡುವವರದ್ದು ಅಂದರೆ ಮೇಕ್ಯಾನಿಕಲ್ ಗಳ ಪಾತ್ರ ಹಿರಿದು.ಇವರೇನಾದರೂ ಸಕಾಲದಲ್ಲಿ ಮಶಿನರಿಗಳನ್ನು ರಿಪೇರಿ ಮಾಡದೆ ಹೋದರೆ ನಮ್ಮ ದೈನಂದಿನ ಜೀವನ ಅಸ್ತವ್ಯಸ್ಥವಾಗುತ್ತದೆ. ಸಮಾಜ ಇವರನ್ನು ಮೇಸ್ತ್ರಿಗಳೆಂದು ತುಚ್ಛ ಭಾವನೆಯಿಂದ ನೋಡದೆ ಇವರನ್ನು ಗೌರವದಿಂದ ಕಾಣಬೇಕು ಎಂದರು.
ಪಟ್ಟಣದ ಬರಗಿ ಶೋರೂಂ ಮಾಲೀಕರು ಹಾಗೂ ಹಿರಿಯ ಸೈಕಲ್ ಮೋಟಾರ್ ದುರುಸ್ಥಿದಾರರಾದ ಗಿರಮಲ್ಲಪ್ಪ ಬರಗಿ ಮಾತನಾಡಿ, ಮೇಸ್ತ್ರಿಗಳು ಶೃದ್ಧೆ, ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ವಾಹನಗಳನ್ನು ರಿಪೇರಿ ಮಾಡಿಕೊಟ್ಟಾಗ ತಾವು ಭವಿ?ದಲ್ಲಿ ಉತ್ತಮ ವ್ಯಕ್ತಿಗಳಾಗಿ ಎತ್ತರಕ್ಕೆ ಬೆಳೆಯುತ್ತಿರಿ.ಇವತ್ತು ಉದ್ಘಾಟನೆಗೊಂಡ ಸಂಘದ ಅಡಿಯಲ್ಲಿ ಎಲ್ಲರೂ ಕೈ ಜೋಡಿಸಿ ಕೆಲಸ ಮಾಡಿ. ಸರ್ಕಾರಿ ಸೌಲಭ್ಯಗಳನ್ನು ಪಡೆದುಕ್ಕೊಳ್ಳಿ ಎಂದು ಹೇಳಿ ಸಂಘಕ್ಕೆ ೫ ಸಾವಿರ ನಗದು ಹಣ ನೀಡಿ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಸ್ಥಳೀಯ ಪಿ.ಎಸ್.ಐ ಕಿರಣ ಸತ್ತಿಗೇರಿ, ಮಂಜುನಾಥ ಕೋಟೇಶ್ವರ ಮತ್ತು ಮಹಾದೇವ ಮಾತನಾಡಿದರು. ಎಪಿಎಂಸಿ ರಸ್ತೆಯಲ್ಲಿರುವ ಪುರಸಭೆ ಸಂಕಿರಣದಲ್ಲಿ ’ ದ್ವಿಚಕ್ರ ವಾಹನಗಳ ದುರುಸ್ಥಿದಾರರ ಸಂಘ ’ ದ ಕಚೇರಿ ಮತ್ತು ಗಣೇಶ ಮಂದಿರ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರ ಸಮ್ಮುಖದಲ್ಲಿ ಶಾಸಕ ಸಿದ್ದು ಸವದಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಶೇಖರ ಅಂಗಡಿ, ಸಂಗಪ್ಪ ಹಲ್ಲಿ, ಶಂಕರಗೌಡ ಪಾಟೀಲ, ನಿಂಗಪ್ಪ ಬಾಳಿಕಾಯಿ, ರಮೇಶ ಕೆಸರಗೊಪ್ಪ, ಶ್ರೀಶೈಲ ಬ್ಯಾಕೋಡ, ಮಹಾಲಿಂಗಪ್ಪ ಕಂಠಿ, ಅಲ್ಲಾಭಕ್ಷ ಆಲಾಸ್ ಮೇಹಬೂಬ ಮೋಪಗಾರ, ಸಯ್ಯದಅಬ್ದುಲ್ ಖಾಜಿ, ಆನಂದ ಮಿರ್ಜಿ, ಸಲಿಂ ಅರಬ್, ಬಸವರಾಜ ಜಮಖಂಡಿ, ಚೇತನ್ ಹಳಿಂಗಳಿ, ಬಂದೇನವಾಜ್ ನದಾಫ್, ಯಾಸೀನ್ ಫಣಿಬಂದ, ಶಿವಾನಂದ ಹಳ್ಳಿ, ಬಸವರಾಜ ಸವದಿ, ಮುನ್ನಾ ಜಮಾದಾರ, ರಾಜು ಮೋಪಗಾರ ಇನ್ನಿತರರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಾಹಿನಶಾ ಚಿಕ್ಕೋಡಿ ವಹಿಸಿ, ಸಂಘದ ಸದಸ್ಯ ವಿರೇಶ ಮುಂಡಗನೂರ ಸ್ವಾಗತಿಸಿ, ಹಿರಿಯ ಪತ್ರಕರ್ತರಾದ ಜಯರಾಮ ಶೆಟ್ಟಿ ನಿರೂಪಿಸಿ, ಶಿಕ್ಷಕ ನರಗಟ್ಟಿ ವಂದಿಸಿದರು.
ಫೋಟೊ: ೧೧ ಎಂ.ಎಲ್.ಪಿ ೧