ಧಾರವಾಡ: ಜೆ ಎಸ್ ಎಸ್ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಯುಜಿ & ಪಿಜಿ ಸ್ಟಡಿಸ್ ವತಿಯಿಂದ ಮಾರ್ಚ್ 27, 28 ರಂದು ಎರಡು ದಿನಗಳ ಸಂಕಲ್ಪ ಉತ್ಸವ ರಾಷ್ಟ್ರೀಯ ಹಬ್ಬ ನಗರದ ಜೆಎಸ್ಎಸ್ ಕಾಲೇಜು ಆವರಣದ ಸನ್ನಿಧಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ಜೆ.ಎಸ್.ಎಸ್ ಕಾರ್ಯದರ್ಶಿ ಅಜಿತ್ ಪ್ರಸಾದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 27 ರಂದು ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಉದ್ಘಾಟಿಸಲಿದ್ದಾರೆ. ಖ್ಯಾತ ಗಾಯಕ ನವೀನ್ ಸಜ್ಜು ಭಾಗವಹಿಸಲಿದ್ದಾರೆ. ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ವಿದ್ಯಾರ್ಥಿಗಳು ಎರಡು ದಿನಗಳ ಸಂಕಲ್ಪ ಉತ್ಸವ ರಾಷ್ಟ್ರೀಯ ಹಬ್ಬ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವರ್ಷ “ರಾಷ್ಟ್ರ ಮಟ್ಟದ” ಸಂಕಲ್ಪ ಉತ್ಸವ ಹಮ್ಮಿಕೊಂಡಿದ್ದು ಸು. 120 ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಅದರಲ್ಲಿಯೂ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ವರ್ಷ ಕ್ವಿಜ್, ಅಡ್ವರ್ಟೈಜಮೆಂಟ್, ಪೊಟೊಗ್ರಾಫಿ ಮತ್ತು ವಿಡಿಯೋಗ್ರಾಫಿ, ಟ್ರಜರ್ಹಂ ಹಂಟ್, ಸಾಂಸ್ಕೃತಿಕ ಎಂಬ 5 ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಪ್ರತಿ ಕಾಲೇಜಿನಿಂದ 12 ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ಇದೆ ಎಂದರು.
ಮಾರ್ಚ್ 28 ರಂದು ಸಂಜೆ 6 ಗಂಟೆಗೆ ಸಮಾರೋಪ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎ.ಎಂ ಖಾನ್, ಜೆ.ಎಸ್.ಎಸ್ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಡಾ.ಸೂರಜ್ ಜೈನ್ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಐಐಟಿ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯಾಯ, ಜೆ.ಎಸ್.ಎಸ್ ಉಪ ಪ್ರಾಚಾರ್ಯ ಸೂರಜ್ ಜೈನ್, ರಾಜೇಶ ಚಿಟಗುಬ್ಬಿ ಇದ್ದರು.


