ಹನೂರಿನಲ್ಲಿ ಯೋಗಿನಾರಯೆಣ ಜಯಂತಿಯನ್ನು ಸರಳವಾಗಿ ಆಚರಿಸಿದ ತಾಲ್ಲೂಕು ಆಡಳಿತ ಮಂಡಳಿ

Ravi Talawar
ಹನೂರಿನಲ್ಲಿ ಯೋಗಿನಾರಯೆಣ ಜಯಂತಿಯನ್ನು ಸರಳವಾಗಿ ಆಚರಿಸಿದ ತಾಲ್ಲೂಕು ಆಡಳಿತ ಮಂಡಳಿ
WhatsApp Group Join Now
Telegram Group Join Now

ಹನೂರು,ಮಾ 25: ಬಣಿಜಿಗ ಕುಲಗುರುಗಳಾದ ಯೋಗಿನಾರಯಣೆಯವರ ಜಯಂತಿಯನ್ನು ಚುನಾವಣಾ ನಿಮಿತ್ತವಾಗಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಆಡಳಿತ ಮಂಡಳಿಯು ಸರಳವಾಗಿ ಇಂದು ಆಚರಿಸಲಾಗಿದೆ ಎಂದು ಹನೂರು ತಾಲ್ಲೂಕು ಬಲಿಜ ಸಂಘದ ಅಧ್ಯಕ್ಷರಾದ ಎಸ್ ಆರ್ ರಂಗಸ್ವಾಮಿ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ಮಾತನಾಡಿದ ಅವರು ಇಂದು ಯೋಗಿನಾರಯಣ್ ಜಯಂತಿಯನ್ನು ಆಚರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯ ಅವರು ನುಡಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ .

ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ ) ಸಂಘದ. ಹನೂರು ತಾಲ್ಲೂಕು ಪ್ರತಿನಿಧಿಗಳು ಸೇರಿದಂತೆ ಇತರರು ಭಾಗವಹಿಸಿದ್ದಾರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಅವರ ವಚನಗಳು ಮತ್ತು ಸಾದನೆಯನ್ನು ಪ್ರಚಾರಪಡಿಸುತ್ತ ಅದ್ದೂರಿಯಾಗಿ ಮಾಡಲು ತಿರ್ಮಾನಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯಲ್ಲಿನ ಸಿಬ್ಬಂದಿಗಳು ,ಬಲಿಜ ಸಂಘದ ಉಪಾಧ್ಯಕ್ಷರಾದ ಜಯರಾಮ್ ,ಕಾರ್ಯದರ್ಶಿ ಬಸವರಾಜು .ಹಾಗೂ ರಂಗಶೇಟ್ಟಿ .ಖಜಾಂಚಿ ಶ್ರೀ ರಂಗಶೇಟ್ಟಿ .ಸಂಘಟನೆ ಕಾರ್ಯದರ್ಶಿ ಪ್ರಕಾಶ ಮತ್ತು ಚಂದ್ರು,ಶಿವಕುಮಾರ್ ಎಮ್ ಎಸ್ ದೊಡ್ಡಿ . ಎಲ್ಲೆಮಾಳ ಮುಖಂಡರುಗಳಾದ ಮಾದೇಶ್ .ನಾಗೇಶ್ .ಗೋವಿಂದ್ .ಇನ್ನಿತರರು ಹಾಜರಿದ್ದರು .

WhatsApp Group Join Now
Telegram Group Join Now
Share This Article