ಬಳ್ಳಾರಿ,ಅ.೦9: ಇತ್ತೀಚೆಗೆ ಅ.೦೬ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿಯವರ ಮೇಲೆ “ಶೂ’’ ಎಸದಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಕೃತ್ಯ ಎಸಗಿದ ಅಪರಾಧಿಗೆ ಕಠಿಣ ಶಿಕ್ಷೆಗೆ ಗುರುಪಡಿಸುವುದರೊಟ್ಟಿಗೆ ಉನ್ನತ ತನಿಖೆ ಕೈಗೊಂಡು ಈ ಘಟನೆಯ ಹಿಂದಿರುವ ಸಂವಿಧಾನ ದ್ರೋಹಿಗಳನ್ನು ಬಂಧಿಸಬೇಕೆAದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಕಳುಹಿಸಲಾಯಿತು.
ಇತ್ತೀಚೆಗೆ ಆರ್.ಎಸ್.ಎಸ್. ಕಾರ್ಯಕ್ರಮಕ್ಕೆ ಭಾಗವಹಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿಯವರು ಖಜುರಾವೋ ದೇವಾಲಯದ ಪ್ರಕರಣದ ಕುರಿತು ಪ್ರಚಾರಕ್ಕಾಗಿ ಕೋರ್ಟಿಗೆ ಬರಬೇಡಿ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಈ ದಿನ ವಿಚಾರಣೆಯಲ್ಲಿ ಮನುವಾದಿತನ ವಕೀಲನೊಬ್ಬ “ಶೂ’’ ಎಸೆದಿದ್ದಾರೆ. ಸನಾತನ ಧರ್ಮಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದೆಳಿದ್ದಾರೆ. ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಅವಮಾನಿಸಲಾಗಿದೆ. ಈ ಅವಮಾನ ಈ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರ. ಇಂತಹ ಹೀನ ಕೃತ್ಯ ಎಸಗಿದ ಸನಾತನ ದೇಶ ದ್ರೋಹಿಗೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಡಿ.ಎಸ್.ಎಸ್. ಡಿ.ಜಿ.ಸಾಗರ ಬಣದ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ, ಶೋಷಿತ ಸಮುದಾಯಗಳ ಜಿಲ್ಲಾಧ್ಯಕ್ಷ ಡಾ||ಪಿ.ಎಲ್.ಗಾದಿಲಿಂಗನಗೌಡ, ವಾಲ್ಮೀಕಿ ಸಮಾಜದ ಮುಖಂಡ ವಿ.ಎಸ್.ಶಿವಶಂಕರ್, ಛಲವಾದಿ ಸಂಘದ ಮುಖಂಡ ನರಸಪ್ಪ, ಜಿಲ್ಲಾ ಬಂಜಾರ ಸಮುದಾಯದ ಅಧ್ಯಕ್ಷ ರಾಮನಾಯ್ಕ್, ಪತ್ರಕರ್ತ ಇಮಾಮ್ ಗೋಡೇಕರ್, ವಕೀಲ ಡಾ.ಟಿ.ದುರುಗಪ್ಪ, ಡಾ.ಬಸಪ್ಪ, ಸಿದ್ದೇಶ್, ಜಿಲ್ಲಾ ಸಂಚಾಲಕ ಹೆಚ್.ಬಿ.ಗಂಗಪ್ಪ, ಸಂಘಟನಾ ಸಂಚಾಲಕ ದೇವದಾಸ್ ಕೆ., ಹೆಚ್.ಆಂಜನೇಯ, ಬಿ.ರಮೇಶ್ ಇದ್ದರು. ೮ ಬಿಎಲ್‌ವೈ ೩ ಬಳ್ಳಾರಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.