ಅಥಣಿ:ಧಾರ್ಮಿಕ ಅಂಧ ನಂಬಿಕೆಯಿಂದಾಗಿ ಸೆಪ್ಟೆಂಬರ್ 8ರಂದು ದೇಹತ್ಯಾಗ ಮಾಡುವುದಾಗಿ ನಿರ್ಧರಿಸಿದ್ದ ಕುಟುಂಬವನ್ನು ತಾಲೂಕು ಆಡಳಿತ ಹಾಗೂ ಪೊಲೀಸರ ಇಲಾಖೆ ತಕ್ಷಣದ ಹಸ್ತಕ್ಷೇಪದ ಪರೀಣಾಮ ದೇಹ ತ್ಯಾಗದಂತಹ ಕ್ರೂರ ಮೂಢನಂಬಿಕೆಯಿಂದ ಐವರನ್ನ ಬೆಳಗಾವಿ ಭೀಮ್ಸ್ ಆಸ್ಪತ್ರೆಗೆ ರವಾನಿಸಿ ರಕ್ಷಿಸಲಾಗಿದೆ
ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಈರಕರ ಕುಟುಂಬದ ತುಕಾರಾಮ ಈರಕರ, ಪತ್ನಿ ಸಾವಿತ್ರಿ, ಮಗ ರಮೇಶ, ಸೊಸೆ ವೈಷ್ಣವಿ ಹಾಗೂ ಮಹಾರಾಷ್ಟ್ರದ ಕುಡನೂರ ಗ್ರಾಮದಲ್ಲಿದ್ದ ಮಗಳು ಮಾಯಾ ಶಿಂಧೆ ಅವರನ್ನು ರಕ್ಷಣೆ ಮಾಡಲಾಗಿದ್ದು ಇವರು ರಾಮಪಾಲ್ ಮಹಾರಾಜರ ಶಿಷ್ಯರಾಗಿದ್ದು, ಕಳೆದ 15 ದಿನಗಳಿಂದ ಧಾರ್ಮಿಕ ಭಕ್ತಿ-ಗಾನಗಳಲ್ಲಿ ತೊಡಗಿ ದೇಹತ್ಯಾಗಕ್ಕೆ ಸಜ್ಜಾಗಿದ್ದರು. ಈ ವಿಚಾರಕ್ಕೆ ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ, ಮಠಾಧೀಶರು ಸೇರಿ ಮನವರಿಕೆ ಮಾಡಲು ಪ್ರಯತ್ನಿಸಿದ್ದರು. ಸ್ವಲ್ಪ ಮಟ್ಟಿಗೆ ನಿರ್ಧಾರ ಬದಲಾದರೂ ಮತ್ತೆ ಯತಾಸ್ಥಿತಿಗೆ ಮರಳಿದ್ದರಿಂದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ, ನಿಗಾ ವಹಿಸಿದ್ದ ಸ್ಥಳೀಯ ತಾಲೂಕು ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರಿಂದ ಕುಟುಂಬದವರನ್ನು ವಶಕ್ಕೆ ಪಡೆದು ಅನಂತಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಆರೋಗ್ಯ ಪರಿಶೀಲನೆ ನಡೆಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ
ಎನೇ ಆದರೂ ಅತ್ಯಾಧುನಿಕ ಕಲಿಯುಗದಲ್ಲಿ ಮೂಢ ನಂಬಿಕೆಗಳಿಂದಾಗಿ ಜನರು ದೇಹ ತ್ಯಾಗ ಮಾಡುವಂತಹ ಕಠೋರ ನಿರ್ಧಾರಗಳನ್ನು ಮಾಡುತ್ತಿರುವದು ಸಸಂಸ್ಕೃತ ಸಮಾಜ ತಲೆ ತಗ್ಗುವಂತಾಗಿದೆ
ಬಾಕ್ಷ : ಸೆಪ್ಟೆಂಬರ್ 8 ನೇ ತಾರಿಖೆಗೆ ಪ್ರಾಣತ್ಯಾಗದ ಹೇಳಿಕೆಯನ್ನು ನೀಡಿದ್ದ ಈರಕರ್ ಕುಟುಂಬವನ್ನು ತಾಲೂಕಾ ಆಡಳಿತಾಧಿಕಾರಿಗಳು ಕ್ರಿಯಾಶೀಲರಾಗಿ ಸಹಾಯಕ ಆಯುಕ್ತರು ಚಿಕ್ಕೋಡಿ, ಡಿವೈಎಸ್ಪಿ ಅಥಣಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯಾಚರಣೆ ಮೂಲಕ ಮನವಲಿಸುವ ಕಾರ್ಯಕ್ಕೆ ಮುಂದಾಗಿದ್ದೇವು. ಆದರೆ ಅವರ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಥಣಿ ಪೊಲೀಸ್ ಇಲಾಖೇ ಸೇರಿದಂತೆ ಆರೊಗ್ಯ ಇಲಾಖೆಯ ಅಧಿಕಾರಿಗಳ ತಂಡ ಅನಂತಪುರ ಗ್ರಾಮಕ್ಕೆ ಬೇಟ್ಟಿ ನೀಡಿ ಈರಕರ್ ಕುಟುಂಬಸ್ಥರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿ ನಂತರ ಅವರನ್ನು ಧಾರವಾಡದ ಮಾನಸಿಕ ಆರೋಗ್ಯ ಚಿಕಿತ್ಸಾಲಯಕ್ಕೆ ರವಾನೆ ಮಾಡಲಾಗಿದೆ. ಅವರಿಗೆ ದೇಹ ತ್ಯಾಗ ಮಾಡುವ ಮೂಢ ನಂಬಿಕೆ ಕುರಿತು ಕೌನ್ಸಲಿಂಗ್ ಮಾಡಲಾಗುವದು
ಸಿದ್‌ರಾಯ ಭೋಸಗಿ, ತಹಶೀಲ್ದಾರ ಅಥಣಿ
ಮೂಢ ನಂಬಿಕೆ ದೇಹತ್ಯಾಗ ನಿರ್ಧಾರ, ಈರಕರ ಕುಟುಂಬ ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಿಫ್ಟ್, ಜಿಲ್ಲಾಢಳಿತದ ಮುಂಜಾಗೃತ ಕ್ರಮ
