ನೇಸರಗಿ. ಕಾರ್ಗಿಲ್ ವಿಜಯ ದಿನದ ಅಂಗವಾಗಿ ಶನಿವಾರದಂದು ಕಿತ್ತೂರು ಮತಕ್ಷೇತ್ರದ ತಿಗಡಿ ಗ್ರಾಮದಲ್ಲಿ ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ಬ ದೊಡ್ಡಗೌಡರ ಅವರು ವೀರ ಸೇನಾನಿ ಹುತಾತ್ಮ ಶ್ರೀ ಗಂಗಪ್ಪ ಮದನ್ನವರ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಯೋಧರನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷರು ಶ್ರೀಕರ ಕುಲಕರ್ಣಿ, ಶಿವಾನಂದ ಹನುಮಸಾಗರ, ಈರಣ್ಣ ಸಿದ್ನಾಳ , ರವಿರಾಜ ಇನಾಮದಾರ, ನಾಗರಾಜ್ ಮದನ್ನವರ, ಆನಂದ ನಿರಡಿ, ಅನಿಲ ನೇಸರಗಿ, ಈರಣ್ಣ ವಾರದ, ಬಸವರಾಜ ನಿರಡಿ ಹಾಗೂ ಮಾಜಿ ಸೈನಿಕರು ಶಾಲಾ ಮುದ್ದು ಮಕ್ಕಳು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.