ಬಳ್ಳಾರಿ,ಡಿ.೦೬: ನಗರದ ಎಸ್ಪಿ ಸರ್ಕಲ್‌ನಲ್ಲಿ ಜನವರಿಯಲ್ಲಿ ಅನಾವರಣಗೊಳ್ಳಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಅವರ ಪ್ರತಿಮೆಗೆ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಂತಿಮ ಸ್ಪರ್ಶ ನೀಡುತ್ತಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಬಹು ನಿರೀಕ್ಷಿತ ಎಸ್ಪಿ ಸರ್ಕಲ್ ನವೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ತಿಂಗಳು ವಾಲ್ಮೀಕಿ ಸರ್ಕಲ್ ನಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಯ ಪ್ರತಿಮೆ ಅನಾವರಣಗೊಳ್ಳುತ್ತಿದು, ಈಗಾಗಲೇ ಸಂಬAದಪಟ್ಟ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಸ್ವತಃ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಮುತುವರ್ಜಿವಹಿಸಿ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾರೆ.
ರಾಜ್ಯದ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರು, ಮುಖಂಡರೊAದಿಗೆ ಸಾವಿರಾರು ಜನರೊಂದಿಗೆ ಅದ್ದೂರಿಯಾಗಿ ಅನಾವರಣಗೊಳ್ಳಲು ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ ವಾಲ್ಮೀಕಿ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಫೋಟೋ ವೈರಲ್ ಆಗಿದೆ.


