ಮೂಡಲಗಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವ?ಗಳಿಂದ ಸೇವೆ ಸಲ್ಲಿಸುತ್ತ ಬಂದಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಸರ್ಕಾರ ಜನವರಿ ೨ರಂದು ನಡೆದ ಸಚಿವ ಸಂಪುಟದಲ್ಲಿ ಘೋಷಿಸಬಹುದೆಂದು ಅತಿಥಿ ಉಪನ್ಯಾಸಕರು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಸರ್ಕಾರ ಹೊಸ ವ?ದ ಮೊದಲ ಸಚಿವ ಸಂಪುಟದಲ್ಲಿ ಅತಿಥಿ ಉಪನ್ಯಾಸಕರ ವಿಷಯ ಚರ್ಚಿಸದೆ, ಅತಿಥಿ ಉಪನ್ಯಾಸಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಅತಿಥಿ ಉಪನ್ಯಾಸಕರ ಮುಖಂಡ ಡಾ. ರಾಜು ಕಂಬಾರ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ನೀಡಿದ ಕಂಬಾರ ಅವರು, ರಾಜ್ಯದಲ್ಲಿ ಅತ್ಯಂತ ಕಡಿಮೆ ಗೌರವ ಧನದಲ್ಲಿ ಸುಮಾರು ೧೧ ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸುಮಾರು ೧೦ ರಿಂದ ೨೦ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಸರಕಾರಕ್ಕೂ ಕೋಟಿಗಟ್ಟಲೆ ಹಣವನ್ನು ಉಳಿತಾಯ ಮಾಡಿದ್ದೇವೆ. ನಮ್ಮ ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿದ್ದೇವೆ. ಸರ್ಕಾರ ನಮ್ಮ ಬೆವರಿಗೆ ಸರಿಯಾದ ಮನ್ನಣೆ ನೀಡುತ್ತದೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಜರುಗಿದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿಯೂ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಸೇರಿ ನಮಗೆ ಸೇವಾ ಭದ್ರತೆಯನ್ನು ಒದಗಿಸಿ ಕೊಡಬೇಕು. ಇದುವರೆಗೂ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಯಾರನ್ನೂ ಸೇವೆಯಿಂದ ಮುಕ್ತಗೊಳಿಸದೆ ಅವರಿಗೂ ಸೇವಾ ಭದ್ರತೆಯನ್ನು ಒದಗಿಸಿ ಕೊಡಬೇಕೆಂಬ ಉದ್ದೇಶವನ್ನು ಹೊಂದಿ ಹೋರಾಟವನ್ನು ಮಾಡಿದೆವು. ಆದರೆ ಸರ್ಕಾರ ನಮ್ಮ ಯಾವ ಹೋರಾಟಗಳಿಗೂ ಇದುವರೆಗೂ ಮಾನ್ಯತೆಯನ್ನು ನೀಡುತ್ತಿಲ್ಲ. ಸರ್ಕಾರದ್ದು ಕೇವಲ ಭರವಸೆಗಳೇ ಮಾತ್ರ ಆಗಿವೆ ವಿನಹ, ಸೇವಾ ಭದ್ರತೆಯ ಕುರಿತು ಖಚಿತವಾದಂತಹ ಮಾಹಿತಿಗಳನ್ನು, ಪೂರಕ ವಿ?ಯಗಳನ್ನು ನೀಡುತ್ತಿಲ್ಲ. ಸಂಬಂಧಿಸಿದ ಇಲಾಖೆಯ ಸಚಿವರು ಕೂಡ ಮುಖ್ಯಮಂತ್ರಿಗಳ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ ವಿನಹ, ಅವರು ಸಂಪೂರ್ಣವಾಗಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಿಕೊಡಬೇಕೆಂಬ ಯೋಚನೆಯನ್ನು ಮಾಡಿದಂತಿಲ್ಲ.
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಅಥವಾ ಕಾಯಮಾತಿಗೆ ಕಾನೂನುಗಳು ತೊಡಕಾಗುತ್ತಿವೆ ಎಂಬ ಸರ್ಕಾರದ ಭಾಯಪಾಠದ ಧೋರಣೆ ಬಿಡಬೇಕು. ಅಂಥವುಗಳನ್ನು ನಿವಾರಣೆ ಮಾಡುವ ಶಕ್ತಿ ಸರಕಾರಕ್ಕೆ ಇದ್ದರೂ ???ಂಡ್ ಆರ್ ನಿಯಮಾವಳಿಗಳನ್ನು ತಿದ್ದುಪಡಿ ಮಾಡಬೇಕು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ- ಕಾಯಮಾತಿಯನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿ, ಈಗ ಆಡಳಿತ ಪಕ್ಷವಾಗಿ ಮರೆತಂತಿದೆ. ಕನಿ? ಮುಂದಿನ ಸಚಿವ ಸಂಪುಟದಲ್ಲಾದರೂ ಕಡ್ಡಾಯವಾಗಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಅಥವಾ ಕಾಯಮಾತಿಯನ್ನು ನೀಡುವ ಮಸೂದೆಗೆ ಅನುಮೋದನೆಯನ್ನು ನೀಡುವ ಮೂಲಕ ಉತ್ತರಿಸುವ ಕಾರ್ಯವನ್ನು ಮಾಡಬೇಕು ಎಂದಿದ್ದಾರೆ.
ಅತ್ಯಂತ ಜನಪ್ರಿಯವಾಗುವಂಥ ಬಜೆಟ್‌ನ್ನು ೨೦೨೬ ರಲ್ಲಿ ಮಂಡಿಸಲು ಎಲ್ಲ ಪೂರ್ವ ತಯಾರಿಗಳನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಮ್ಮ ಅತಿಥಿ ಉಪನ್ಯಾಸಕರ ಕಲ್ಯಾಣಕ್ಕಾಗಿ, ಸೇವಾ ಭದ್ರತೆ- ಕಾಯ ಮಾತಿಗಾಗಿ ವಿಶೇಷ ಹಣವನ್ನು ಮೀಸಲಿಡುವ ಕೆಲಸವನ್ನು ಮಾಡುತ್ತದೆಯೇ? ಎಂದು ಅತಿಥಿ ಉಪನ್ಯಾಸಕರ ಕುಟುಂಬದ ಹಿಂದೆ ಇರುವ ಬಲು ದೊಡ್ಡ ಸಮುದಾಯ ಕೇಳುತ್ತಿದೆ. ಆದುದರಿಂದ ಸರ್ಕಾರ ಮುಂಬರುವ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಅಥವಾ ಕಾಯಮಾತಿ ನೀಡಬೇಕೆಂದು ಕಂಬಾರ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


